CinemaKarnatakaLatestMain PostSandalwood

‘ಸಾಧನೆಯ ಬೆನ್ನೆಲುಬು’ ಎಂದು ಹೆಂಡತಿ ಜೊತೆಗಿನ ಫೋಟೋ ಹಂಚಿಕೊಂಡ ರಿಷಬ್ ಶೆಟ್ಟಿ

ಕಾಂತಾರ (Kantara) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಿ, ನಟಿಸಿದ್ದರೆ ಅವರ ಪತ್ನಿ ಪ್ರಗತಿ ಶೆಟ್ಟಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಹಾಗಾಗಿ ಈ ಗೆಲುವನ್ನು ಮತ್ತು ತಮ್ಮ ಸಾಧನೆಯನ್ನು ಪತ್ನಿಗೆ ಅರ್ಪಿಸಿದ್ದಾರೆ ರಿಷಬ್. ತಮ್ಮ ಸಾಧನೆಯ ಬೆನ್ನೆಲುಬಾಗಿ ನಿಂತಿರುವ ಪತ್ನಿಯ ಜೊತೆಗಿನ ಫೋಟೋ ಕೂಡ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಗತಿ ಶೆಟ್ಟಿ (Pragati Shetty) ಅವರನ್ನು ಮೊದಲ ಬಾರಿಗೆ ಭೇಟಿಯಾದ ಫೋಟೋ ಮತ್ತು ಇಂದು ಕಾಂತಾರ ಸಕ್ಸಸ್ ವೇಳೆಯಲ್ಲಿ ವಿಮಾನದಲ್ಲಿ ಹಾರಾಟ ಮಾಡುತ್ತಿರುವ ಫೋಟೋ ಎರಡನ್ನೂ ಹಂಚಿಕೊಂಡಿರುವ ರಿಷಬ್, ತಮ್ಮ ಗೆಲುವಿಗೆ ಪ್ರಗತಿ ಕೂಡ ಕಾರಣವೆಂದು ಹೆಂಡತಿಯನ್ನು ಹಾಡಿ ಹೊಗಳಿದ್ದಾರೆ. ಪತ್ನಿಯ ಸಹಾಯವನ್ನು ಕೊಂಡಾಡಿದ್ದಾರೆ. ಇದನ್ನೂ ಓದಿ:ದಆಮೀರ್‌ ಖಾನ್‌ ತಾಯಿಗೆ ಹೃದಯಾಘಾತ

ಬಾಲಿವುಡ್ ನಲ್ಲಿ ಕಾಂತಾರ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಾಕ್ಸ್ ಆಫೀಸಿನಲ್ಲೂ (Box Office) ಕೂಡ ಅದು ಹಿಂದೆ ಬಿದ್ದಿಲ್ಲ. ಈವರೆಗೂ ಚಿತ್ರದಿಂದ ಅಂದಾಜು 50 ಕೋಟಿ ಬಂದಿದೆ ಎಂದು ಹೇಳಲಾಗುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಲ್ಲೂ 45 ರಿಂದ 50 ಕೋಟಿ ಬಂದಿರಬಹುದು ಎನ್ನಲಾಗುತ್ತಿದೆ. ಆದರೆ, ನಿರ್ಮಾಪಕರಾಗಲಿ ಅಥವಾ ವಿತರಕರಾಗಲಿ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ.

ಕನ್ನಡದಲ್ಲೂ ಅಂದಾಜು ನೂರೈವತ್ತು ಕೋಟಿಗೂ ಅಧಿಕ ಹಣ ಮಾಡಿದರೆ, ಇತರ ಭಾಷೆಗಳಲ್ಲೂ ನೂರಾರು ಕೋಟಿ ಬಾಚಿದೆ. ಪ್ರತಿ ಭಾಷೆಯಲ್ಲೂ ಕನ್ನಡದ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಬಾಕ್ಸ್ ಆಫೀಸ್ ಕೂಡ ಧೂಳಿಪಟವಾಗಿದೆ. ಈ ಹೊತ್ತಿನಲ್ಲಿ ರಿಷಬ್ ಶೆಟ್ಟಿ ವಿಮಾನದಲ್ಲಿ ಓಡಾಡುತ್ತಿರುವ ಫೋಟೋವನ್ನು ಹೊಂಬಾಳೆ ಫಿಲ್ಮ್ಸ್ (Hombale Films) ಹಂಚಿಕೊಂಡಿದೆ.

ಇತ್ತೀಚೆಗಷ್ಟೇ ರಿಷಬ್ (Rishabh Shetty) ಆಡಿ ಕಾರು ತಗೆದುಕೊಂಡಿದ್ದರು. ಆ ಫೋಟೋ ಕೂಡ ಸಖತ್ ವೈರಲ್ ಆಗಿತ್ತು. ಇದೀಗ ರಿಷಬ್ ಅವರು ವಿಮಾನದಲ್ಲಿ ಅದರಲ್ಲೂ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ‘ಬಡವ್ರ ಮಕ್ಕಳು ಬೆಳಿಬೇಕು’ ಹೆಸರಿನಲ್ಲಿ ಟ್ರೋಲ್ ಕೂಡ ಮಾಡಲಾಗುತ್ತಿದೆ. ಸಾಕಷ್ಟು ಜನರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.

ಬಡವರ ಮಕ್ಕಳು ಬೆಳಿಬೇಕು ಎನ್ನುವ ಮಾತು ಡಾಲಿ ಧನಂಜಯ್ ಅವರದ್ದು. ಆ ಮಾತನ್ನು ರಿಷಬ್ ಶೆಟ್ಟಿಗೆ ಬಳಸಿಕೊಂಡು ಡಾಲಿಗೆ ಟಾಂಗ್ ಕೊಡಲಾಗುತ್ತಿದೆ. ವಿಮಾನದಲ್ಲಿ ಪ್ರಯಾಣದ ಮಾಡುತ್ತಿರುವ ರಿಷಬ್ ಶೆಟ್ಟಿ ಫೋಟೋಗೆ ಡಾಲಿ ಹೊಡೆದ ಡೈಲಾಗ್ ಅನ್ನು ಸೇರಿಸಿ ಟ್ರೋಲ್ ಮಾಡಲಾಗುತ್ತಿದೆ.

ಕಾಂತಾರ ಸಿನಿಮಾ ಮಾಡುತ್ತಿರುವ ಮೋಡಿ ಅಷ್ಟಿಷ್ಟಲ್ಲ. ರಿಷಬ್ ಶೆಟ್ಟಿ ಭಾರತದಾದ್ಯಂತ ಸುತ್ತುವಂತಾಗಿದೆ. ಎಲ್ಲ ಕಡೆ ಪ್ರಯಾಣ ಮಾಡಲು ಅವರಲ್ಲಿ ವೇಳೆಯಿಲ್ಲ. ಹಾಗಾಗಿ ಹೊಂಬಾಳೆ ಫಿಲ್ಮ್ಸ್ ನವರು ಬಾಡಿಗೆ ಖಾಸಗಿ ವಿಮಾನ ಬುಕ್ ಮಾಡಿ, ರಿಷಬ್ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಯಶ್ ಅವರಿಗೂ ಹಾಗೆಯೇ ಮಾಡಿತ್ತು ಹೊಂಬಾಳೆ ಫಿಲ್ಮ್ಸ್. ಹಾಗಾಗಿ ಇದು ರಿಷಬ್ ಖರೀದಿಸಿದ ವಿಮಾನವಲ್ಲ ಎನ್ನುವುದು ಸ್ಪಷ್ಟನೆ ವಿಚಾರ.

Live Tv

Leave a Reply

Your email address will not be published. Required fields are marked *

Back to top button