ಕನ್ನಡದ ಖ್ಯಾತ ನಟ ಧ್ರುವ ಸರ್ಜಾ (Dhruva Sarja) ಇಂದು ತ್ಯಾಗರಾಜನಗರದ ಶಾರದಾ ಹೊಲಿಗೆ ಕೇಂದ್ರದಲ್ಲಿ ಬೂತ್ ಗೆ ಬಂದು ಮತದಾನ (Voting) ಮಾಡಿದರು. ಪತ್ನಿ ಪ್ರೇರಣಾ ಹಾಗೂ ತಂದೆ-ತಾಯಿ ಜೊತೆ ಆಗಮಿಸಿದ್ದ ಅವರು ಮತದಾನ ಮಾಡಿ ಇತರರಿಗೆ ಪ್ರೇರಣೆಯಾದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಎಲ್ಲರೂ ಮತ ಹಾಕುವಂತೆ ಮನವಿ ಮಾಡಿದರು.
Advertisement
‘ಮತದಾನ ನಮ್ಮ ಹಕ್ಕು ಹಾಗೂ ನಮ್ಮ ಕರ್ತವ್ಯ ಕೂಡ. ಮತದಾನವನ್ನು ಎಲ್ಲರೂ ಮಾಡಬೇಕು. ಯುವಕರು ಮತದಾನದ ಬಗ್ಗೆ ಹೆಚ್ಚು ಜವಾಬ್ಧಾರಿ ವಹಿಸಿಕೊಳ್ಳಬೇಕು. ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು’ ಎಂದರು ಪ್ರಿನ್ಸ್ ಧ್ರುವ ಸರ್ಜಾ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್
Advertisement
Advertisement
ಪದ್ಮನಾಭನಗರ (Padmanabhanagar) ಮತದಾನ ಕೇಂದ್ರದಲ್ಲಿ ನಡೆದ ಗಲಾಟೆ ವಿಚಾರದ ಕುರಿತು ಮಾಧ್ಯಮಗಳ ಪ್ರಶ್ನೆ ಮಾಡಿದಾಗ, ‘ಕಿಡಿಗೇಡಿಗಳು ಗಲಾಟೆ ಮಾಡಿದ್ರೆ ಅಂತವರನ್ನು ಸುಮ್ನನೆ ಬಿಡಬಾರದು. ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಹಲ್ಲೆ ಮಾಡಿದ್ರೆ ಅಂಥವರಿಗೆ ಬೂಟ್ ತೆಗೆದುಕೊಂಡು ಹೊಡೆಯಬೇಕು’ ಎಂದು ಆಕ್ರೋಶದಿಂದಲೇ ಮಾತನಾಡಿದರು. ಶಾಂತಿಯುತ ಮತದಾನಕ್ಕೆ ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು.