ರಾಣಾ ದಗ್ಗುಬಾಟಿಗೆ ಕನ್ನಡ ಕಲಿಸಿದ ರಿಷಬ್ ಶೆಟ್ಟಿ

Public TV
1 Min Read
rishab 1

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ ಚಾಪ್ಟರ್ 1’ರಲ್ಲಿ (Kantara Chapter 1)  ಬ್ಯುಸಿಯಾಗಿದ್ದಾರೆ. ಇನ್ನೂ ಕುಂದಾಪುರದ ಕೆರಾಡಿಗೆ ಬಂದ ತೆಲುಗು ನಟ ರಾಣಾ ದಗ್ಗುಬಾಟಿಗೆ (Rana Daggubati) ರಿಷಬ್ ಶೆಟ್ಟಿ ಕನ್ನಡ ಕಲಿಸಿದ್ದಾರೆ. ಅದಷ್ಟೇ ಅಲ್ಲ, ರಿಷಬ್ ಬಳಿ ರಾಜ್‌ಕುಮಾರ್ ಸಿನಿಮಾದ ಡೈಲಾಗ್ ಕೂಡ ಕಲಿತಿದ್ದಾರೆ. ಇದನ್ನೂ ಓದಿ:UI ಫ್ಯಾನ್ಸ್‌ಗೆ ಉಪ್ಪಿ ಪ್ರಶ್ನೆ- ಕೊನೆಯ ಶಾಟ್ ಡಿಕೋಡ್ ಮಾಡಿ ಎಂದ ನಟ


ಒಟಿಟಿ ಪ್ರಸಾರವಾಗುತ್ತಿರುವ ಈ ಶೋಗೆ ‘ದಿ ರಾಣಾ ದಗ್ಗುಬಾಟಿ ಶೋ’ ಎಂಬ ಹೆಸರನ್ನೇ ಇದಕ್ಕೆ ಇಟ್ಟಿದ್ದಾರೆ. ರಿಷಬ್‌ರನ್ನು ಸಂದರ್ಶನ ಮಾಡಲು ಕುಂದಾಪುರದ ಕೆರಾಡಿಗೆ ರಾಣಾ ಭೇಟಿ ಕೊಟ್ಟಿರೋದು ವಿಶೇಷ. ಇವರೊಂದಿಗೆ ಕುಡ್ಲದ ಬೆಡಗಿ ನೇಹಾ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ. ಇನ್ನೂ ಸಿನಿಮಾ ಮಾಡುಬೇಕು ಎಂದರೆ ನಗರಕ್ಕೆ ಬರಬೇಕು ಎಂಬುದನ್ನು ಅವರು ಸುಳ್ಳು ಮಾಡಿದ್ದಾರೆ. ಕುಂದಾಪುರದಲ್ಲಿ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆರಾಡಿಯ ಸರ್ಕಾರಿ ಶಾಲೆಗೆ ತೆರಳಿ ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ರಾಜ್‌ಕುಮಾರ್ ಅವರ ‘ಹೇಳು ಪಾರ್ಥ’ ಡೈಲಾಗ್ ಅನ್ನು ರಾಣಾಗೆ ರಿಷಬ್ ಹೇಳಿ ಕೊಟ್ಟಿದ್ದಾರೆ. ಇದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡ ಕಲಿಯುವ ಆಸಕ್ತಿ ತೋರಿದ ರಾಣಾಗೆ ಫ್ಯಾನ್ಸ್ ಭೇಷ್ ಎಂದಿದ್ದಾರೆ.

Share This Article