ಬೆಂಗಳೂರು: ಯುವಕನೊಬ್ಬ ಗಾಂಜಾ ತರಲು ಮತ್ತೊಬ್ಬ ಯುವಕನಿಗೆ 500 ರೂ. ನೀಡಿದ್ದು, ಹಣ ವಾಪಾಸ್ ಕೇಳಲು ಹೋಗಿ ಹತ್ಯೆಯಾಗಿರುವ ಘಟನೆ ಹೊಸಕೋಟೆ (Hosakote) ತಾಲೂಕಿನ ಕಟ್ಟಿಗಾನಹಳ್ಳಿ (Kattiganahalli) ಗ್ರಾಮದಲ್ಲಿ ನಡೆದಿದೆ.
ಕಟ್ಟಿಗಾನಹಳ್ಳಿ ನಿವಾಸಿ ಮೋಹಿನ್ ಹತ್ಯೆಯಾದ ವ್ಯಕ್ತಿ. ಮೋಹಿನ್ ಗಾಂಜಾ ವ್ಯಸನಿಯಾಗಿದ್ದರಿಂದ ರೋಶನ್‌ಗೆ ಗಾಂಜಾ ತರಲು 500 ರೂ. ಹಣವನ್ನು ನೀಡಿದ್ದ. ಆದರೆ ರೋಷನ್ ಗಾಂಜಾ ತರದೇ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಮನೆಗೆ ಹೋಗಿದ್ದ. ಮೋಹಿನ್, ರೋಷನ್‌ನ ಮನೆಯ ಬಳಿ ಹೋಗಿ ಬಾಗಿಲು ಬಡಿದರೂ ಬಾಗಿಲು ತೆರೆಯದಿದ್ದರಿಂದ ವಾಪಾಸ್ ಹೋಗಿದ್ದ. ಇದನ್ನೂ ಓದಿ: ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲು 15 ನಿಮಿಷ ಲೇಟ್ ಆಗಿ ಬಂದ ಮೋದಿ!
Advertisement
Advertisement
ಅರ್ಧ ಗಂಟೆ ಬಿಟ್ಟು ವಾಪಾಸ್ ಮನೆಯ ಬಳಿ ತೆರಳಿದ ವೇಳೆ ಮೋಹಿನ್ ಹಾಗೂ ರೋಷನ್ ನಡುವೆ ಗಲಾಟೆ ನಡೆದಿದೆ. ಆಗ ರೋಷನ್ ಚಾಕುನಿಂದ ಮೋಹಿನ್‌ನ ಎದೆ, ಪಕ್ಕೆಲುಬು ಭಾಗಕ್ಕೆ 3 ಬಾರಿ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಮೋಹಿನ್‌ನನ್ನು ಸ್ನೇಹಿತರು ಮಾಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾಲೂರು ಆಸ್ಪತ್ರೆ ವೈದ್ಯರು ಬೆಂಗಳೂರಿಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಬೆಂಗಳೂರಿಗೆ ಹೋಗುವ ಮಾರ್ಗ ಮಧ್ಯೆ ಮೋಹಿನ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೇರೆ ಹುಡುಗಿ ಜೊತೆ ಲವರ್ ಚಾಟಿಂಗ್ – ಮನನೊಂದು ನೇಣಿಗೆ ಶರಣಾದ ಅಪ್ರಾಪ್ತೆ
Advertisement
ರೋಶನ್ ಹುಡುಗರಿಗೆ ಗಾಂಜಾ ತಂದು ಕೊಡುತ್ತಿದ್ದ ಎನ್ನುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ತಿರುಮಶೆಟ್ಟಿ ಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ರೋಶನ್‌ನನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.