ಮುಂಬೈ: ಇತ್ತೀಚೆಗಷ್ಟೇ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ (Rishabh Pant) ಐಸಿಸಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ (ICC Test Ranking) 6ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
Advertisement
ಇನ್ನೂ 3ನೇ ಸ್ಥಾನದಲ್ಲಿದ್ದ ಯಶಸ್ವಿ ಜೈಸ್ವಾಲ್ (Yashasvi Jaiswal) 4ನೇ ಸ್ಥಾನಕ್ಕೆ ಕುಸಿದು ನಿರಾಸೆ ಅನುಭವಿಸಿದರೆ, 8 ಸ್ಥಾನ ಕುಸಿತ ಕಂಡಿರುವ ವಿರಾಟ್ ಕೊಹ್ಲಿ (Virat Kohli) ಕಳೆದ 10 ವರ್ಷಗಳಲ್ಲಿ ಇದೇ ಮೊದಲಬಾರಿಗೆ ಟಾಪ್-20 ರ‍್ಯಾಂಕ್‌ನಿಂದಲೇ ಹೊರಬಿದ್ದಿದ್ದಾರೆ. 750 ರೇಟಿಂಗ್ಸ್ ಪಡೆದಿರುವ ರಿಷಬ್ ಪಂತ್ 5 ಸ್ಥಾನಗಳಲ್ಲಿ ಏರಿಕೆ ಕಂಡು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನ್ನೂ 3ನೇ ಸ್ಥಾನದಲ್ಲಿರುವ ಯಶಸ್ವಿ ಜೈಸ್ವಾಲ್ 777 ರೇಟಿಂಗ್ಸ್‌ನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದ್ರೆ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ವಿರಾಟ್ 655 ರೇಟಿಂಗ್ಸ್‌ನೊಂದಿಗೆ 22ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನೂ ಓದಿ: WTC Points Table | ಹೀನಾಯ ಸೋಲಿನ ಬೆನ್ನಲ್ಲೇ ನಂ.1 ಪಟ್ಟ ಕಳೆದುಕೊಂಡ ಭಾರತ – ಆಸೀಸ್‌ಗೆ ಅಗ್ರಸ್ಥಾನ
Advertisement
Advertisement
ಬಿದ್ದು ಎದ್ದು ಗೆದ್ದ ಪಂತ್:
2022 ಡಿಸೆಂಬರ್ 31ರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಪಂಥ್ ಬದುಕುಳಿದಿದ್ದೇ ಪವಾಡವಾಗಿತ್ತು. ಅವರ ಸ್ಥಿತಿ ನೋಡಿ ಪಂತ್‌ಗೆ ಮುಂದೆ ನಡೆದಾಡಲು ಆಗಬಹುದೇ ಎಂಬ ಸಂದೇಹವೂ ಕೆಲವರಲ್ಲಿ ಮೂಡಿತ್ತು. ಛಲಬಿಡದ ಪಂತ್ ನಿರೀಕ್ಷೆ ಮೀರಿ ಚೇತರಿಸಿಕೊಂಡರು. ಒಂದೂವರೆ ವರ್ಷ ಆಗುವುದರೊಳಗೆ ಕ್ರೀಡಾಂಗಣಕ್ಕೆ ಮರಳಿದರು. 2024ರ ಐಪಿಎಲ್ ಟೂರ್ನಿಮೂಲಕ ಮತ್ತೆ ಕ್ರಿಕೆಟ್ ಅಂಗಳಕ್ಕೆ ಮರಳಿದ ಪಂತ್ ಬಳಿಕ ಟೀಂ ಇಂಡಿಯಾ ಪರವಾಗಿ ಪ್ರತಿನಿಧಿಸಿದ್ದು ಟಿ20 ವಿಶ್ವಕಪ್‌ನಲ್ಲಿ. ಆ ನಂತರ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಅಡಿದರು. ಪುನರಾಗಮನದ ಬಳಿಕ ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಸರಣಿ ಆಡಿದರು. ಇದನ್ನೂ ಓದಿ: ಕೊಹ್ಲಿಗೆ ಕ್ಯಾಪ್ಟೆನ್ಸಿ ನೀಡುವ ಬಗ್ಗೆ ನಿರ್ಧಾರ ಆಗಿಲ್ಲ - ಕೋಟ್ಯಂತರ ಅಭಿಮಾನಿಗಳ ಆಸೆಗೆ ಫ್ರಾಂಚೈಸಿ ತಣ್ಣೀರು
Advertisement
ನ್ಯೂಜಿಲೆಂಡ್ ವಿರುದ್ಧ ನಡೆದ 3ನೇ ಟೆಸ್ಟ್‌ನ 2ನೇ ದಿನ ಮೊದಲ ಇನಿಂಗ್ಸ್‌ನಲ್ಲಿ ಪಂತ್ ಆಡಲು ಕಣಕ್ಕಿಳಿದಾಗ, ಭಾರತ ಸಂಕಷ್ಟದಲ್ಲಿತ್ತು. ಆಗ ಎದುರಾಳಿಗಳ ಅಸ್ತ್ರ ಆಜಾಜ್ ಪಟೇಲ್ ಅವರನ್ನೂ ಲೆಕ್ಕಿಸಲಿಲ್ಲ. ಅವರ 60 ರನ್‌ಗಳ ನೆರವಿನಿಂದ ಭಾರತಕ್ಕೆ ಇನಿಂಗ್ಸ್ ಮುನ್ನಡೆ ತಂದುಕೊಟ್ಟರು. 2ನೇ ಇನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ ಕಿವೀಸ್ 147 ರನ್‌ಗಳ ಸಣ್ಣ ಗುರಿ ನೀಡಿತ್ತು. ಆದ್ರೆ ಭಾರತ 18 ರನ್‌ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತ್ತು. ಇಂಥ ಪರಿಸ್ಥಿತಿಯಲ್ಲೂ ಬೌಲರ್‌ಗಳನ್ನು ಬೆಂಡೆತ್ತಲು ಪಂತ್ ಮುಂದಾದರು. ಇದರಿಂದ ಭಾರತದ ಗೆಲುವು ಖಚಿತ ಎಂದೇ ಭಾವಿಸಲಾಗಿತ್ತು. ಆದ್ರೆ ಅರ್ಧಶತಕ ಗಳಿಸಿದ್ದ ಪಂತ್ ವಿವಾದಾತ್ಮಕ ಡಿಆರ್‌ಎಸ್ ತೀರ್ಪಿಗೆ ಔಟಾದರು. ಪಂತ್ ಔಟಾಗುತ್ತಿದ್ದಂತೆ ಟೀಂ ಇಂಡಿಯಾದ ಉಳಿದ ಆಟಗಾರರು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿಕೊಂಡರು.