ಕಲಬುರಗಿ ವಿವಿ ಆವರಣದಲ್ಲಿ ರಾಮನವಮಿ ಆಚರಿಸ್ತಿದ್ದ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

Public TV
1 Min Read
kalaburagi vv

ಕಲಬುರಗಿ: ರಾಮನವಮಿ ಆಚರಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ನಡೆದಿದೆ.

ವಿಶ್ವನಾಥ್ ಹಾಗೂ ನರೇಂದ್ರ ಗಾಯಾಳುಗಳು. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿರುವ ವಿವಿಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳು ರಾಮನವಮಿ ಆಚರಿಸುತ್ತಿದ್ದ ವೇಳೆ ವಿವಿ ವಿದ್ಯಾರ್ಥಿಗಳಿಂದಲೇ ಹಲ್ಲೆ ನಡೆದಿದೆ. ಆ ಸಂದರ್ಭದಲ್ಲಿ ವಿಶ್ವನಾಥ್ ಹಾಗೂ ನರೇಂದ್ರಗೆ ಗಾಯಗಳಾಗಿದೆ. ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಎಬಿವಿಪಿ ಸಂಘಟನೆಗೆ ಸೇರಿದವರಾಗಿದ್ದಾರೆ.

ramanavami 4

ಈ ಬಗ್ಗೆ ಗಾಯಾಳು ಎಬಿವಿಪಿ ಕಾರ್ಯಕರ್ತ ವಿಶ್ವನಾಥ್ ಮಾತನಾಡಿ, ನಾವು ಎಬಿವಿಪಿ ಆರ್‌ಎಸ್‍ಎಸ್ ಎನ್ನುವ ಕಾರಣಕ್ಕೆ ನಮಗೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರು ಯಾವ ಸಂಘಟನೆಯವರು ಗೊತ್ತಿಲ್ಲ. ಆದರೆ ನಾವು ಎಬಿವಿಪಿ ಸಂಘಟನೆಯವರು ಅಂತ ಹಲ್ಲೆ ಮಾಡಿದ್ದಾರೆ. ಕ್ಯಾಂಪಸ್ ಆವರಣದಲ್ಲಿ ಯಾಕೆ ರಾಮನವಮಿ ಮಾಡಿದ್ದೀರಿ ಅಂತಾ ಹಲ್ಲೆ ಮಾಡಿದ್ದಾರೆ. ಮೊದಲಿನಿಂದಲೂ ನಮಗೆ ಧಮ್ಕಿ ಹಾಕ್ತಾನೇ ಬಂದಿದ್ದಾರೆ. ನಮಗೆ ವಿವಿಯಲ್ಲಿ ಈಗಲೂ ಜೀವ ಭಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಲೆಯೇರಿಕೆ ಬಗ್ಗೆ ಪ್ರತಿಭಟಿಸಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ:  ಬೊಮ್ಮಾಯಿ

Kalaburagi abvp

ಈ ಸಂಬಂಧ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ನರೋಣಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ತೆಲಂಗಾಣ ಮೂಲದ ಸಾಧಿಕ್ ಮತ್ತು ಕಲಬುರಗಿ ಮೂಲದ ರಾಹುಲ್ ಎಂಬವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಪೊಲೀಸ್ ಕಮಿಷನರ್ ಹುದ್ದೆಗೆ ಸುಳ್ಳುಗಾರ ಎಂದು ಹೇಳುವ ನಡೆ ಸರಿಯಲ್ಲ: ಭಾಸ್ಕರ್ ರಾವ್

isha panth

ಈ ಬಗ್ಗೆ ಕಲಬುರಗಿ ಪೋಲೀಸ್ ವರಿಷ್ಠಾಧಿಕಾರಿ ಇಷಾ ಪಂಥ್ ಮಾತನಾಡಿ, ಕಲಬುರಗಿ ಸೆಂಟ್ರಲ್ ವಿವಿಯಲ್ಲಿ ರಾಮನವಮಿ ಗಲಾಟೆ ಪ್ರಕರಣದಲ್ಲಿ ಹಲ್ಲೆಗೊಳಗಾದವರು ಎಬಿವಿಪಿ ಕಾರ್ಯಕರ್ತರಿದ್ದಾರೆ. ಘಟನೆಗೆ ಸಂಬಂಧಿಸಿ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲು ಮಾಡಿದ್ದೇವೆ. ಹಲ್ಲೆ ಮಾಡಿದವರು ಕೆಲವರು ಹೊರ ರಾಜ್ಯದ ವಿದ್ಯಾರ್ಥಿಗಳಾಗಿದ್ದಾರೆ. ಘಟನೆಗೆ ರಾಮನವಮಿ ಆಚರಣೆ ಹಿನ್ನಲೆ ಗೊತ್ತಾಗಿಲ್ಲ. ಸದ್ಯಕ್ಕೆ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *