ಹೆಚ್.ಡಿ ಕುಮಾರಸ್ವಾಮಿಗೆ ಕಾಳಿ ಸ್ವಾಮೀಜಿ ಧನ್ಯವಾದ

Public TV
1 Min Read
HDK KALISWAMIJI

ನೆಲಮಂಗಲ: ಮುಸ್ಲಿಮರು ರಚನೆ ಮಾಡಿದ ವಿಗ್ರಹಕ್ಕೆ ಹಿಂದೂಗಳು ಪೂಜೆ ಎಂಬ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಹಿನ್ನೆಲೆ ಇಂದು ನೆಲಮಂಗಲದಲ್ಲಿ ಕಾಳಿ ಶ್ರೀ ಋಷಿಕುಮಾರ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ನಮಗೆ ತಿಳಿಯದ ವಿಷಯವನ್ನು ಮಾಜಿ ಸಿಎಂ ತಿಳಿಸಿಕೊಟ್ಟಿದ್ದಾರೆ. ವಿಗ್ರಹ ಆರಾಧನೆ ಮಾಡುವ ಕ್ರಮ ಮುಸ್ಲಿಮರಲ್ಲಿ ಇಲ್ಲ. ಹಿಂದೂ ಸಂಸ್ಕೃತಿಯಲ್ಲಿ ಆಗಮ ಪರಂಪರೆ ಇದೆ. ಆದರೆ ಮುಸ್ಲಿಮರಲ್ಲಿ ಎಲ್ಲಿದೆ..? ಮೂರ್ತಿ ಕೆತ್ತುವ ವರ್ಗವೇ ಹಿಂದೂಗಳಲ್ಲಿ ಇದೆ. ಮಹಮ್ಮದೀಯರು ವಿಗ್ರಹ ಕೆತ್ತನೆ ಮಾಡಿರುವುದು ನಿಜವೇ..?. ಮಹಮ್ಮದೀಯರಿಂದ ವಿಗ್ರಹ ಖರೀದಿ ಮಾಡಿದ್ದರೆ ಎಚ್ಚರಿಕೆಯಿಂದ ಇರಿ, ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದರೆ, ಊರಿಗೆ ಕೇಡು ಸಂಭವಿಸುತ್ತದೆ ಎಂದರು.

KALISWAMIJI 2

ಒಂದು ವೇಳೆ ಮಹಮ್ಮದೀಯರ ಕೆತ್ತನೆ ಮಾಡಿದ ವಿಗ್ರಹ ಇದ್ದರೆ ಅದನ್ನು ಬಳಸಬಾರದು. ಶ್ರೀರಂಗಪಟ್ಟಣದಲ್ಲಿ ವಿಗ್ರಹ ಕೆತ್ತನೆ ಬಗ್ಗೆ ಮಾಹಿತಿ ನೀಡಿದ್ದು ಸ್ವಾಗತಾರ್ಹ. ಇಂತಹ ಮಾಹಿತಿ ನಮಗೆ ಅವಶ್ಯಕತೆ ಇದೆ ಅದನ್ನು ಮಾಜಿ ಸಿಎಂ ತಿಳಿಸಿಕೊಟ್ಟಿರುವುದು ಸ್ವಾಗತಾರ್ಹ ಪರೋಕ್ಷವಾಗಿ ನಮಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ವ್ಲಾಡಿಮಿರ್‌ ಪುಟಿನ್ ಪುತ್ರಿಯರನ್ನೂ ಟಾರ್ಗೆಟ್‌ ಮಾಡ್ತಿದೆ ಅಮೆರಿಕ- ಯಾಕೆ ಗೊತ್ತಾ?

KALISWAMIJI 1

ನಮ್ಮ ದೇವಾಲಯದ ಮುಂದೆ ಕುಂಕುಮ ಹಚ್ಚಿಕೊಳ್ಳದವರು ಮಾರಾಟ ಮಾಡುತ್ತಾರೆ. ಮಾರಾಟ ಮಾಡುವುದೇ ಬೇರೆ, ಪೂಜಾ ವಿಧಾನವೇ ಬೇರೆ, ಯಾರು ಮಹಮ್ಮದೀಯರು ಕೆತ್ತನೆ ಮಾಡಿದ ವಿಗ್ರಹ ಬಳಸಬಾರದು. ಒಂದು ವೇಳೆ ಬಳಸಿದರೂ ಋತ್ವಿಕರ ಕೈಯಲ್ಲಿ ಮತ್ತೆ ಪರಿಶೀಲಿಸಿ ಎಂದು ಕಾಳಿಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *