ಮುಂಬೈ: ಟೀಂ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ರಿಷಭ್ ಪಂತ್ (Rishabh Pant) ಕಾರು ಅಪಘಾತಗೊಂಡು (Car Accident) ಗಾಯಗೊಂಡಿರುವ ಹಿನ್ನೆಲೆ ತವರಿನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ (Test) ಸರಣಿಯಿಂದ ಹೊರಬಿದ್ದಿದ್ದಾರೆ. ಇದೀಗ ಪಂತ್ ಸ್ಥಾನ ತುಂಬಲು ಮೂವರು ಆಟಗಾರರ ನಡುವೆ ಪೈಪೋಟಿ ಕಂಡುಬಂದಿದೆ.
Advertisement
ಪಂತ್ ಕಾರು ಅಪಘಾತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಮುಂದಿನ 6 ತಿಂಗಳು ಸಂಪೂರ್ಣ ವಿಶ್ರಾಂತಿ ಬೇಕಾಗಬಹುದೆಂದು ಈಗಾಗಲೇ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಪಂತ್ ಟೀಂ ಇಂಡಿಯಾದಿಂದ ಸದ್ಯ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಆಡಲು ಇದೀಗ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ಗಳಿಗೆ ಮುಕ್ತ ಅವಕಾಶ ಸಿಕ್ಕಿದೆ. ಇದನ್ನೂ ಓದಿ: ದಯವಿಟ್ಟು ಪಂತ್‍ರನ್ನು ನೋಡಲು ಆಸ್ಪತ್ರೆಗೆ ಬರಬೇಡಿ: DDCA ನಿರ್ದೇಶಕರ ಮನವಿ
Advertisement
Advertisement
ಹಾಗಾಗಿ ಈಗಾಗಲೇ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿದ್ದ ಕೆ.ಭರತ್ (K Bharat) ಮತ್ತು ಏಕದಿನ ಕ್ರಿಕೆಟ್‍ನಲ್ಲಿ ದ್ವಿಶತಕ ಸಿಡಿಸಿ ಮಿಂಚಿರುವ ಇಶಾನ್ ಕಿಶನ್ (Ishan Kishan) ನಡುವೆ ಪೈಪೋಟಿ ಇದೆ. ಈ ನಡುವೆ ಅಚ್ಚರಿಯ ಹೆಸರೊಂದು ಇವರೊಂದಿಗೆ ಕಾಣಿಸಿಕೊಂಡಿದೆ. ಇದೀಗ ರೇಸ್‍ನಲ್ಲಿ ಉಪೇಂದ್ರ ಯಾದವ್ (Upendra Yadav) ಸೇರಿಕೊಂಡಿದ್ದಾರೆ.
Advertisement
ಉಪೇಂದ್ರ ಯಾದವ್ ಉತ್ತರ ಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಈಗಾಗಲೇ ಇಂಡಿಯಾ ಎ ತಂಡದ ಪರ ಆಡಿದ್ದಾರೆ. ವಿಕೆಟ್ ಕೀಪಿಂಗ್ ಜೊತೆ ಬ್ಯಾಟಿಂಗ್‍ನಲ್ಲೂ ಉತ್ತಮ ಪ್ರದರ್ಶನ ತೋರಿದ್ದಾರೆ ಹಾಗಾಗಿ ಪಂತ್ ಸ್ಥಾನ ತುಂಬಲು ಸಿದ್ಧರಾಗುತ್ತಿದ್ದಾರೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ
ಇದೀಗ ಸದ್ಯ ಕೆ.ಭರತ್ ಟೆಸ್ಟ್‌ನಲ್ಲಿ ಮೊದಲ ಆಯ್ಕೆಯ ಕೀಪರ್ ಆದರೆ, ಇಶಾನ್ ಕಿಶನ್ ಜೊತೆ ಸಂಜು ಸ್ಯಾಮ್ಸನ್ ಕೂಡ ರೇಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ತವರಿನಲ್ಲಿ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಆಡಲಿದೆ. ಈ ವೇಳೆ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಗಿ ಬಿಸಿಸಿಐ (BCCI) ಆಯ್ಕೆ ಸಮಿತಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.