ಓದಿದ ಕೆರಾಡಿ ಶಾಲೆ ದತ್ತು ಪಡೆದ ರಿಷಬ್ ಶೆಟ್ಟಿ

Public TV
2 Min Read
Rishab Shetty 2

ರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಬ್ ಶೆಟ್ಟಿ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ

Rishab Shetty 1

ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿನೀಡಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಊರ ಪ್ರಮುಖರು,ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಬ್ ಶೆಟ್ಟಿಯವರನ್ನು ಅಭಿನಂದಿಸಿದರು.

kantara 7

ಕಾಂತರದಲ್ಲಿ ಬ್ಯುಸಿ

ರಿಷಬ್ ಸದ್ಯ ಕಾಂತಾರ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವಿವ್ಸ್ಯೂ ಪಡೆಯುತ್ತಿದ್ದು, ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ.

Kantara 1 2

ಕಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿತ್ತು.

ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

Share This Article