ನವದೆಹಲಿ: ಮಸೀದಿಗಳಲ್ಲಿ ಧ್ವನಿವರ್ಧಕಗಳ ತೆಗೆದುಹಾಕುವ ಬಗ್ಗೆ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಹೊಸ ಹಿಂದೂ ಓವೈಸಿಯಾಗಿದ್ದಾರೆ. ಬಿಜೆಪಿಯ ಬೆಂಬಲದೊಂದಿಗೆ ಹೊಸ ಹಿಂದೂ ಓವೈಸಿಯ ಉದಯವಾಗುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ.
Advertisement
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯನ್ನು ಹೇಗೆ ಬಳಸಿಕೊಂಡಿರೋ, ಅದೇ ರೀತಿ ಮಹಾರಾಷ್ಟ್ರದಲ್ಲಿ ಬಿಜೆಪಿ ರಾಜ್ ಠಾಕ್ರೆ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ. ಇದನ್ನೂ ಓದಿ: ನನ್ನನ್ನು ಪದಚ್ಯುತಿಗೊಳಿಸಲು ವಿದೇಶಿ ಸಂಚು ನಡೆದಿದೆ: ಇಮ್ರಾನ್ ಆರೋಪ
Advertisement
Mumbai:Poster that reads “Whom did you call Owaisi? Sanjay Raut shut down your loudspeaker,whole Maharashtra facing problem due to it or else we’ll shut down your loudspeaker in MNS style” seen outside Saamana Office
Raut reportedly called Raj Thackeray ‘Maharashtra ka Owaisi’ pic.twitter.com/qMurBPmC0Y
— ANI (@ANI) April 16, 2022
Advertisement
ಇದಕ್ಕೆ ಪ್ರತಿಯಾಗಿ ಇದೀಗ ಮುಂಬೈನ ಸಾಮ್ನಾ ಕಚೇರಿ ಮುಂದೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಬೆದರಿಕೆ ಹಾಕುತ್ತಿರುವ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಂಜಯ್ ರಾವತ್ ಅವರೇ, ನೀವು ಓವೈಸಿ ಎಂದು ಯಾರನ್ನು ಕರೆಯುತ್ತಿದ್ದೀರಾ? ನಿಮ್ಮ ಧ್ವನಿವರ್ಧಕವನ್ನು ಸ್ಥಗಿತಗೊಳಿಸಿ. ಇಡೀ ಮಹಾರಾಷ್ಟ್ರವು ಅದರಿಂದ ಸಮಸ್ಯೆಯನ್ನು ಎದುರಿಸುತ್ತಿದೆ. ಇಲ್ಲದಿದ್ದರೆ ನಾವು ಎಂಎನ್‍ಎಸ್ ಶೈಲಿಯಲ್ಲಿ ನಿಮ್ಮ ಧ್ವನಿವರ್ಧಕವನ್ನು ಸ್ಥಗಿತಗೊಳಿಸುತ್ತೇವೆ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಬುಲ್ಡೋಜರ್ ಬಾಬಾ ರಾಜ್ಯವನ್ನು ತಪ್ಪು ದಾರಿಯಲ್ಲಿ ನಡೆಸುತ್ತಿದ್ದಾರೆ: ಅಖಿಲೇಶ್ ಯಾದವ್
Advertisement
ಇತ್ತೀಚೆಗಷ್ಟೇ ನಡೆದ ಗುಡಿ ಪಾಡ್ವಾ ಸಮಾವೇಶದಲ್ಲಿ ರಾಜ್ ಠಾಕ್ರೆ ಅವರು, ಮಸೀದಿಗಳ ಮುಂದೆ ಹಾಕಲಾದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿದ್ದರು. ಅಲ್ಲದೇ ಒಂದು ವೇಳೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ, ತಮ್ಮ ಪಕ್ಷವು ಮಸೀದಿಯ ಹೊರಗೆ ಹನುಮಾನ್ ಚಾಲೀಸಾವನ್ನು ಹಾಕುತ್ತಾರೆ ಎಂದು ಬೆದರಿಕೆಯೊಡ್ಡಿದ್ದರು. ಮೇ 3ರೊಳಗೆ ಧ್ವನಿವರ್ಧಕಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಗಡುವು ಕೂಡ ನೀಡಿದ್ದಾರೆ.