`ಕಾಂತಾರ‘ (Kantara) ಸಿನಿಮಾ ಸದ್ಯ ದೇಶ ವಿದೇಶಗಳಲ್ಲಿ ಸದ್ದು ಮಾಡುತ್ತಿದೆ. ಪಂಜುರ್ಲಿ ದೈವಾರಾಧನೆ ಸಂಸ್ಕೃತಿಯ ಸೊಗಡಿನ ಅದ್ಭುತ ಚಿತ್ರವನ್ನು ಪ್ರೇಕ್ಷಕರು ಬಲುವಾಗಿ ಮೆಚ್ಚಿಕೊಂಡಿದ್ದಾರೆ. ಬಾಲಿವುಡ್ ನಟರೂ ಸಹ ಕಾಂತಾರಕ್ಕೆ ಫಿದಾ ಆಗಿ ಮನಸಾರೆ ಹೊಗಳಿದ್ದಾರೆ. ಈ ಮಧ್ಯೆ ಕಾಂತಾರ ಸಿನಿಮಾವನ್ನು ಆಸ್ಕರ್‌ಗೆ (Oscars) ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿರುವುದಾಗಿ ಹೊಂಬಾಳೆ ಫಿಲ್ಮ್ಸ್ (Hombale Films) ಅಧಿಕೃತವಾಗಿ ತಿಳಿಸಿದೆ.
Advertisement
2023ರ ಆಸ್ಕರ್ ಪ್ರಶಸ್ತಿಗೆ ಕಾಂತಾರ ಸಿನಿಮಾವನ್ನು ನಾಮನಿರ್ದೇಶನ ಮಾಡುವಂತೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’ ಸಿನಿಮಾವನ್ನು ಕಳುಹಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಖಚಿತಪಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ನನಗೆ, ನೇಹಾಗೆ ಕಾಂಪಿಟೇಶನ್ ಇತ್ತು: ಅನುಪಮಾ
Advertisement
Advertisement
ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥಾಪಕ ವಿಜಯ್ ಕಿರಗಂದೂರ್ ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ್ದು, ಕೊನೆಯ ಕ್ಷಣದಲ್ಲಿ ಅರ್ಜಿ ಕಳುಹಿಸಿದ್ದು, ನಾಮನಿರ್ದೇಶನಕ್ಕೆ ಪರಿಗಣಿಸುವ ಬಗ್ಗೆ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಕಥೆಯು ಎಷ್ಟು ಬೇರೂರಿದೆ ಎಂದರೆ ಅದು ವಿಶ್ವದಾದ್ಯಂತ ಮಾರ್ಧನಿಸಿದೆ ಎಂದು ಈ ವೇಳೆ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ
Advertisement
ಕನ್ನಡದ `ಕಾಂತಾರ’ ಈಗಾಗಲೇ ತೆಲುಗು, ತಮಿಳು, ಮಲಯಾಳಂ, ಹಿಂದಿ, ತುಳು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದು, ಎಲ್ಲಾ ಭಾಷೆಯ ಪ್ರೇಕ್ಷಕರನ್ನ ಸೆಳೆಯುತ್ತಿದೆ. ಕೆಜಿಎಫ್ 2 ಬಳಿಕ 2022ರಲ್ಲಿ ಮೆಗಾ ಹಿಟ್ ಸಿನಿಮಾ ಆಗಿ ಹೊರಹೊಮ್ಮಿದ ಕಾಂತಾರ ವಿಶ್ವದಾದ್ಯಂತ 400 ಕೋಟಿಗಿಂತಲೂ ಅಧಿಕ ಹಣ ಬಾಚಿಕೊಂಡಿದೆ. ಇದೀಗ ಆಸ್ಕರ್‌ನತ್ತ ಮುಖ ಮಾಡಿದೆ.