ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಸಿನಿಮಾ ಮಾರ್ಟಿನ್ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಪ್ಟಂಬರ್ 30ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ದೇಶಕ ಎ.ಪಿ. ಅರ್ಜುನ್ ಏಪ್ರಿಲ್ 10 ರಂದೇ ಟೀಸರ್ ಮೂಲಕ ಹೇಳಿದ್ದರು. ಇದೀಗ ಅದೇ ದಿನದಂದೇ ಕನ್ನಡದ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದು ಕೂಡ ನಿರೀಕ್ಷಿತ ಸಿನಿಮಾವಾಗಿರುವುದರಿಂದ ಒಂದು ರೀತಿ ಪೈಪೋಟಿ ನಡೆಯಲಿದೆ. ಇದನ್ನೂ ಓದಿ : ಹಾಸ್ಯನಟ ನರಸಿಂಹರಾಜು ಹಿರಿಯ ಪುತ್ರಿ, ನಿರ್ದೇಶಕ ಅರವಿಂದ್ ತಾಯಿ ಧರ್ಮವತಿ ನಿಧನ
Advertisement
ಹೊಂಬಾಳೆ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ, ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಕಾಂತಾರ’ ಸಿನಿಮಾದ ದಿನಾಂಕವನ್ನು ನಿನ್ನೆ ಘೋಷಣೆ ಮಾಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು. ಈ ಸಿನಿಮಾ ಕೂಡ ಸೆಪ್ಟಂಬರ್ 30 ರಂದೇ ದೇಶದಾದ್ಯಂತ ತೆರೆ ಕಾಣುತ್ತಿದೆ. ಹೀಗಾಗಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ
Advertisement
Advertisement
ಮಾರ್ಟಿನ್ ಎ.ಪಿ ಅರ್ಜುನ್ ಮತ್ತು ಧ್ರುವ ಕಾಂಬಿನೇಷನ್ ನ ಎರಡನೇ ಸಿನಿಮಾ. ಈಗಾಗಲೇ ಈ ಜೋಡಿ ಗೆದ್ದಿದೆ. ಅಲ್ಲದೇ, ಧ್ರುವ ಸರ್ಜಾ ಅವರು ಸಿನಿಮಾ ಮಾಡುವುದೇ ಕಡಿಮೆ. ಹಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಈ ಸಿನಿಮಾದಲ್ಲಿ ಅದ್ಭುತ ಆಕ್ಷನ್ ಸನ್ನಿವೇಶಗಳು ಇವೆಯಂತೆ. ಈ ಚಿತ್ರಕ್ಕಾಗಿ ಧ್ರುವ ಭರ್ಜರಿ ತಯಾರಿಯನ್ನೂ ಮಾಡಿಕೊಂಡಿದ್ದಾರಂತೆ. ಹೀಗಾಗಿ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
Advertisement
ಕನ್ನಡ ಸಿನಿಮಾ ರಂಗದ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ರಿಷಭ್ ಶೆಟ್ಟಿ ಅವರದ್ದು. ವಿಭಿನ್ನ ಸಿನಿಮಾಗಳನ್ನು ಮಾಡುವುದರಿಂದ, ಇವರದ್ದೇ ಆದ ನೋಡುಗ ಬಳಗವಿದೆ. ಅಲ್ಲದೇ, ಕಾಂತಾರ ಸಿನಿಮಾದ ಟ್ರೈಲರ್ ಕೆಜಿಎಫ್ 2 ಸಿನಿಮಾ ರಿಲೀಸ್ ವೇಳೆ ಬಿಡುಗಡೆ ಆಗುತ್ತು. ಅದಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಕೂಡ ಚೆನ್ನಾಗಿಯೇ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಎರಡೂ ಸಿನಿಮಾಗಳಲ್ಲಿ ಪ್ರೇಕ್ಷಕ ಅತೀ ಹೆಚ್ಚು ಯಾವ ಚಿತ್ರಕ್ಕೆ ಕೈ ಹಿಡಿಯಲಿದ್ದಾನೆ ನೋಡಬೇಕು.