ಬೆಂಗಳೂರು: ವಿಭಿನ್ನ ಸಿನಿಮಾಗಳ ಮೂಲಕವೇ ಚಂದನವನದಲ್ಲಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ನಟ, ನಿರ್ದೇಶಕನಾಗಿರುವ ರಿಷಬ್ ಇಂದು ಮೂರನೇ ಸೆಂಚುರಿಯನ್ನು ದಾಖಲಿಸಿದ್ದಾರೆ. ಅರೇ, ಇದೇನಪ್ಪಾ ಯಾವಾಗ ಶೆಟ್ರು ಬ್ಯಾಟ್ ಹಿಡಿದ್ರು ಅಂತೀರಾ. ಟ್ವಿಟ್ಟರ್ ನಲ್ಲಿ 100ಕೆ(1 ಲಕ್ಷ) ಫಾಲೋವರ್ಸ್ ಗಳನ್ನು ಹೊಂದಿದ್ದು, ಮೂರನೇ ಸೆಂಚುರಿ ಹೊಡೆದಿದ್ದೇನೆ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
ಕಿರಿಕ್ ಪಾರ್ಟಿ ಸೆಂಚುರಿ ಹೊಡೆಯ್ತು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಸಿನಿಮಾ ಸೆಂಚೂರಿಯನ್ನು ದಾಖಲಿಸಿದೆ. ಈಗ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹದಿಂದ ಟ್ವಿಟ್ಟರ್ ನಲ್ಲಿ 100ಕೆ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ಮೂರನೇ ಸೆಂಚುರಿ ಹೊಡೆದಿದ್ದೇನೆ. ಸೆಂಚೂರಿ ಎಷ್ಟೇ ಆದ್ರೆ ಅದೆಲ್ಲ ನಿಮಗೆ ಅರ್ಪಣೆ ಎಂದು ಅಭಿಮಾನಿಗಳಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಬೆಲ್ಬಾಟಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇಂದು ಸಂಜೆ 5 ಗಂಟೆಗೆ ಚಿತ್ರದ ‘ಏತಕ್ಕೆ ಬೊಗಸೆ ತುಂಬಾ ಆಸೆ ನೀಡುವೆ’ ಹಾಡು ರಿಲೀಸ್ ಆಗಲಿದೆ. ಹಾಡಿನ ಪ್ರೋಮೋವನ್ನು ಶೆಟ್ಟರು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. 80ರ ದಶಕದ ಲುಕ್ ನಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
Kirik Party century hodithu, sarkari hiriya prathamika shaale century hodithu eega nimmelara preethi prothsahadinda Twitter alli naanu century hod’didhini.
Century este aadru adara yella credits nimmage arpane!
Dhanyavaada ???????? #100KFollowers
— Rishab Shetty (@shetty_rishab) December 26, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv