ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ರಿಷಭ್ ಶೆಟ್ಟಿ ಸದ್ಯ ಕಾಂತರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದರೂ, ಈ ನಡುವೆ ಸದ್ದಿಲ್ಲದೇ ತೆಲುಗು ಸಿನಿಮಾದಲ್ಲೂ ನಟಿಸಿ ಬಂದಿದ್ದಾರೆ. ‘ಮಿಷನ್ ಇಂಪಾಸಿಬಲ್’ ಹೆಸರಿನಲ್ಲಿ ಮೂಡಿ ಬಂದಿರುವ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಆನಂತರವೇ ಅವರು ತೆಲುಗಿಗೆ ಹಾರಿದ ಸುದ್ದಿ ಪಕ್ಕಾ ಆಗಿದೆ. ಇದನ್ನೂ ಓದಿ : ಹಿಂದಿ ಆಯ್ತು, ಇದೀಗ ಮರಾಠಿಯಲ್ಲೂ ಕನ್ನಡದ ದಿಯಾ
Advertisement
ರಿಲೀಸ್ ಆಗಿರುವ ಟ್ರೇಲರ್ ಗಮನಿಸಿದರೆ, ಅದೊಂದು ಪಕ್ಕಾ ಕಾಮಿಡಿ ಮಾದರಿಯ ಸಿನಿಮಾ ಎನಿಸುತ್ತಿದೆ. ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂ ಅರೆಸ್ಟ್ ಮಾಡಿದರೆ ಮೂರು ಲಕ್ಷ ರೂಪಾಯಿ ಸಿಗುತ್ತದೆ ಎನ್ನುವ ಕಾರಣಕ್ಕೆ ಮೂವರು ಮಕ್ಕಳು ಅವನ ಹಿಂದೆ ಬೀಳುವುದು. ಆ ಮೂವರು ಮಕ್ಕಳ ಕೀಟಲೆ ಹೀಗೆ ಟ್ರೇಲರ್ ಸಾಗುತ್ತದೆ. ಇದನ್ನೂ ಓದಿ : ಸಿಂಬು ನಟನೆಯ ಚಿತ್ರಕ್ಕೆ ಐಶ್ವರ್ಯ ರಜನೀಕಾಂತ್ ನಿರ್ದೇಶಕಿ
Advertisement
Advertisement
ಅಂದಹಾಗೆ ಈ ಸಿನಿಮಾದಲ್ಲಿ ರಿಷಭ್ ಶೆಟ್ಟಿ ಕಲೀಲ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಕಲೀಲ ಯಾರು? ಇವನ ಹಿನ್ನೆಲೆ ಏನು? ಇವನಿಂದ ಏನೆಲ್ಲ ಸಾಧ್ಯ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮಹತ್ವದ ಪಾತ್ರವಂತೂ ಆಗಿರುತ್ತದೆ. ಇದನ್ನೂ ಓದಿ : ಅಂದು ಸುದೀಪ್ ಪುಸ್ತಕ ಬಿಡುಗಡೆ ಮಾಡಿದ್ದ ಪುನೀತ್, ಇಂದು ಪುನೀತ್ ಪುಸ್ತಕ ಬಿಡುಗಡೆ ಮಾಡಿದ ಸುದೀಪ್
Advertisement
ಸಿನಿಮಾದ ಹೆಸರು ಮಿಷನ್ ಇಂಪಾಸಿಬಲ್ ಅಂತ ಇಟ್ಟಿದ್ದರೂ, ಕನ್ನಡದ ಅನೇಕ ನಂಟುಗಳನ್ನು ಈ ಸಿನಿಮಾ ಹೊಂದಿದೆ. ರಿಷಭ್ ಪಾತ್ರದ ಶೂಟಿಂಗ್ ಬೆಂಗಳೂರಿನಲ್ಲೇ ನಡೆದಿದೆ. ಕನ್ನಡದ ಭಾರೀ ಬಜೆಟ್ ಸಿನಿಮಾ ಕೆಜಿಎಫ್ ನ ಪ್ರಸ್ತಾಪ ಕೂಡ ಸಿನಿಮಾದಲ್ಲಿ ಆಗಿದೆ. ಈ ತೆಲುಗಿನಲ್ಲಿ ಸಿನಿಮಾದಲ್ಲಿ ತಾಪಸ್ಸಿ ಪನ್ನು ನಾಯಕಿ. ಉಳಿದಂತೆ ತೆಲುಗಿನ ನಟರೇ ತಾರಾಗಣದಲ್ಲಿ ಇದ್ದಾರೆ.