ಬ್ರಿಟನ್‌ನಲ್ಲಿ ಹಿಂದೂಗಳೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ರಿಷಿ ಸುನಾಕ್‌, ಪತ್ನಿ ಅಕ್ಷತಾ ಮೂರ್ತಿ

Public TV
2 Min Read
rishi sunak diwali

ಲಂಡನ್‌: ಬ್ರಿಟನ್‌ ಪ್ರಧಾನ ಮಂತ್ರಿ ಹಾಗೂ ಭಾರತದ ಅಳಿಯ ರಿಷಿ ಸುನಕ್ (Rishi Sunak) ಅವರು ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿ ದೀಪಾವಳಿ (Diwali) ಹಬ್ಬ ಆಚರಿಸಿದ್ದಾರೆ.

ಯುಕೆ ಪ್ರಧಾನ ಮಂತ್ರಿ ಕಚೇರಿಯು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಪ್ರಧಾನ ಮಂತ್ರಿ ರಿಷಿ ಸುನಾಕ್ ಅವರು ದೀಪಾವಳಿಗೆ ಹಿನ್ನೆಲೆಯಲ್ಲಿ ಡೌನಿಂಗ್ ಸ್ಟ್ರೀಟ್‌ಗೆ ಹಿಂದೂ ಸಮುದಾಯದ ಅತಿಥಿಗಳನ್ನು ಸ್ವಾಗತಿಸಿದರು. ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯೋತ್ಸವದ ಆಚರಣೆಯಾಗಿದೆ ಎಂದು ಪೋಸ್ಟ್‌ ಮಾಡಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಚಾಕು ಇರಿತ; 11 ದಿನ ಸಾವು-ಬದುಕಿನ ನಡುವೆ ಹೋರಾಡಿದ್ದ ಭಾರತೀಯ ವಿದ್ಯಾರ್ಥಿ ಕೊನೆಯುಸಿರು

Rishi Sunak Akshata Murty

ಈ ವಾರಾಂತ್ಯದಿಂದ ಯುಕೆ ಮತ್ತು ಪ್ರಪಂಚದಾದ್ಯಂತ ಆಚರಿಸುತ್ತಿರುವ ಎಲ್ಲರಿಗೂ ಶುಭ ದೀಪಾವಳಿ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ. ಪೋಸ್ಟ್‌ ಜೊತೆ ದೀಪಾವಳಿ ಆಚರಣೆಯ ಫೋಟೊಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಬ್ರಿಟನ್‌ ಪ್ರಧಾನಿ ರಿಷಿ ಸುನಾಕ್‌ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ದೀಪಗಳನ್ನು ಬೆಳಗಿದ್ದಾರೆ. ಅವರೊಟ್ಟಿಗೆ ಭಾರತ ಮೂಲದ ನಾರಿಯರು ಸಹ ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ದೀಪಾವಳಿ ಶುಭಾಶಯಗಳು ಎಂದು ಪ್ರಧಾನಿ ಕಚೇರಿ ವಿಶ್‌ ಮಾಡಿದೆ. ಇದನ್ನೂ ಓದಿ: ಸಿರಿಯಾದಲ್ಲಿ ಇರಾನ್‌ ಬೆಂಬಲಿತ ಶಸ್ತ್ರಾಸ್ತ್ರ ಘಟಕಗಳ ಮೇಲೆ ಅಮೆರಿಕ ದಾಳಿ – 9 ಮಂದಿ ಸಾವು

ದೀಪಾವಳಿಯು ಹಿಂದೂಗಳ ಹಬ್ಬವಾಗಿದೆ. ಇದು ಕತ್ತಲೆಯ ಮೇಲೆ ಬೆಳಕಿನ ಆಧ್ಯಾತ್ಮಿಕ ವಿಜಯವನ್ನು ಸಂಕೇತಿಸುತ್ತದೆ. ಕೇಡಿನ ವಿರುದ್ಧ ಒಳ್ಳೆಯದರ ಜಯ. ಈ ವರ್ಷ ದೀಪಾವಳಿಯನ್ನು ನವೆಂಬರ್ 12 ರಂದು ಆಚರಿಸಲಾಗುತ್ತದೆ.

ಈಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ರಿಷಿ ಸುನಕ್ ಅವರು ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿ ಬಗ್ಗೆ ಚರ್ಚಿಸಿದ್ದರು. ಭಾರತದಲ್ಲಿ ಈಗ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಉತ್ತಮ ಪ್ರದರ್ಶನಕ್ಕಾಗಿ ಸುನಕ್, ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.

Share This Article