ಲಂಡನ್: ಬ್ರಿಟನ್‌ಗೆ (Britain) ನೂತನ ಪ್ರಧಾನಿಯಾಗಿರುವ (PM) ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರು ಇಂದು 3ನೇ ಕಿಂಗ್ ಚಾರ್ಲ್ಸ್ ಅವರನ್ನು ಬೇಟಿಯಾದ ಗಂಟೆಯೊಳಗೆ ತಮ್ಮ ಜವಾಬ್ದಾರಿಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆಯೇ ಸುನಾಕ್ ತಮ್ಮ ಹೊಸ ಕ್ಯಾಬಿನೆಟ್ (Cabinet) ಅನ್ನು ರಚಿಸಲು ಪೂರ್ವಭಾವಿಯಾಗಿ ಈ ಹಿಂದಿನ ಪ್ರಧಾನಿ ಲಿಜ್ ಟ್ರಸ್ (Liz Truss) ಅವರ ಮಂತ್ರಿಗಳ ತಂಡವನ್ನು ಕೆಳಗಿಳಿಯುವಂತೆ ಕೇಳಿಕೊಂಡಿದ್ದಾರೆ.
Advertisement
ಇಂದು ಸಂಜೆಯ ವೇಳೆಗೆ 2 ನಿರ್ಣಾಯಕ ನೇಮಕಾತಿಗಳನ್ನು ಮಾಡಲಾಗಿದೆ. ಉಪ ಪ್ರಧಾನಿಯಾಗಿ ಡೊಮಿನಿಕ್ ರಾಬ್ ಹಾಗೂ ಹಣಕಾಸು ಮಂತ್ರಿಯಾಗಿ ಜೆರೆಮಿ ಹಂಟ್ ಅವರನ್ನು ನೇಮಿಸಲಾಗಿದೆ. ಅಲ್ಲದೇ ಲಿಜ್ ಟ್ರಸ್ ಸಂಪುಟದಲ್ಲಿ ಗೃಹ ಕಾರ್ಯದರ್ಶಿಯಾಗಿ ನಂತರ ರಾಜೀನಾಮೆ ನೀಡಿದ್ದ ಭಾರತ ಮೂಲದ ಸುಯೆಲ್ಲಾ ಬ್ರೇವರ್‌ಮನ್ (Suella Braverman) ಕೂಡ ಮತ್ತೆ ರಿಷಿ ಸುನಾಕ್ ಕ್ಯಾಬಿನೆಟ್ ಸೇರಲಿದ್ದಾರೆ. ಇದನ್ನೂ ಓದಿ: ಕರ್ನಾಟಕದ ಅಳಿಯ ರಿಷಿ ಸುನಾಕ್ ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಶ್ರೀಮಂತ
Advertisement
Advertisement
ಈವರೆಗೆ ನಾಲ್ವರು ಸಚಿವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಸೂಚಿಸಲಾಗಿದೆ. ಅವರಲ್ಲಿ ವ್ಯಾಪಾರದ ಕಾರ್ಯದರ್ಶಿ ಜಾಕೋಬ್ ರೀಸ್ ಮೊಗ್, ನ್ಯಾಯ ಕಾರ್ಯದರ್ಶಿ ಬ್ರಾಂಡನ್ ಲೂಯಿಸ್, ಪಿಂಚಣಿ ಕಾರ್ಯದರ್ಶಿ ಕ್ಲೋಯ್ ಸ್ಮಿತ್ ಹಾಗೂ ಅಭಿವೃದ್ಧಿ ಸಚಿವ ವಿಕಿ ಫೋರ್ಡ್ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಬ್ರಿಟನ್ ಪ್ರಧಾನಿಯಾಗಿ ಪಟ್ಟ ಅಲಂಕರಿಸಿದ ರಿಷಿ ಸುನಾಕ್ ತಮ್ಮ ಮೊದಲ ಭಾಷಣದಲ್ಲಿ ದೇಶದ ಆರ್ಥಿಕ ಸ್ಥಿರತೆ ಮತ್ತು ಸಾಮರ್ಥ್ಯವನ್ನು ಬಲಪಡಿಸುವುದಾಗಿ ಭರವಸೆ ನೀಡಿದರು. ಈ ಹಿಂದೆ ರಾಜಕೀಯವಾಗಿ ನಡೆದಿದ್ದ ತಪ್ಪುಗಳನ್ನು ಸರಿಪಡಿಸುವುದು ಹಾಗೂ ಜನರ ನಂಬಿಕೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ