`ಕಾಂತಾರ’ (Kantara) ಸಿನಿಮಾ ಮೂಲಕ ಡಿವೈನ್ ಸ್ಟಾರ್ ಆಗಿ ಮಿಂಚ್ತಿರುವ ರಿಷಬ್ ಶೆಟ್ಟಿ (Rishab Shetty) ಸದ್ಯ `ಕಾಂತಾರ’ ಪಾರ್ಟ್ 2 ಚಿತ್ರದ ಕಥೆ ಬರೆಯೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮುದ್ದು ಮಗಳು ರಾದ್ಯ (Raadya Shetty) ಬರ್ತ್‌ಡೇಗೆ (Birthday) ವಿಶೇಷ ವೀಡಿಯೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.
ತುಳುನಾಡಿನ ದೈವದ ಕಥೆಯನ್ನ ತೆರೆಯ ಮೇಲೆ ಅಚ್ಚುಕಟ್ಟಾಗಿ ತೋರಿಸುವ ಮೂಲಕ ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಸೈ ಎನಿಸಿಕೊಂಡರು. `ಕಾಂತಾರ’ ಚಿತ್ರದ ಮೂಲಕ ವಿಶ್ವದೆಲ್ಲೆಡೆ ರಿಷಬ್ ಭೇಷ್ ಎನಿಸಿಕೊಂಡರು. ಇತ್ತೀಚಿಗೆ ಪತ್ನಿ ಪ್ರಗತಿ (Pragathi Shetty) ಹುಟ್ಟುಹಬ್ಬದ ಬೆನ್ನಲ್ಲೇ ಈಗ ಮಗಳು ರಾದ್ಯಳ ಮುದ್ದಾದ ವೀಡಿಯೋವನ್ನ ನಟ ಶೇರ್ ಮಾಡಿದ್ದಾರೆ.
View this post on Instagram
ಮಗಳು ರಾದ್ಯಳಿಗೆ ಇದೀಗ ಒಂದು ವರ್ಷ ಪೂರೈಸಿದ್ದು, ರಿಷಬ್ ದಂಪತಿ ಚೆಂದದೊಂದು ಫೋಟೋಶೂಟ್ ಮಾಡಿಸಿದ್ದಾರೆ. ಬಿಳಿ ಮತ್ತು ಹಸಿರು ಬಣ್ಣದ ಡ್ರೆಸ್‌ನಲ್ಲಿ ರಾದ್ಯ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಅವಳ ತುಂಟಾಟ ಕ್ಷಣಗಳನ್ನ ಅಮ್ರೀತಾ ಸಮಂತ್ ಅವರು ಮುದ್ದಾಗಿ ಸೆರೆಹಿಡಿದಿದ್ದಾರೆ. ಈ ಕ್ಯೂಟ್ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಟ್ರಡಿಷನಲ್ ಫೋಟೋಶೂಟ್‌ನಲ್ಲಿ ಮಿಂಚಿದ ಸೋನಂ ಕಪೂರ್
ರಾದ್ಯ ಬಂದ ಮೇಲೆ ರಿಷಬ್ ಲಕ್ ಬದಲಾಗಿದೆ ಎಂದು ಅಭಿಮಾನಿಗಳು ರಿಷಬ್ ಪೋಸ್ಟ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ರಾದ್ಯಳ ನಗುವಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.