ಕಾಂತಾರ (Kantara) ಚಿತ್ರ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಸರಕಾರದ ಮುಂದೆ ಹಳೆ ಬೇಡಿಕೆಯನ್ನೇ ಇಟ್ಟಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಆಗಬೇಕು ಎಂದು ಹಲವಾರು ಬಾರಿ ಚರ್ಚೆಯಾಗಿದೆ. ಆನಂತರ ರಾಮನಗರ, ಮೈಸೂರು ಹೇಗೆ ಮಾತಿನಲ್ಲೇ ಫಿಲ್ಮ್ ಸಿಟಿ ಸುತ್ತಾಡಿ ಬಂದಿದೆ. ಇದೀಗ ಮತ್ತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ (Film City)ಆಗಬೇಕು ಎಂದು ರಿಷಬ್ ಒತ್ತಾಯಿಸಿದ್ದಾರೆ.
Advertisement
ಕೇಂದ್ರ ಸರಕಾರ (Govt) ಆಯೋಜಿಸಿದ್ದ ಭಾರತದ ಯುವಜನತೆಯ ಕುರಿತಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಿಷಬ್, ‘ಬೆಂಗಳೂರಿನಲ್ಲೇ ಫಿಲ್ಮ್ ಸಿಟಿ ಆಗಲಿ. ಫಿಲ್ಮ್ ಸಿಟಿ ಅವಶ್ಯಕತೆ ಬೆಂಗಳೂರಿನಲ್ಲೇ ಹೆಚ್ಚಿದೆ. ಫಿಲ್ಮ್ ಸಿಟಿ ಎನ್ನುವುದು ಚಿತ್ರೋದ್ಯಮದ ಕನಸು. ಇನ್ನೂ ಆ ಕನಸು ಈಡೇರಿಲ್ಲ’ ಎಂದಿದ್ದಾರೆ ರಿಷಬ್. ಇದನ್ನೂ ಓದಿ:ಬಾಯ್‌ಫ್ರೆಂಡ್ ಖಾಸಗಿ ಫೋಟೋ ಶೇರ್ ಮಾಡಿದ ಮಲೈಕಾ- ಅರ್ಜುನ್ ಕಪೂರ್ ಟ್ರೋಲ್
Advertisement
Advertisement
ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಆಯೋಜಿಸಿದ್ದ 9ನೇ ಸೇವಾ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದ ಪ್ಯಾನೆಲಿಸ್ಟ್ ಆಗಿ ಹೋಗಿದ್ದ ರಿಷಬ್, ಸಿನಿಮಾ ರಂಗದ ಬಗ್ಗೆ ಅನೇಕ ವಿಷಯಗಳನ್ನೂ ಹೊರಹಾಕಿದ್ದಾರೆ. ಪ್ರೇಕ್ಷಕರನ್ನು ತಲುಪುವ ಬಗೆಯ ಬಗ್ಗೆಯೂ ಅವರು ಮಾತನಾಡಿದ್ದಾರೆ.