ನವದೆಹಲಿ: ಕ್ರಿಕೆಟ್ ಟೀಂ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕೋಪ ನೋಡಿದ್ರೆ ನನಗೆ ಭಯವಾಗುತ್ತದೆ ಎಂದು ಕ್ರಿಕೆಟಿಗ, ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೇಳಿದ್ದಾರೆ.
ಐಪಿಎಲ್ ದೆಹಲಿ ಕ್ಯಾಪ್ಟಿಲ್ ತಂಡದಲ್ಲಿ ರಿಷಬ್ ಪಂತ್ ಆಡುತ್ತಿದ್ದಾರೆ. ದೆಹಲಿ ಕ್ಯಾಪ್ಟಿಲ್ ವೆಬ್‍ಸೈಟ್ ನ ಸಂದರ್ಶನದ ವೇಳೆ ಮಾತನಾಡುತ್ತಾ, ವಿರಾಟ್ ಕೊಹ್ಲಿ ಅವರ ಕೋಪದ ಬಗ್ಗೆ ತಿಳಿಸಿದ್ದಾರೆ.
ಮೈದಾನದಲ್ಲಿ ಮತ್ತು ಹೊರಗೆ ನಾನು ಯಾರಿಗೂ ಹೆದರಲ್ಲ. ಆದ್ರೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಕೋಪ ಮಾಡಿಕೊಂಡ್ರೆ ಭಯವಾಗುತ್ತದೆ. ನಾವು ಸರಿಯಾಗಿ ಆಡಿದರೆ ಕೊಹ್ಲಿ ಕೋಪಗೊಳ್ಳುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ತಿಳಿಸಿದ್ದಾರೆ.
ಕೆಲ ಬಾರಿ ತಪ್ಪು ಮಾಡಿದಾಗ ಇತರೆ ಆಟಗಾರರು ನಮ್ಮ ಮೇಲೆ ಮುನಿಸಿಕೊಳ್ಳುತ್ತಾರೆ. ತಪ್ಪುಗಳಾದಾಗ ನಾಯಕನಾದವರು ಹೇಳಿದಾಗ ಅರ್ಥವಾಗುತ್ತದೆ. ಈ ವೇಳೆ ನಾವು ಮಾಡಿದ ತಪ್ಪಿನ ಅರಿವು ನಮಗಾಗುತ್ತದೆ ಎಂದು ರಿಷಬ್ ಹೇಳಿದ್ದಾರೆ.
ಮೂರು ಫಾರ್ಮೆಟ್ ಗಳಲ್ಲಿ ರಿಷಬ್ ಪಂತ್ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಬಳಿಕ ರಿಷಬ್ ಪಂತ್ ಒಳ್ಳೆಯ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬ ಭರವಸೆಯನ್ನು ಮೂಡಿಸಿದ್ದಾರೆ. 21 ವರ್ಷದ ರಿಷಬ್ ಪಂತ್ ವಿಕೆಟ್ ಕೀಪಿಂಗ್ ವೇಳೆ ಕೆಲವೊಮ್ಮೆ ನಿರಾಸೆ ಮೂಡಿಸುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಧೋನಿ ರೀತಿ ಸ್ಟಂಪಿಂಗ್ ಮಾಡಲು ಪ್ರಯತ್ನಿಸಿ ಹೆಚ್ಚುವರಿ ರನ್ ನೀಡಿದ್ದರು. ಈ ವೇಳೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿದ್ದರು.