ಬೆಂಗಳೂರು: ಗಣೇಶ ಹಬ್ಬದಲ್ಲಿ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆ ನಡೆದಿದ್ದು, ಅದೇ ದ್ವೇಷವಿಟ್ಟುಕೊಂಡು ಸೆಕ್ಯೂರಿಟಿ ಗಾರ್ಡ್‌ನನ್ನು ಕೊಚ್ಚಿ ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರದ (Bengaluru Rural) ದೇವನಹಳ್ಳಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ದೇವನಹಳ್ಳಿ (Devanahalli) ತಾಲೂಕಿನ ಬೋವಿಪಾಳ್ಯದ ನಿವಾಸಿ ಶ್ರೀನಿವಾಸ್ (32) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಮಂಗನಬಾವು ಸೋಂಕು 125ಕ್ಕೆ ಏರಿಕೆ – ಶಾಲೆಗೆ 3 ದಿನ ರಜೆ ಘೋಷಣೆ
ಶ್ರೀನಿವಾಸ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಗೋವಿಂದ್ ಮತ್ತು ಶ್ರೀನಿವಾಸ್ ಮಧ್ಯೆ 3 ವರ್ಷಗಳಿಂದ ಗ್ಯಾಂಗ್ ವಾರ್ ನಡೆಯುತ್ತಿತ್ತು. ಗ್ರಾಮದಲ್ಲಿ ಹೆಸರು ಮಾಡಬೇಕು ಎಂಬ ಉದ್ದೇಶದಿಂದ ಗೋವಿಂದ್ ಗುಂಪೊಂದನ್ನು ಕಟ್ಟಿಕೊಂಡಿದ್ದ. ಕಳೆದ ವರ್ಷ ಗಣೇಶ ಹಬ್ಬದ ಸಂದರ್ಭದಲ್ಲಿ ಗೋವಿಂದ್ ಮತ್ತು ಶ್ರೀನಿವಾಸ್ ನಡುವೆ ಡ್ಯಾನ್ಸ್ ಮಾಡುವ ವಿಚಾರಕ್ಕೆ ಗಲಾಟೆಯಾಗಿತ್ತು. ಇದೇ ವಿಚಾರ ಹಾಗೂ ಮೂರು ವರ್ಷಗಳ ದ್ವೇಷದಿಂದ ನಾಲ್ವರು ಸ್ನೇಹಿತರು ಸೇರಿ ಬೋವಿಪಾಳ್ಯ ಹೊರವಲಯದ ಎಂಬಾಸಿ ಕಂಪನಿ ಜಾಗದಲ್ಲಿ ಚಾಕು, ಮಚ್ಚಿನಿಂದ ಚುಚ್ಚಿ ಬರ್ಬರವಾಗಿ ಕೊಲೆಮಾಡಿದ್ದಾರೆ.
ಕೊಲೆ ಮಾಡಿದ ನಾಲ್ವರಾದ ಗೋವಿಂದರಾಜು, ತಿಮ್ಮರಾಜು, ಮನೋಜ್ ಹಾಗೂ ಮಂಜುನಾಥ್ ಪೊಲೀಸರಿಗೆ ಶರಣಾಗಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ