ಸ್ಯಾಂಡಲ್‌ವುಡ್‌ನಲ್ಲಿ (Sandalwood) ಹೈಪ್ ಕ್ರಿಯೇಟ್ ಮಾಡಿರುವ `ಕಾಂತಾರಾ’ ಸಿನಿಮಾಗೆ ಕನ್ನಡ ಸಿನಿಮಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಹುಭಾಷೆಗಳಿಗೆ ಡಬ್ ಮಾಡಲು ಬೇಡಿಕೆ ಜಾಸ್ತಿಯಾಗಿದೆ. ಇದೀಗ ಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಮಾಡಲು ಕೌಂಟ್ ಡೌನ್ ಶುರುವಾಗಿದೆ.
View this post on Instagram
Advertisement
ಹೊಂಬಾಳೆ ಸಂಸ್ಥೆ ನಿರ್ಮಾಣದ `ಕಾಂತಾರಾ’ (Kantara Film) ಚಿತ್ರವನ್ನು ರಿಷಬ್ ಶೆಟ್ಟಿ, ನಟನೆಯ ಜೊತೆ ನಿರ್ದೇಶಿಸಿದ್ದಾರೆ. ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಏಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗ ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಡಿಮ್ಯಾಂಡ್ ಬಂದಿದೆ. ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಡಿಕೆ ಕೂಡ ಇಡಲಾಗಿದೆ. ಕನ್ನಡದ `ಕಾಂತಾರಾ’ ಸಕ್ಸಸ್ ನಂತರ ಹೊಂಬಾಳೆ ನಿರ್ಮಾಣ ಸಂಸ್ಥೆ ಕೂಡ ಬಹುಭಾಷೆಗಳಲ್ಲಿ ಡಬ್ಬಿಂಗ್ ಮಾಡಿ, ತೆರೆಗೆ ತರಲು ಮುಂದಾಗಿದೆ. ಸದ್ಯ ಹಿಂದಿಯಲ್ಲಿ ಟ್ರೈಲರ್ ಕೌಂಟ್ ಡೌನ್ ಶುರುವಾಗಿದೆ. ಇದನ್ನೂ ಓದಿ: ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್
Advertisement
View this post on Instagram
Advertisement
`ಕಾಂತಾರಾ’ ಚಿತ್ರದ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಬೆಳಿಗ್ಗೆ 9.10ಕ್ಕೆ ರಿಲೀಸ್ ಆಗಲಿದೆ ಎಂದು ತಮ್ಮ ಅಧಿಕೃತ ಖಾತೆಗೆ ಮೂಲಕ ಹೊಂಬಾಳೆ ಫಿಲ್ಮ್ಸ್ ಅನೌನ್ಸ್ ಮಾಡಿದೆ.
Advertisement
View this post on Instagram
ದೈವ ಶಕ್ತಿಯನ್ನು ಸಾರುವ ʻಕಾಂತಾರಾʼ ಸಿನಿಮಾವನ್ನ ಪ್ಯಾನ್ ಇಂಡಿಯಾ ಚಿತ್ರವಾಗುತ್ತ ದಾಪುಗಾಲಿಡುತ್ತಿದೆ.