45 ಸಿನಿಮಾ ಟ್ರೈಲರ್ ನೋಡಿದ ವೇಳೆ ರಿಷಬ್ ಶೆಟ್ಟಿ (Rishab Shetty) ರಾಜ್ ಬಿ ಶೆಟ್ಟಿ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕಾಂತಾರದ ಬಳಿಕ ಗೆಳೆಯರನ್ನು ರಿಷಬ್ ದೂರ ಮಾಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಗೆ ರಾಜ್ ಬಿ ಶೆಟ್ಟಿ (Raj B Shetty) ಸ್ಪಷ್ಟನೆ ಕೊಟ್ಟಿದ್ದಾರೆ.
ಇದರ ಜೊತೆಗೆ ಮೂವರು ಶೆಟ್ರು ಅಂದರೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಒಂದೇ ಸಿನಿಮಾದಲ್ಲಿ ನಟಿಸುವಂತಹ ಸಂದರ್ಭ ಒದಗಿ ಬಂದರೆ ಖಂಡಿತ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದಿದ್ದಾರೆ. ಕಾಂತಾರ (Kantara) ಸಿನಿಮಾ ಹೊರತುಪಡಿಸಿ ಮುಂದೆ ಸಿನಿಮಾ ಮಾಡಿದಾಗ ನನ್ನ ಅವಶ್ಯಕತೆ ಇದೆ ಅಂದರೆ ನಾನು ಅವರ ಜೊತೆ ಇರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ನನ್ನ, ರಿಷಬ್ ಮಧ್ಯೆ ಯಾವುದೇ ಮನಸ್ತಾಪವಿಲ್ಲ: ರಾಜ್ ಬಿ ಶೆಟ್ಟಿ ಸ್ಪಷ್ಟನೆ
ಮುನಿಸು ಇಟ್ಟುಕೊಂಡರೆ ನಮ್ಮ ಇಂಡಸ್ಟ್ರಿ ಉದ್ದಾರ ಆಗುವುದಿಲ್ಲ. ರಕ್ಷಿತ್ ಶೆಟ್ಟಿಯವರು ಕರೆದರೆ ರಿಚರ್ಡ್ ಆ್ಯಂಟನಿಗೆ ಜೊತೆ ನಿಲ್ಲುತ್ತೇನೆ. ರಕ್ಷಿತ್, ರಿಷಬ್ ಹಾಗೂ ನಾನು ಮೂವರು ಒಟ್ಟಿಗೆ ನಟಿಸಬೇಕಾದ ಸಮಯ ಬಂದ್ರೆ ಒಟ್ಟಾಗಿ ಸಿನಿಮಾ ಮಾಡುತ್ತೇವೆ. ರಿಷಬ್ ಶೆಟ್ರು ಇದ್ದಾರೆ, ರಕ್ಷಿತ್ ಇದ್ದಾರೆ ನಾನು ಮಾಡುವುದಿಲ್ಲ ಎನ್ನಲು ಚಿಕ್ಕ ಮಕ್ಕಳಲ್ಲ. ರಕ್ಷಿತ್ ಅವರನ್ನು ಇತ್ತೀಚಿಗೆ ಭೇಟಿಯಾಗಿದ್ದೆ. ಸದ್ಯದಲ್ಲಿ ಅವರು ಸಿನಿಮಾ ಶೂಟಿಂಗ್ ಹೋಗಬಹುದು ಎಂದು ರಾಜ್ ಬಿ ಶೆಟ್ಟಿ ಹೇಳಿದರು.

