‘ಕಾಂತಾರ ಚಾಪ್ಟರ್ 1′ (Kantara 1) ಸಿನಿಮಾ ಕೆಲಸಕ್ಕೆ ಕೊಂಚ ಬ್ರೇಕ್ ನೀಡಿ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಕ್ಕೆ ಕುಟುಂಬದ ಜೊತೆ ರಿಷಬ್ ಶೆಟ್ಟಿ (Rishab Shetty) ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಅಣ್ಣನ ನೆನೆದು ಮಿಸ್ಸಿಂಗ್ ಯೂ ಡ್ಯೂಡ್ ಎಂದ ಧ್ರುವ ಸರ್ಜಾ
ಇತ್ತೀಚೆಗೆ ರಿಷಬ್ ಫ್ಯಾಮಿಲಿ, ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಈಗ ಗೋಕರ್ಣದ ಮಹಾಬಲೇಶ್ವರನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕುಟುಂಬದ ಜೊತೆ ನಟ ಕಾಲ ಕಳೆದಿದ್ದಾರೆ. ಇದನ್ನೂ ಓದಿ:ಡ್ರಗ್ಸ್ ಪ್ರಕರಣ: ಕೇಸ್ ಇತ್ಯರ್ಥ ಆಗೋತನಕ ತೆಲುಗು ಕಲಾವಿದರ ಸಂಘದಿಂದ ಹೇಮಾ ಅಮಾನತು
ಇನ್ನೂ ರಿಷಬ್ ಶೆಟ್ಟಿ ನಟನೆ, ನಿರ್ದೇಶನ ಮಾತ್ರವಲ್ಲ, ಸಿನಿಮಾ ನಿರ್ಮಾಣ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ತಮ್ಮದೇ ಸಂಸ್ಥೆಯಿಂದ ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಸದ್ಯ ಶಿವಮ್ಮ ಚಿತ್ರ, ಪ್ರಮೋದ್ ಶೆಟ್ಟಿ ನಟನೆಯ ‘ಲಾಫಿಂಗ್ ಬುದ್ಧ’ ಸೇರಿದಂತೆ ಹಲವು ಸಿನಿಮಾಗಳಿಗೆ ರಿಷಬ್ ನಿರ್ಮಾಣಕ್ಕೆ ಸಾಥ್ ನೀಡುತ್ತಿದ್ದಾರೆ.