ಭಾರತ ಮೂಲದ ರಿಷಿ ಸುನಾಕ್ (Rishi Sunak) ಬ್ರಿಟನ್ ಪ್ರಧಾನಿಯಾಗಿ (Britain PM) ಆಯ್ಕೆಯಾಗಿದ್ದನ್ನು ಭಾರತೀಯರಂತೂ ಇನ್ನಿಲ್ಲದಂತೆ ಸಂಭ್ರಮಿಸಿದ್ದಾರೆ. ನಮ್ಮ ದೇಶದ ಮೂಲದವರೇ ಆದ, ಬಿಳಿಯರಲ್ಲದ ವ್ಯಕ್ತಿಯೊಬ್ಬ ಬ್ರಿಟನ್ ಪ್ರಧಾನಿಯಾಗಿದ್ದಾರೆಂದು ಹೆಮ್ಮೆ ಪಟ್ಟಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಆಳಿದ ನಾಡಿದ ಆಡಳಿತ ಚುಕ್ಕಾಣಿಯನ್ನು ಈಗ ಭಾರತದ ಮೂಲದವರೇ ಹಿಡಿದಿದ್ದಾರೆಂದು ಗರ್ವ ಪಡುತ್ತಿದ್ದಾರೆ ಕೂಡ.
ಸುನಾಕ್ ಪ್ರಧಾನಿಯಾದ ಬೆನ್ನಲ್ಲೇ ಇಂಟರ್‌ನೆಟ್‌ನಲ್ಲಿ ಕೆಲವು ತಮಾಷೆಯ ಮೀಮ್ಸ್‌ಗಳು ಸಹ ಹರಿದಾಡುತ್ತಿವೆ. ಮನೆಯ ಹೊರಗೆ ಚಪ್ಪಲಿಗಳನ್ನು ಬಿಟ್ಟಿರುವುದು (ಸಾಮಾನ್ಯವಾಗಿ ಭಾರತೀಯರು ಮನೆಯ ಒಳಗಡೆ ಚಪ್ಪಲಿ, ಶೂ ಧರಿಸಿ ಹೋಗುವುದಿಲ್ಲ), ಬಾಗಿಲಲ್ಲಿ ಸ್ವಸ್ತಿಕ್ ಮುದ್ರೆ ಇರುವುದು (ಪ್ರಚೀನ ಹಿಂದೂ ಮಂಗಳಕರ ಚಿಹ್ನೆ). ಥೇಟ್ ಭಾರತ ಕ್ರಿಕೆಟ್ ತಂಡದ ಮಾಜಿ ಬೌಲರ್ ಆಶಿಶ್ ನೆಹ್ರಾರಂತೆ ರಿಷಿ ಸುನಾಕ್ ಕಾಣುತ್ತಾರೆ ಎನ್ನುವಂತಹ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಬ್ರಿಟನ್ ನೂತನ ಪ್ರಧಾನಿ ಭಾರತ ಮೂಲದ ರಿಷಿ ಸುನಾಕ್ ಬಗ್ಗೆ ನೀವು ತಿಳಿಯಲೇಬೇಕಾದ ಸಂಗತಿಗಳಿವು
Advertisement
Advertisement
ಆದರೆ ಬ್ರಿಟನ್‌ನ 57ನೇ ಪ್ರಧಾನಿ ರಿಷಿ ಸುನಾಕ್ ಬಗ್ಗೆ ನೀವು ತಿಳಿಯದ ಎಷ್ಟೋ ವಿಷಯಗಳಿವೆ. ಅದನ್ನು ಕೇಳಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ. ಆ ಸೀಕ್ರೆಟ್ ವಿಷಯಗಳೇನು ಗೊತ್ತಾ?
Advertisement
1) ರಿಷಿ ಸುನಾಕ್ ನಿಜವಾಗಿಯೂ ʼಭಾರತೀಯʼ ಅಲ್ಲ
ಸುನಕ್ ತಮ್ಮದು ʼಭಾರತೀಯ ಬೇರು’ ಎಂದು ಕರೆದುಕೊಂಡಿದ್ದಾರೆ. ನೀವು ನೆನಪಿಡಬೇಕು, ಅದು ಸ್ವಾತಂತ್ರ್ಯಪೂರ್ವ, ಅವಿಭಜಿತ ಭಾರತದ ಕಾಲದ್ದು. ಇಂದಿನ ಭಾರತದ್ದಲ್ಲ.
Advertisement
ಪ್ರಧಾನಿ ಸುನಾಕ್ ಕುಟುಂಬವು ಪಂಜಾಬಿ ಖತ್ರಿಯಾಗಿದೆ. ಈಗಿನ ಪಾಕಿಸ್ತಾನದ ಲಾಹೋರ್‌ನ ಉತ್ತರದಲ್ಲಿರುವ ಗುಜ್ರಾನ್‌ವಾಲಾದಲ್ಲಿ ನೆಲಮೂಲದ ಬೇರುಗಳನ್ನು ಹೊಂದಿದೆ. ಕುಟುಂಬದ ಇತಿಹಾಸವನ್ನು ತಿಳಿದಿರುವ ತಜ್ಞರ ಪ್ರಕಾರ, ಸುನಾಕ್ ಅವರ ಅಜ್ಜ ರಾಮದಾಸ್ ಸುನಾಕ್ ಅವರು 1935 ರಲ್ಲಿ ಕೀನ್ಯಾದ ನೈರೋಬಿಗೆ ವಲಸೆ ಹೋದರು. ಅಲ್ಲಿ ಅವರು ಗುಮಾಸ್ತರಾಗಿ ಕೆಲಸ ಮಾಡಿದರು. ರಾಮದಾಸ್ ಅವರ ಪತ್ನಿ, ಸುನಾಕ್ ಅವರ ಅಜ್ಜಿ ಕೂಡ ಗುಜ್ರಾನ್ವಾಲಾದವರು. ಅವರು 1937 ರಲ್ಲಿ ಕೀನ್ಯಾಗೆ ಪ್ರಯಾಣ ಬೆಳೆಸಿದರು. ರಾಮದಾಸ್ ಮತ್ತು ಸುಹಾಗ್ ರಾಣಿ ಸುನಾಕ್ ಅವರಿಗೆ ಆರು ಮಕ್ಕಳಿದ್ದರು. ರಿಷಿ ಸುನಾಕ್ ಅವರ ತಂದೆ ಯಶ್ವೀರ್ 1949 ರಲ್ಲಿ ನೈರೋಬಿಯಲ್ಲಿ ಜನಿಸಿದರು.
ಯಶ್ವೀರ್ ಸುನಾಕ್ 1966 ರಲ್ಲಿ ಲಿವರ್‌ಪೂಲ್‌ಗೆ ತೆರಳಿದರು. ಅವರು ಪಂಜಾಬಿಯ ರಘುಬೀರ್ ಬೆರ್ರಿಯವರ ಮಗಳು ಉಷಾ ಬೆರ್ರಿ ಅವರನ್ನು ವಿವಾಹವಾದರು. ರಿಷಿ ಸುನಾಕ್ 1980 ರಲ್ಲಿ ಯಶ್ವೀರ್ ಮತ್ತು ಉಷಾ ಸುನಾಕ್ ದಂಪತಿ ಪುತ್ರರಾಗಿ ಜನಿಸಿದರು.
ರಿಷಿ ಸುನಾಕ್ 1980 ರಲ್ಲಿ ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜನಿಸಿದರು. ಖಾಸಗಿ ಬೋರ್ಡಿಂಗ್ ಶಾಲೆ, ವಿಂಚೆಸ್ಟರ್ ಕಾಲೇಜ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಆದಾಗ್ಯೂ, ಸುನಕ್ ಅವರು ಹಿಂದೂ ಧರ್ಮವನ್ನು ಅನುಸರಿಸುವ ಬ್ರಿಟನ್‌ನ ಮೊದಲ ಪ್ರಧಾನಿಯಾಗಲಿದ್ದಾರೆ. ಅಲ್ಲದೇ ಬಿಳಿಯರಲ್ಲದ ವ್ಯಕ್ತಿಯಾಗಿದ್ದಾರೆ.
ರಿಷಿ ಸುನಾಕ್ ಕರ್ನಾಟಕದ ಅಳಿಯ. ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವರಿಸಿದ್ದಾರೆ. ಸುನಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ನಡೆಸುತ್ತಿದ್ದ ವೇಳೆ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದರು. ಬಳಿಕ ವೈವಾಹಿಕ ಜೀನವಕ್ಕೆ ಕಾಲಿಟ್ಟ ಸುನಾಕ್ ಹಾಗೂ ಅಕ್ಷತಾ ಮೂರ್ತಿ ದಂಪತಿಗೆ ಕೃಷ್ಣ ಹಾಗೂ ಅನುಷ್ಕಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಇದನ್ನೂ ಓದಿ: ಭಾರತೀಯ ಸಂಜಾತ, ಸುಧಾಮೂರ್ತಿ ಅಳಿಯ ರಿಷಿ ಸುನಾಕ್ ಬ್ರಿಟನ್ ನೂತನ ಪ್ರಧಾನಿ
2) 200 ವರ್ಷಗಳ ನಂತರ ಬ್ರಿಟನ್‌ನ ಅತ್ಯಂತ ಕಿರಿಯ ಪ್ರಧಾನಿ ಸುನಾಕ್
ಸುನಾಕ್‌ಗೆ ಈಗ ಕೇವಲ 42 ವರ್ಷ. ಬ್ರಿಟನ್ ಪ್ರಧಾನಿ ಹುದ್ದೆ ಅಲಂಕರಿಸಿದ ಕಿರಿಯ ವಯಸ್ಸಿನ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಆದರೆ ವಿಲಿಯಂ ಪಿಟ್ ಅವರು 1783 ರಲ್ಲಿ 24ನೇ ವಯಸ್ಸಿನಲ್ಲಿ ಗ್ರೇಟ್ ಬ್ರಿಟನ್‌ನ ಪ್ರಧಾನಿಯಾಗಿದ್ದರು. 1801 ರವರೆಗೆ ಅಧಿಕಾರದಲ್ಲಿದ್ದರು.
3) ಕೇವಲ 7 ವರ್ಷದಲ್ಲಿ ಪ್ರಧಾನಿ ಹುದ್ದೆಗೇರಿದ ವ್ಯಕ್ತಿ
ಸುನಕ್ ಮೊದಲ ಬಾರಿಗೆ ಮೇ 2015 ರಲ್ಲಿ (ರಿಚ್ಮಂಡ್, ಯಾರ್ಕ್ಸ್‌ನ) ಸಂಸದರಾದರು. ಅಕ್ಟೋಬರ್ 2022 ರಲ್ಲಿ ಬ್ರಿಟನ್ ಪ್ರಧಾನ ಮಂತ್ರಿಯಾದರು. 7 ವರ್ಷಗಳ ಅವಧಿಯಲ್ಲಿ ಬಹುಬೇಗ ಪ್ರಧಾನಿ ಹುದ್ದೆಗೇರಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ನಡುವೆ ಖಜಾನೆಯ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರ ಸಂಪುಟದಲ್ಲಿ ಹಣಕಾಸು ಸಚಿವರೂ ಆಗಿದ್ದರು.
ಡೇವಿಡ್ ಕ್ಯಾಮರೂನ್ ಒಂಭತ್ತು ವರ್ಷಗಳ ಅವಧಿಯಲ್ಲಿ ಎಂಪಿಯಿಂದ ಪ್ರಧಾನಿಯಾಗಿದ್ದರು. 2001 ರಲ್ಲಿ ಸಂಸತ್ ಪ್ರವೇಶಿಸಿದ್ದ ಕ್ಯಾಮರೂನ್, ಮೇ 2010 ರಲ್ಲಿ ಪ್ರಧಾನಿಯಾಗಿದ್ದರು. ಪಿಟ್ ದಿ ಯಂಗರ್ ಕೇವಲ ಎರಡು ವರ್ಷಗಳಲ್ಲಿ ಪ್ರಯಾಣ ಮಾಡಿದರು. ಇದನ್ನೂ ಓದಿ: UK ಪ್ರಧಾನಿಯಾದ ರಿಷಿ ಸುನಾಕ್ – ಸಾಮಾಜಿಕ ಜಾಲತಾಣದಲ್ಲಿ ಆಶಿಶ್ ನೆಹ್ರಾ ಫೋಟೋ ಟ್ರೆಂಡ್
4) ಬ್ರಿಟನ್ ರಾಜ 3ನೇ ಚಾರ್ಲ್ಸ್‌ಗಿಂತಲೂ ಸುನಾಕ್ ಶ್ರೀಮಂತ
ಪ್ರಧಾನ ಮಂತ್ರಿ ಸುನಾಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರ ಒಟ್ಟು ಸಂಪತ್ತು 730 ಮಿಲಿಯನ್ ಪೌಂಡ್ (6,919 ಕೋಟಿ) ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇದು ಕಿಂಗ್ 3ನೇ ಚಾರ್ಲ್ಸ್ (King Charles III) ಮತ್ತು ರಾಣಿ ಪತ್ನಿ ಕ್ಯಾಮಿಲ್ಲಾ ಅವರ (300 ಮಿಲಿಯನ್ ಪೌಂಡ್) ಸಂಪತ್ತಿಗಿಂತಲೂ ದುಪ್ಪಟ್ಟು ಎನ್ನಲಾಗಿದೆ. ಸುನಾಕ್ ದಂಪತಿ ಪ್ರಪಂಚದಾದ್ಯಂತ ನಾಲ್ಕು ಆಸ್ತಿಗಳನ್ನು ಹೊಂದಿದ್ದಾರೆ. ಇದು 15 ಮಿಲಿಯನ್ ಪೌಂಡ್‌ಗಿಂತಲೂ ಹೆಚ್ಚು ಮೌಲ್ಯದ್ದಾಗಿದೆ.
5) ಕೋಕಾಕೋಲಾ ಅಂದ್ರೆ ಪ್ರಧಾನಿ ಸುನಾಕ್‌ಗೆ ಪಂಚಪ್ರಾಣ
ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಅವರು ಕೋಕಾಕೋಲಾ ಪ್ರೇಮಿ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ʼಮೆಕ್ಸಿಕನ್ ಕೋಕ್ʼ ಅವರಿಗೆ ತುಂಬಾ ಇಷ್ಟ. 2021ರಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆ ಸುನಾಕ್ ಈ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: 3ನೇ ಕಿಂಗ್ ಚಾರ್ಲ್ಸ್‌ರಿಂದ ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ ನೇಮಕ