ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ‘ಕಾಂತಾರ’ (Kantara Chapter 1) ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಹ ದಾಖಲೆಗಳನ್ನು ಸೃಷ್ಟಿಸಿದೆ. ಪ್ರಪಂಚದಾದ್ಯಂತ ದಾಖಲೆಗಳ ಮೇಲೆ ದಾಖಲೆಗಳನ್ನು ಮುರಿಯುತ್ತಿರುವ ‘ಕಾಂತಾರ’ ಸಿನಿಮಾ, ಕನ್ನಡ ಸಿನಿಮಾದ ಹೆಮ್ಮೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.
ರಾಜ್ಯಾದ್ಯಂತ 3ನೇ ವಾರವೂ ಹೌಸ್‌ಫುಲ್ ಅಬ್ಬರವನ್ನ ಮುಂದುವರೆಸಿದೆ. ಕಾಂತಾರ ರಿಲೀಸ್ ಆದ ಚಿತ್ರಮಂದಿರಗಳು ಸತತ ಮೂರನೇ ವಾರವೂ ತುಂಬಿ ತುಳುಕುತ್ತಿವೆ. ಕನ್ನಡದ ಪ್ರೇಕ್ಷಕರಿಂದ ‘ಕಾಂತಾರ’ ಸಿನಿಮಾಕ್ಕೆ ಸಿಕ್ಕಿರುವ ಭರ್ಜರಿ ರೆಸ್ಪಾನ್ಸ್ 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನೂ ಓದಿ: ಸುವರ್ಣ ಗೃಹಮಂತ್ರಿ: ತಮ್ಮದೇ ಕುಟುಂಬದ ಜೊತೆ ರವಿಶಂಕರ್ ಗೌಡ
ವಿಶ್ವದಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 818 ಕೋಟಿ ಗಳಿಕೆ ಮಾಡುವ ಮೂಲಕ ‘ಕಾಂತಾರ’ ಚಿತ್ರವು 2025ರ ಅತ್ಯಧಿಕ ಗಳಿಕೆಯ ಭಾರತೀಯ ಚಿತ್ರವಾಗಿ ಮೈಲಿಗಲ್ಲು ಸ್ಥಾಪಿಸಿದೆ. ‘ಕಾಂತಾರ’ ಸಿನಿಮಾ ಕರ್ನಾಟಕ ರಾಜ್ಯವೊಂದರಲ್ಲೇ 250 ಕೋಟಿ ಗಳಿಕೆಯ ಗಡಿಯನ್ನು ದಾಟಿದ ಮೊದಲ ಕನ್ನಡ ಚಲನಚಿತ್ರ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದೆ. ನಾಲ್ಕನೇ ವಾರಕ್ಕೆ ದಾಪುಗಾಲಿಟ್ಟಿರುವ ಕಾಂತಾರ ಯಶಸ್ವಿ ಪ್ರದರ್ಶನವನ್ನ ಮುಂದುವರೆಸಿದೆ. ಇದನ್ನೂ ಓದಿ: ಮಾರಿಗಲ್ಲು: ಕುತೂಹಲ ಮೂಡಿಸುವ ವೆಬ್ ಸರಣಿ ಟ್ರೈಲರ್

