ನಟ ರಿಷಬ್ ಶೆಟ್ಟಿ (Rishab Shetty) ಅವರು ಕಳೆದ ವಾರ ದೈವ ದರ್ಶನ ಪಡೆದಿದ್ದರು. ‘ಕಾಂತಾರ 1’ (Kantara 1) ಚಿತ್ರದ ಕೆಲಸದ ನಡುವೆ ದೈವ ದರ್ಶನ ಪಡೆದ ವಿಡಿಯೋವನ್ನು ರಿಷಬ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮಂಗಳೂರಿನ ವಜ್ರದೇಹಿ ಮಠದ ದೈವ ಕೋಲಕ್ಕೆ ರಿಷಬ್ ಭಾಗಿಯಾಗಿ ಮೈಸಂದಾಯ ದೈವದ ಆಶೀರ್ವಾದ ಪಡೆದಿದ್ದಾರೆ. ದೈವ ಸನ್ನಿಧಿಯಲ್ಲಿ ಆಶೀರ್ವಾದ ಪಡೆದ ಕ್ಷಣಗಳು ಎಂದು ರಿಷಬ್ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ತುಣುಕು ಹಂಚಿಕೊಂಡಿದ್ದಾರೆ.
View this post on Instagram
ರಿಷಬ್ ದೈವ ಕೋಲದಲ್ಲಿ ಭಾಗಿಯಾದ ವೇಳೆ, ಭಯಪಡಬೇಡ ನೀನು ಮುನ್ನುಗ್ಗು ನಾನಿದ್ದೇನೆ ಎಂದು ರಿಷಬ್‌ಗೆ ದೈವ ಅಭಯ ನೀಡಿದೆ. ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡ ಎಂದು ದೈವ ಸೂಚನೆ ನೀಡಿದೆ. ಇದನ್ನೂ ಓದಿ:ಬೆಂಗಳೂರಿನ ಬೆಡಗಿಗೆ ಖುಲಾಯಿಸಿದ ಅದೃಷ್ಟ- ಮುಂದೇನು ಮಾಡ್ತಾರೆ ಶ್ರೀಲೀಲಾ?
‘ಕಾಂತಾರ’ ಸಿನಿಮಾ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಚಿತ್ರ ರಿಲೀಸ್ ಆದ್ಮೇಲೆ 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿ ಸೌಂಡ್ ಮಾಡಿತ್ತು. ‘ಕಾಂತಾರ’ ಭಾಗ 1ಕ್ಕೆ ಕಥೆ ರೆಡಿಯಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಇತ್ತೀಚಿಗೆ ಮುಹೂರ್ತ ಕಾರ್ಯಕ್ರಮ ಕೂಡ ಅದ್ಧೂರಿಯಾಗಿ ನಡೆಯಿತು.