ಸಿನಿ ಜಗತ್ತಿನಲ್ಲಿ ಧೂಳೆಬ್ಬಿಸುತ್ತಿರುವ `ಕಾಂತಾರ’ (Kantara) ಸಿನಿಮಾ (Cinema) ಭರ್ಜರಿ ಕಮಾಲ್ ಮಾಡ್ತಿದೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕಾಂತಾರ ಸಿನಿಮಾದ ಭೂತಾರಾಧನೆಯ ಬಗ್ಗೆ ವಿವಾದವೊಂದು ಹುಟ್ಟಿಕೊಂಡ ಬೆನ್ನಲ್ಲೇ ಸಾರ್ವಜನಿಕರು ಸಿನಿಮಾ ನೋಡುತ್ತಾ ಓ.. ಎಂದು ಕೂಗುವುದಕ್ಕೆ ರಿಷಬ್ ಶೆಟ್ಟಿ (Rishabh Shetty) ಪ್ರತಿಕ್ರಿಯಿಸಿದ್ದಾರೆ.
Advertisement
ಕಾಂತಾರ ಸಿನಿಮಾದಲ್ಲಿ ದೈವ ಆವಾಹಿಸಿದ ಸಂದರ್ಭದಲ್ಲಿ ಕೋಲ ಆಡುವ ಪಾತ್ರಧಾರಿಗಳು ಓ.. ಎಂದು ಕೂಗುತ್ತಾರೆ. ಈ ಶಬ್ಧ ಕೇಳಿ ಬಂದಾಗಲೆಲ್ಲಾ ಥಿಯೇಟರ್‌ಗಳಲ್ಲಿ ಪ್ರೇಕ್ಷಕರು ಕೂಡ ಓ ಎಂದು ಕೂಗ್ತಾರೆ. ಥಿಯೇಟರ್‌ನಿಂದ ಹೊರ ಬಂದಾಗಲೂ ಓ ಎಂದು ಕೂಗುವವರ ಸಂಖ್ಯೆ ಹೆಚ್ಚಿದೆ. ಇದನ್ನು ಗಮನಿಸಿದ ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty), ಕಾಂತಾರ ಸಿನಿಮಾ ವೀಕ್ಷಕರಲ್ಲಿ ಒಂದು ವಿನಂತಿ.. ದಯವಿಟ್ಟು ಯಾರೂ ಕೂಡ ಈ ಸಿನಿಮಾದಲ್ಲಿ ಉಪಯೋಗಿಸಿದ ಶಬ್ಧವನ್ನು ಅನುಕರಿಸಬೇಡಿ.. ಇದೊಂದು ಆಚಾರ.. ಇದೊಂದು ಆಧ್ಯಾತ್ಮಿಕ ನಂಬಿಕೆ.. ಇದೊಂದು ಸೂಕ್ಷ್ಮವಾದ ಧಾರ್ಮಿಕ ವಿಚಾರ.. ಇದು ಸಂಪ್ರದಾಯಕ್ಕೆ ಧಕ್ಕೆ ಉಂಟು ಮಾಡಬಹುದು.. ಸುಮ್ ಸುಮ್ನೆ ಓ ಎಂದು ಕೂಗಬೇಡಿ ಅಂತಾ ಮನವಿ ಮಾಡ್ಕೊಂಡಿದ್ದಾರೆ. ಇದನ್ನೂ ಓದಿ: ‘ಕಾಂತಾರ’ ಚಿತ್ರವನ್ನು ಡೈರೆಕ್ಟ್ ಆಗಿ ಆಸ್ಕರ್ ಗೆ ಕಳುಹಿಸಿ: ಕಂಗನಾ ರಣಾವತ್
Advertisement
Advertisement
ಕಾಂತಾರ ಸಿನಿಮಾವನ್ನು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಂಗಳೂರಿನಲ್ಲಿ ವೀಕ್ಷಣೆ ಮಾಡಿದ್ದಾರೆ. ಕಾಂತಾರವನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ಮೆಚ್ಚಿದ್ದಾರೆ. ಸಿನಿಮಾ ಅಂದ್ರೆ ಹೇಗಿರಬೇಕು ಅನ್ನೋದಕ್ಕೆ ಕಾಂತಾರ ಉದಾಹರಣೆ. ಈ ಸಿನಿಮಾದ ಫೀಲ್‌ನಿಂದ ಹೊರಗೆ ಬರಲು ನನಗೆ ಒಂದು ವಾರ ಹಿಡಿಸಬಹುದು. ಈಗ್ಲೂ ನನ್ನ ಶರೀರ ನಡುಗುತ್ತಿದೆ. ಇದೊಂದು ಅದ್ಭುತವಾದ ಅನುಭವ. ರಿಷಬ್ ಶೆಟ್ಟಿಗೆ ಹ್ಯಾಟ್ಸಾಫ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳ ಮೂಲಕ ಅಪ್ಪು ಇನ್ನೂ ಜೀವಂತವಾಗಿದ್ದಾರೆ: ನಟಿ ರಮ್ಯಾ
Advertisement
ಈ ಮಧ್ಯೆ ಕಾಂತಾರ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಅರ್ಹ ಎಂಬ ಕ್ಯಾಂಪೇನ್ ದೇಶಾದ್ಯಂತ ಸದ್ದು ಮಾಡ್ತಿದೆ.