ಹೃತಿಕ್ ರೋಷನ್, ಶಿವಕಾರ್ತಿಕೇಯನ್, ಪೃಥ್ವಿರಾಜ್ ಸುಕುಮಾರನ್, ಪ್ರಭಾಸ್ ಅವರಿಂದ, ವಿಶ್ವವೇ ಎದುರು ನೋಡುತ್ತಿರುವ ಕಾಂತಾರ ಚಾಪ್ಟರ್-1 (Kantara Chapter 1) ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆ ಆಗಿದೆ. ಇಡೀ ಟ್ರೈಲರ್‌ನುದ್ದಕ್ಕೂ ದೃಶ್ಯ ವೈಭವ ಕಾಣಬಹುದು. ರಾಜ ಮತ್ತು ಕಾಡಿನ ಜನರ ನಡುವಿನ ಕಥೆ ಹಾಗೂ ಕಾಂತಾರ ನೆಲದ ಮಣ್ಣಿಗೆ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿರುವುದು ಪ್ರಮುಖ ಅಂಶ.
ಟ್ರೈಲರ್ ರಿಲೀಸ್ ಬಳಿಕ ಪ್ರೆಸ್‌ಮೀಟ್‌ನಲ್ಲಿ ಮಾತನಾಡಿರುವ ನಟ ರಿಷಬ್ ಶೆಟ್ಟಿ (Rishab Shetty )ಸಿನಿ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಕಾಂತಾರ ಸಿನಿಮಾ 5 ವರ್ಷದ ದೊಡ್ಡ ಜರ್ನಿ. ಈ ಸಿನಿಮಾ ಕಂಪ್ಲೀಟ್ ಮಾಡೋಕೆ ಆಗ್ತಿರಲಿಲ್ಲ, ಅಷ್ಟು ಅಡೆತಡೆಗಳು ಎದುರಿಸಿದ್ದೀನಿ. ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ.. ನಾನು ಶೂಟಿಂಗ್ ಹೋಗ್ತಿದ್ರೆ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಇನ್ನೊಂದು ಸಲ ಹೇಗಿದ್ದೀರ ಅಂತ ಕೇಳಿದ್ರೆ ಅತ್ತೆ ಬಿಡ್ತೀನಿ, ಅಷ್ಟೊಂದು ಎಮೋಷನಲ್ ಜರ್ನಿ ಇದು ಅಂತ ಹೇಳಿಕೊಂಡ್ರು.
ನನ್ನ ಮಕ್ಕಳು ಸ್ಕೂಲ್‌ಗೆ ಹೋಗೋದನ್ನ ನೋಡೋಕು ಟೈಮ್ ಸಿಗ್ತಿರ್ಲಿಲ್ಲ. ಫಾರೆಸ್ಟ್ ಮಿನಿಸ್ಟರ್ ಇಂದ ಎಲ್ರು ನನಗೆ ಈ ಚಿತ್ರಕ್ಕೆ ಸಹಕಾರ ನೀಡಿದ್ದಾರೆ. ಅಲ್ಲದೇ ಸರಿಯಾಗಿ ಮಲಗಿ ಮೂರು ತಿಂಗಳಾಯ್ತು. ಕೇವಲ 2 ಗಂಟೆ ಅಷ್ಟೇ ಮಲಗ್ತಿದ್ದೆ. ಲೆಕ್ಕ ಹಾಕಿದ್ರೆ 4 ಸಲ ನಾನು ಸತ್ತೇ ಹೋಗ್ತಿದ್ದೆ, ದೈವ ನನನ್ನು ಬದುಕಿಸಿದೆ ಅಂತ ಭಾವುಕರಾದ್ರು.
ಗುಲ್ಶನ್ ದೇವಯ್ಯ ಬಾಲಿವುಡ್ ಅವ್ರು ಅಲ್ಲ ಕನ್ನಡದ ಕೂರ್ಗ್ ನವರು.. ಮೂರು ವರ್ಷದಲ್ಲಿ ನಾಲ್ಕುವರೆ ಲಕ್ಷ ಕೆಲಸಗಾರರಿಗೆ ಹೊಂಬಾಳೆ ಊಟ ಹಾಕಿದೆ. ಕಾಂತಾರ ದೊಡ್ಡ ಸ್ಕೇಲ್ ಇರ್ಬೋದು. ಇದಕ್ಕೆ ಮೂಲ ಕಾರಣ ಕನ್ನಡಿಗರು ಮತ್ತು ಮಾಧ್ಯಮದವರು. ಪ್ರಪಂಚದಲ್ಲಿ ಏನು ನಡೀತಿದೆ ಅನ್ನೋ ಜನರಲ್ ನಾಲೆಡ್ಜ್ ಇಲ್ಲ. ಮೂರು ವರ್ಷದಿಂದ ಸಿನಿಮಾದಲ್ಲೇ ಮುಳುಗಿ ಹೋಗಿದ್ವಿ. ಈಗ ಟ್ರೈಲರ್ ರಿಲೀಸ್ ಆಗಿದ್ದು, ಅದ್ಭುತ ರೆಸ್ಪಾನ್ಸ್ ಸಿಕ್ತಿದೆ ಎಂದು ತಿಳಿಸಿದ್ರು.
ಕೊಚ್ಚಿಯಿಂದ ಪ್ರಚಾರ ಕಾರ್ಯ ಶುರು
ಇನ್ನೂ ಸಿನಿಮಾ ಟಿಕೆಟ್ ಕಡಿಮೆಯಾಗಿದ್ದಕ್ಕೆ ಹೊಂಬಾಳೆ ಕೋರ್ಟ್ ಮೆಟ್ಟಿಲೇರಿದ ವಿಚಾರಕ್ಕೆ, ಇದರ ಬಗ್ಗೆ ನಾನು ತುಂಬಾ ಚರ್ಚೆ ಮಾಡಬೇಕು. ಈ ದಿನ ಇದರ ಬಗ್ಗೆ ಮಾತಾಡೋದು ಬೇಡ. ಮತ್ತೊಮ್ಮೆ ಮಾತಾಡ್ತೀನಿ. 27 ರಿಂದ ನಾವು ಪ್ರಚಾರ ಕಾರ್ಯ ಶುರು ಮಾಡ್ತೀವಿ. ಮೊದಲು ಕೊಚ್ಚಿ, ಚೆನ್ನೈ, ಹೈದರಾಬಾದ್ ಹಾಗೂ ನಾರ್ಥ್ ಇಂಡಿಯಾದಲ್ಲಿ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.
ಇನ್ನೂ ʻಕಾಂತಾರʼ ಕಥೆಯ ಬಗ್ಗೆ ಹೇಳಿದ ರಿಷಭ್
ಈ ಕಥೆಯ ಹಿನ್ನೆಲೆ ನನಗೆ ಬಾಲ್ಯದಿಂದಲೇ ಇದೆ. ನಾನು ಈ ಸಿನಿಮಾ ಮಾಡೋದಕ್ಕೂ ಮುನ್ನ ದೈವ ನರ್ತಕರು, ಪ್ರೊಫೆಸರ್ ಸೇರಿದಂತೆ ಹಲವರ ಬಳಿ ಮಾತಾಡಿ ಸಾಕಷ್ಟು ಅಧ್ಯಯನ ನಡೆಸಿದ್ದೇವೆ. ಕಥೆಗೆ ಬೇಕಾದಂತೆ ಮಾಹಿತಿಯನ್ನ ಕಲೆಹಾಕಿ ನಾವು ಸಿದ್ಧತೆ ನಡೆಸಿದ್ದೇವೆ. ಕಲರಿ ಪಯಟ್ಟು ಯುದ್ಧದ ಕಲೆಯನ್ನ ಮತ್ತೆ ಜನರ ಮುಂದಿಡುವ ಪ್ರಯತ್ನ ಮಾಡಿದ್ದೇವೆ ಎಂದು ವಿವರಿಸಿದರು.