ಲಂಡನ್: ಬ್ರಿಟನ್ ಪ್ರಧಾನಿ ರಿಷಿ ಸುನಾಕ್ (Rishi Sunak) ಅವರ ಪುತ್ರಿ ಅನುಷ್ಕಾ ಸುನಾಕ್ (Anoushka Sunak) ಲಂಡನ್‍ನಲ್ಲಿ (London) ಕೂಚಿಪುಡಿ ( Kuchipudi) ನೃತ್ಯವನ್ನು ಪ್ರದರ್ಶಿಸಿದರು.
ಲಂಡನ್‍ನಲ್ಲಿ ನಡೆದ ರಂಗ್ – ಇಂಟರ್‌ನ್ಯಾಷನಲ್ ಕೂಚಿಪುಡಿ ಡ್ಯಾನ್ಸ್ ಫೆಸ್ಟಿವಲ್ 2022ರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಲವು ಮಕ್ಕಳೊಂದಿಗೆ ಅನುಷ್ಕಾ ಸುನಾಕ್ (9) ನೃತ್ಯ ಮಾಡಿದ್ದಾರೆ. ಈ ವೇಳೆ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸೇರಿದಂತೆ 4- 85 ವರ್ಷ ವಯಸ್ಸಿನ 100 ಕ್ಕೂ ಅಧಿಕ ಕಲಾವಿದರು ಭಾಗಿಯಾಗಿದ್ದರು.
Advertisement
Advertisement
ಕಾರ್ಯಕ್ರಮದಲ್ಲಿ ರಿಷಿ ಸುನಾಕ್ ಪತ್ನಿಯಾದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ, ರಿಷಿ ಸುನಾಕ್ ಅವರ ಪೋಷಕರು ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಇದನ್ನೂ ಓದಿ: ಭಾರತ್ ಜೋಡೋ ಪಾದಯಾತ್ರೆಯಲ್ಲಿ ಮುಗ್ಗರಿಸಿ ಬಿದ್ದ ದಿಗ್ವಿಜಯ್ ಸಿಂಗ್
Advertisement
Advertisement
ಬ್ರಿಟನ್‍ನ 57ನೇ ಪ್ರಧಾನ ಮಂತ್ರಿಯಾಗಿರುವ ರಿಷಿ ಸುನಾಕ್ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ ಮೂಲದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 42 ವರ್ಷದ ರಿಷಿ ಸುನಾಕ್ ಬ್ರಿಟನ್‍ನ ಅತ್ಯಂತ ಕಿರಿಯ ಪ್ರಧಾನಿ ಎನಿಸಿಕೊಂಡಿದ್ದಾರೆ. ಅವರು ತಮ್ಮ ಕಚೇರಿಯಲ್ಲಿ ಗಣೇಶನ ಪ್ರತಿಮೆಯನ್ನು ಇಟ್ಟುಕೊಂಡಿದ್ದಾರೆ. ಇದನ್ನೂ ಓದಿ: ರಾಣಿ ಎಲಿಜಬೆತ್ ಸಾವಿಗೆ ವೃದ್ಧಾಪ್ಯವಲ್ಲ, ಕ್ಯಾನ್ಸರ್ ಕಾರಣವಂತೆ!