– ದೈವದ ಪ್ರೇರಣೆಯಿಂದಲೇ ಸಿನಿಮಾ ಆಗೋಕೆ ಸಾಧ್ಯವಾಗಿದ್ದು ಎಂದ ಡಿವೈನ್ ಸ್ಟಾರ್
ಹಲವು ವಿಘ್ನಗಳನ್ನ ಎದುರಿಸಿ, ಅಡೆತಡೆಗಳನ್ನ ಮೆಟ್ಟಿನಿಂತು `ಕಾಂತಾರ ಚಾಪ್ಟರ್ 1′ (Kantara Chapter 1) ಚಿತ್ರ ಚಿತ್ರೀಕರಣ ಮುಗಿಸಿದೆ. ಇದರ ಘೋಷಣೆಯನ್ನು ವಿಭಿನ್ನವಾಗಿ ಮಾಡಿರುವ ರಿಷಬ್ ಶೆಟ್ಟಿ (Rishab Shetty) ಕಾಂತಾರದ ಮೊದಲ ಮೇಕಿಂಗ್ ತುಣುಕನ್ನ ರಿಲೀಸ್ ಮಾಡಿದ್ದಾರೆ.
ಮೇಕಿಂಗ್ ಬ್ಯಾಗ್ರೌಂಡ್‌ನಲ್ಲಿ ಕಾಂತಾರ ಸೃಷ್ಟಿಯಾಗಿರುವ ಜೊತೆಗೆ ಎದುರಾದ ವಿಘ್ನಗಳ ಬಗ್ಗೆ ವಿವರಿಸಿದ್ದಾರೆ. ಎಲ್ಲವನ್ನೂ ಎದುರಿಸಿ ಸಿನಿಮಾ ಆಗಬೇಕಾದರೆ ಇದು ಸಾಧ್ಯವಾಗಿದ್ದು ದೈವಶಕ್ತಿಯಿಂದ ಮಾತ್ರ ಸಾಧ್ಯ ಎಂದಿದ್ದಾರೆ.
ಇದೇ ಅಕ್ಟೋಬರ್ 2ರಂದು `ಕಾಂತಾರ ಚಾಪ್ಟರ್ 1′ ವಿಶ್ವದಾದ್ಯಂತ ರಿಲೀಸ್ ಆಗುತ್ತದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣ ಮುಗಿದಿದ್ದು ಶೂಟಿಂಗ್ ವೇಳೆ ಚಿತ್ರತಂಡ ವಿಘ್ನಗಳನ್ನು ಎದುರಿಸಿತ್ತು. ಅದರ ಸ್ವವಿರವನ್ನ ರಿಷಬ್ ಶೆಟ್ಟಿ ಮೇಕಿಂಗ್‌ನಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 3 ವರ್ಷದ ಸಿನಿ ಪಯಣದ ಒಂದು ಝಲಕ್: ಕಾಂತಾರ ಅದ್ಭುತ ಲೋಕ
ಕಾಂತಾರ ಸಿನಿಮಾ ಮಾಡುವುದರ ಉದ್ದೇಶ ಏನು? ಸೆಟ್‌ನಲ್ಲಿ ಎಷ್ಟು ಮಂದಿ ಕಾರ್ಯನಿರ್ವಹಿಸಿದ್ದರು ಹಾಗೂ ಎಷ್ಟು ದಿನ ಚಿತ್ರೀಕರಣ ನಡೆದಿದೆ ಅನ್ನೋದನ್ನ ರಿಷಬ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ರಿಷಬ್ ಹೇಳಿದ್ದೇನು ?
ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕನ್ನೋದು ನನ್ನದೊಂದು ಕನಸು. ನಮ್ಮ ಊರು, ನಮ್ಮ ಜನ, ನಮ್ಮ ಬಂಧುಗಳು, ನಾನು ಆ ಕನಸಿನ ಬೆನ್ನು ಹತ್ತಿದಾಗ ಸಾವಿರಾರು ಜನ ನನ್ನ ಬಳಿ ಬಂದರು. 3 ವರ್ಷಗಳ ಪರಿಶ್ರಮ, 250 ದಿನಗಳ ಚಿತ್ರೀಕರಣ, ಎಷ್ಟೇ ಕಷ್ಟ ಬಂದ್ರೂ ನಾನು ನಂಬಿರುವ ದೈವ ನನ್ನ ಕೈ ಬಿಡಲಿಲ್ಲ. ನನ್ನ ಇಡೀ ತಂಡ, ನಿರ್ಮಾಪಕರು ನನ್ನ ಬೆನ್ನೆಲುಬು. ಪ್ರತಿ ದಿನ ಸೆಟ್‌ನಲ್ಲಿ ಸಾವಿರಾರು ಜನರನ್ನ ನೋಡ್ತಿದ್ದಾಗ ನನಗೆ ಕಾಡ್ತಿದ್ದ ವಿಷಯ ಒಂದೇ. ಇದು ಸಿನಿಮಾ ಅಲ್ಲ ಇದೊಂದು ಶಕ್ತಿ. ಕಾಂತಾರ ಶೂಟಿಂಗ್ ವೇಳೆ ಉಂಟಾದ ಹಲವು ವಿಘ್ನಗಳನ್ನ ಎದುರಿಸಿ ಚಿತ್ರೀಕರಣ ಮುಗಿಸಿರುವ ತಂಡ. ಆ ವಿಚಾರವನ್ನ ಮೇಕಿಂಗ್ ದೃಶ್ಯದ ಬ್ಯಾಗ್ರೌಂಡ್‌ನಲ್ಲಿ ರಿಷಬ್ ಶೆಟ್ಟಿ ವಿವರಿಸಿದ್ದಾರೆ.