ಲಂಡನ್: ಬ್ರಿಟನ್ ಹಣಕಾಸು ಸಚಿವರಾಗಿದ್ದ ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಬ್ರಿಟನ್ ಪ್ರಧಾನಿ ಗದ್ದುಗೆ ಏರಲು ಇನ್ನೊಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಇಂದು ನಡೆದ 5ನೇ ಸುತ್ತಿನ ಮತದಾನದಲ್ಲಿ 137 ಮತಗಳನ್ನು ಪಡೆಯುವ ಮೂಲಕ ರಿಷಿ ಸುನಕ್ ಮುನ್ನಡೆ ಪಡೆದುಕೊಂಡಿದ್ದಾರೆ.
Advertisement
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸ್ಥಾನಕ್ಕೆ ನಡೆಯುತ್ತಿರುವ ಮತದಾನದ 5ನೇ ಸುತ್ತಿನಲ್ಲಿ ರಿಷಿ ಸುನಕ್ 137 ಮತಗಳನ್ನು ಪಡೆದರೆ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 113 ಮತಗಳನ್ನು ಪಡೆದುಕೊಂಡು ಅಂತಿಮ ಹಂತಕ್ಕೇರಿದ್ದಾರೆ. ಇದನ್ನೂ ಓದಿ: ಅಂತ್ಯಕ್ರಿಯೆಗೆ GST ಸುಳ್ಳೆಂದ ಕೇಂದ್ರ ಸರ್ಕಾರ- ತೆರಿಗೆ ವಾಪಸ್‍ಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ
Advertisement
Advertisement
ಕನ್ಸರ್ವೇಟಿವ್ ಪಕ್ಷದ ನಾಯಕನಾಗುವ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿರುವ ಸುನಕ್ 5ನೇ ಸುತ್ತಿನ ಮತದಾನದಲ್ಲಿ ಮುನ್ನಡೆ ಪಡೆದು ಅಂತಿಮ ಸುತ್ತಿನ ಇಬ್ಬರು ಅಬ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಲಿಜ್ ಟ್ರಸ್ ಮತ್ತು ಸುನಕ್ ನಡುವೆ ಯಾರು ಪ್ರಧಾನಿಯಾಗಿ ಆಯ್ಕೆ ಆಗಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಇದನ್ನೂ ಓದಿ: ಟೋಲ್‍ಗೇಟ್‍ನಲ್ಲಿ ಅಂಬುಲೆನ್ಸ್ ಅಪಘಾತ ಪ್ರಕರಣ- ಸಾವಿನ ಸಂಖ್ಯೆ 4ಕ್ಕೆ ಏರಿಕೆ
Advertisement
Great to see Rishi get such a strong mandate from MPs.
He will now work night and day to win the backing of Conservative members.
Polling shows he is best placed to unite the country and beat Labour at the next election #Ready4Rishi https://t.co/BQAarTyD9P pic.twitter.com/h1HusVEUlA
— Dominic Raab (@DominicRaab) July 20, 2022
3ನೇ ಸುತ್ತಿನ ಮತದಾನದಲ್ಲಿ ಸುನಾಕ್ 115 ಮತಗಳನ್ನು ಪಡೆದಿದ್ದರು. 4ನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದರೆ, 5ನೇ ಸುತ್ತಿನಲ್ಲೂ 137 ಮತಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದು ಪ್ರಧಾನಿ ಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆ. ಇದೀಗ ಉಳಿದಿರುವ ಇಬ್ಬರಲ್ಲಿ ಪಕ್ಷದ ಸಂಸದರಿಂದ 120 ಮತ ಗಳಿಸಿದ ಅಥವಾ ಕನ್ಸರ್ವೇಟಿವ್ ಪಕ್ಷದ ಸಂಸದರ ಮೂರನೇ ಒಂದು ಭಾಗದಷ್ಟು ಮತ ಪಡೆದವರು ಪ್ರಧಾನಿ ಹುದ್ದೆಗೇರಲಿದ್ದಾರೆ.
ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಸೆಪ್ಟೆಂಬರ್ 5ರಂದು ಹೊಸ ನಾಯಕನ ಆಯ್ಕೆಯಾಗುವವರೆಗೂ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಮುಂದುವರಿಯುತ್ತಾರೆ. ಆ ಬಳಿಕ ರಿಷಿ ಸುನಕ್ ಅಥವಾ ಲಿಜ್ ಟ್ರಸ್ ಪ್ರಧಾನಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.