ಕಾಂತಾರ ಸಿನಿಮಾ ಬಿಡುಗಡೆಯಾದ ದಿನದಿಂದ ಈವರೆಗೂ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ. ಅದರಲ್ಲಿ ವಿವಾದಗಳು ಕೂಡ ಸೇರಿಕೊಂಡಿವೆ. ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎನ್ನುವಂತೆ ಕಾಂತಾರ ಬಗ್ಗೆ ರಿಷಬ್ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನ ಇಬ್ಬರು ನಿರ್ದೇಶಕರು ಮಾತ್ರ ಒಬ್ಬರನ್ನೊಬ್ಬರು ಕಾಲೆಳೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ಶುರು ಮಾಡಿದ್ದಾರೆ.
ಕನ್ನಡ ಚಿತ್ರೋದ್ಯಮದಲ್ಲಿ ಕಾಂತಾರ 2 ಸಿನಿಮಾ ಬಗ್ಗೆ ಮಾತುಗಳು ಶುರುವಾಗಿದ್ದರೆ, ಬಾಲಿವುಡ್ ನಲ್ಲಿ ಕಾಂತಾರ ಸಿನಿಮಾದ ಬಗ್ಗೆಯೂ ಇನ್ನೂ ಚರ್ಚೆ ಶುರುವಾಗಿದೆ. ಸದ್ಯಕ್ಕೆ ಕಾಂತಾರ 2 ಸಿನಿಮಾ ಮಾಡುವುದಿಲ್ಲ ಎಂದು ರಿಷಬ್ ಶೆಟ್ಟಿ ಹೇಳುವ ಮೂಲಕ ಮೌನಕ್ಕೆ ಜಾರಿದ್ದಾರೆ. ಆದರೆ, ಬಾಲಿವುಡ್ ನಿರ್ದೇಶಕರಾದ ಅನುರಾಗ್ ಕಶ್ಯಪ್ ಮತ್ತು ದಿ ಕಾಶ್ಮೀರ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ‘ಕಾಂತಾರ’ದ ವಿಚಾರವಾಗಿಯೇ ಸಾಮಾಜಿಕ ಜಾಲತಾಣದಲ್ಲಿ ರಾಡಿ ಎಬ್ಬಿಸಿದ್ದಾರೆ. ಇದನ್ನೂ ಓದಿ: ಪರಪುರುಷನನ್ನು ಮನೆಗೆ ಕರೆತರುತ್ತಿದ್ದರು, ಚಿತ್ರಹಿಂಸೆ ನೀಡುತ್ತಿದ್ದರು: ಖ್ಯಾತನಟಿ ಅಭಿನಯ ಅತ್ತಿಗೆ ಕಣ್ಣೀರು
ಗೆದ್ದ ಚಿತ್ರಗಳ ಅನುಕರಣೆ ಮಾದರಿಯಾದದ್ದು ಅಲ್ಲ, ಗೆದ್ದ ಚಿತ್ರಗಳ ಫಾರ್ಮುಲಾಗಳ ಹಿಂದೆ ಬಿದ್ದ ಬಾಲಿವುಡ್ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕಾಂತಾರ, ಪುಷ್ಪ, ಕೆಜಿಎಫ್ 2 ರೀತಿಯ ಸಿನಿಮಾಗಳನ್ನು ಅನುಕರಿಸದಂತೆ ಅನುರಾಗ್ ಕಶ್ಯಪ್ ಸಂವಾದವೊಂದರಲ್ಲಿ ಹೇಳಿದ್ದರು. ಅವರ ಮಾತಿನ ಹಿಂದಿನ ಉದ್ದೇಶ ಗೆದ್ದ ಚಿತ್ರಗಳ ಮಾದರಿಯನ್ನು ಅನುಸರಿಸದೇ ಹೊಸ ರೀತಿಯ ಚಿತ್ರಗಳನ್ನು ಮಾಡಬೇಕು ಎನ್ನುವುದಾಗಿತ್ತು. ಆದರೆ, ವಿವೇಕ್ ಅಗ್ನಿಹೋತ್ರಿ ಅದನ್ನು ಅರ್ಥ ಮಾಡಿಕೊಳ್ಳದೇ ಇನ್ನೇನೊ ಕಾಮೆಂಟ್ ಮಾಡಿ ಚರ್ಚೆಗೆ ತಿದಿ ಒತ್ತಿದ್ದಾರೆ.
ಅನುರಾಗ್ ಕಶ್ಯಪ್ ಅವರ ಮಾತನ್ನು ನಾನು ಒಪ್ಪುವುದಿಲ್ಲ. ಬಾಲಿವುಡ್ ಹಿನ್ನೆಡೆಗೆ ಅದು ಕಾರಣವಲ್ಲ ಎಂದು ಟಾಂಗ್ ನೀಡಿರುವ ವಿವೇಕ್ ಅಗ್ನಿಹೋತ್ರಿ, ಫಾಲೋವರ್ಸ್ ನಿಂದಲೇ ಪಾಠ ಮಾಡಿಸಿಕೊಂಡಿದ್ದಾರೆ. ಅನುರಾಗ್ ಹೇಳಿದ್ದನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹೆಡ್ ಲೈನ್ ನೋಡಿ ಕನ್ಫ್ಯೂಸ್ ಮಾಡಿಕೊಂಡಿರುವ ವಿವೇಕ್, ಈ ಮೂಲಕ ನೆಟ್ಟಿಗರ ತಮಾಷೆಯ ವಸ್ತುವಾಗಿದ್ದಾರೆ.