ಕಾಂತಾರ ಭರ್ಜರಿ ಯಶಸ್ಸಿನ ಬಳಿಕ ಇದೀಗ ರಿಷಬ್ ಶೆಟ್ಟಿ (Rishab Shetty) ಶೂಟಿಂಗ್ ಕ್ಯಾಂಪ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾ ಖಾತೆಯಲ್ಲಿ ಒಂದಷ್ಟು ಫೋಟೋಗಳನ್ನ ಹಂಚಿಕೊಂಡ ರಿಷಬ್ ಅದರ ಹಿನ್ನೆಲೆ ಹಾಗೂ ಪ್ರಾಮುಖ್ಯತೆಯ ಕುರಿತು ಮಾಹಿತಿಯನ್ನೂ ಬಿಚ್ಚಿಟ್ಟಿದ್ದಾರೆ.
This was the moment I passed on the soul of our story when the character born on paper found life through my actors. Our first workshop wasn’t just rehearsal; it was the beginning of breathing emotion into imagination. My love towards all my actors of kantara tribe.#Kantara… pic.twitter.com/ixIlSIajof
— Rishab Shetty (@shetty_rishab) December 12, 2025
ಇದು `ಕಾಂತಾರ ಚಾಪ್ಟರ್-1′ (Kantara Chapter 1) ರಲ್ಲಿ ಬರುವ ಬುಡಕಟ್ಟು ಜನಾಂಗದ ದೃಶ್ಯವಾಗಿದೆ. ಇದು ನನ್ನ ತಂಡಕ್ಕೆ ನಾನು ಕಥೆಯ ಆತ್ಮವನ್ನ ತಿಳಿಸಿದ ಕ್ಷಣ ಎಂದು ವರ್ಣಿಸಿದ್ದಾರೆ. ಇದನ್ನೂ ಓದಿ: ಕಾವ್ಯನ ಅಳಿಸೋಕೆ ಊಟಾ ಬಿಟ್ರಾ ಗಿಲ್ಲಿ – ಭಾವನೆಗೆ ಬೆಲೆ ಇಲ್ಲಾ ಅಂತೀರಾ?
ಕಾಂತಾರ ಚಿತ್ರದಲ್ಲಿ ವಿವಿಧ ಶೇಡ್‌ಗಳಲ್ಲಿ ರಿಷಬ್ ಕಾಣಿಸ್ಕೊಳ್ತಾರೆ. ಆ ಎಲ್ಲಾ ಶೇಡ್‌ಗಳಿಗಿಂತ ಬುಡಕಟ್ಟು ಜನಾಂಗದ ದೃಶ್ಯಗಳ ಚಿತ್ರೀಕರಣ ಮಾಡುವುದು ತಮಗೆ ಚಾಲೆಂಜ್ ಆಗಿತ್ತು ಅನ್ನೋದನ್ನ ಅವರು ಪ್ರತಿಬಾರಿ ಹೇಳಿಕೊಂಡಿದ್ದರು. ಅದರಂತೆ ಪೂರ್ವಾಭ್ಯಾಸದ ಫೋಟೋಗಳನ್ನ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿರುವ ರಿಷಬ್ ಸುದೀರ್ಘವಾಗಿ ಈ ಫೋಟೋ ಹಿನ್ನೆಲೆ ತಿಳಿಸಿದ್ದಾರೆ. ಇದನ್ನೂ ಓದಿ: ಜೈಲರ್-2 ಸೆಟ್‌ನಲ್ಲಿ ತಲೈವಾ ಹುಟ್ಟುಹಬ್ಬ ಜೋರು
ರಿಷಬ್ ಹೇಳಿದ್ದೇನು..?
ಕಾಗದದ ಮೇಲೆ ಹುಟ್ಟಿದ ಪಾತ್ರವು ನನ್ನ ನಟರ ಮೂಲಕ ಜೀವ ಪಡೆದಾಗ, ನಮ್ಮ ಕಥೆಯ ಆತ್ಮವನ್ನ ನಾನು ವರ್ಗಾಯಿಸಿದ ಕ್ಷಣ ಇದು. ನಮ್ಮ ಮೊದಲ ಕಾರ್ಯಾಗಾರವು ಕೇವಲ ಪೂರ್ವಾಭ್ಯಾಸವಾಗಿರಲಿಲ್ಲ. ಅದು ಕಲ್ಪನೆಗೆ ಭಾವದ ಉಸಿರು ತುಂಬುವ ಆರಂಭವಾಗಿತ್ತು. ಕಾಂತಾರ ಬುಡಕಟ್ಟಿನ ನನ್ನ ಎಲ್ಲಾ ನಟರ ಬಗ್ಗೆ ನನಗೆ ಪ್ರೀತಿ ಇದೆ ಎಂದು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.



