ಅಡಿಲೇಡ್: ಟೀಂ ಇಂಡಿಯಾ ವಿಕೆಟ್ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಗಾಯಗೊಂಡ ಕಾರಣ ಆಸೀಸ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ಯಂಗ್ ವಿಕೆಟ್ ಕೀಪರ್ ರಿಷಬ್ ಪಂತ್ ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಕೆ ಮಾಡಿಕೊಂಡಿದ್ದಾರೆ.
ಆಸ್ಟೇಲಿಯಾ ವಿರುದ್ಧ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಬಿರುಸಿನ ಆಟವಾಡಿ 25 ರನ್ ಗಳಿಸಿದ್ದ ರಿಷಬ್ ವಿಕೆಟ್ ಹಿಂದೆ ಆಸೀಸ್ ಮೊದಲ ಇನ್ನಿಂಗ್ಸ್ ನಲ್ಲಿ 6 ಕ್ಯಾಚ್ ಪಡೆದಿದ್ದಾರೆ. ಈ ಮೂಲಕ ಇನ್ನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದಿದ್ದ ಎಂಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. 21 ವರ್ಷದ ರಿಷಬ್ 3ನೇ ದಿನದಾಟದ ವೇಳೆ ಜೋಶ್ ಹ್ಯಾಜಲ್‍ವುಡ್ ಕ್ಯಾಚ್ ಪಡೆದು 6 ಕ್ಯಾಚ್ ಪೂರ್ಣಗೊಳಿಸಿದರು. ಈ ಹಿಂದೆ 2009 ರಲ್ಲಿ ಧೋನಿ ಇನ್ನಿಂಗ್ಸ್ ಒಂದರಲ್ಲಿ 6 ವಿಕೆಟ್ ಪಡೆದು ಭಾರತದ ಪರ ದಾಖಲೆ ನಿರ್ಮಿಸಿದ್ದರು. ಇದನ್ನೂ ಓದಿ: ಆಸೀಸ್ ನೆಲದಲ್ಲಿ ವಿರಾಟ್ ಕೊಹ್ಲಿ ಹೊಸ ದಾಖಲೆ
Advertisement
6 – most catches by an Indian keeper in a Test inns: MS Dhoni at Wellington 2009 and Rishabh Pant today!#AusvInd#AusvsInd
— Mohandas Menon (@mohanstatsman) December 8, 2018
Advertisement
ಪಂತ್ ವೃತ್ತಿ ಜೀವನದ 6ನೇ ಟೆಸ್ಟ್ ಪಂದ್ಯವನ್ನ ಆಡುತ್ತಿದ್ದು, ಇದುವರೆಗೂ 43.25 ಸರಾಸರಿಯಲ್ಲಿ 346 ರನ್ ಸಿಡಿಸಿದ್ದಾರೆ. ಉಳಿದಂತೆ ಸಹಾ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ತಂಡದಿಂದ ಹೊರಬಿದ್ದರು. 34 ವರ್ಷದ ಸಹಾ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 1,164 ರನ್ ಗಳಿಸಿದ್ದಾರೆ. ಇನ್ನು 37 ವರ್ಷದ ಧೋನಿ 2014 ರಲ್ಲಿ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು.
Advertisement
Most catches as a wicketkeeper in an innings for India:
6 – MS Dhoni vs New Zealand, 2009 Wellington
6 – RISHABH PANT vs Australia, 2018 Adelaide #AUSvIND
— Sampath Bandarupalli (@SampathStats) December 8, 2018
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv