ನವದೆಹಲಿ: ಸ್ಟಾರ್ ಇಂಡಿಯಾ ಬ್ಯಾಟರ್ ರಿಂಕು ಸಿಂಗ್ ಅವರನ್ನು ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್ 13 ಕೋಟಿಗೆ ಉಳಿಸಿಕೊಂಡಿದೆ. ಇದರ ಬೆನ್ನಲ್ಲೇ ಐಷಾರಾಮಿ ಬಂಗಲೆಯನ್ನು ಕ್ರಿಕೆಟರ್ ಖರೀಸಿದ್ದಾರೆಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.
ಐಪಿಎಲ್ 2023 ರಲ್ಲಿ ಯಶ್ ದಯಾಳ್ ಬೌಲಿಂಗ್‌ಗೆ ಐದು ಸಿಕ್ಸರ್‌ಗಳನ್ನು ಚಚ್ಚಿದ ರಿಂಕು ಪವರ್-ಹಿಟ್ಟರ್ ಎಂದು ಖ್ಯಾತಿ ಗಳಿಸಿದರು. ರಿಂಕು ಸಿಂಗ್ ಈಗ ತಂಡದ ಅಗ್ರ ರೀಟೈನ್ ಆಗಿದ್ದಾರೆ. ಐಪಿಎಲ್ ಧಾರಣೆಯನ್ನು ಘೋಷಿಸಿದ ನಂತರ, ಅಲಿಘರ್‌ನ ಓಝೋನ್ ಸಿಟಿಯಲ್ಲಿರುವ ದಿ ಗೋಲ್ಡನ್ ಎಸ್ಟೇಟ್‌ನಲ್ಲಿ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಇದು 500 ಚದರ ಗಜದ ಮನೆ ಮತ್ತು 3.5 ಕೋಟಿ ರೂ. ಮೌಲ್ಯದ್ದು ಎಂಬ ಸುದ್ದಿ ಹರಿದಾಡಿದೆ.
Advertisement
IPL ವಿಜೇತ ನಾಯಕ ಶ್ರೇಯಸ್ ಅಯ್ಯರ್‌ನನ್ನು ಈ ವರ್ಷ ತನ್ನ ಫ್ರಾಂಚೈಸಿ KKR ಗೆ ಪ್ರಶಸ್ತಿಯನ್ನು ಗೆದ್ದ ನಂತರವೂ ಕೈ ಬಿಡಲಾಗಿದೆ. 14 ಇನ್ನಿಂಗ್ಸ್‌ಗಳಲ್ಲಿ 146.86 ಸ್ಟ್ರೈಕ್ ರೇಟ್‌ನಲ್ಲಿ ಎರಡು ಅರ್ಧಶತಕಗಳೊಂದಿಗೆ 351 ರನ್ ಗಳಿಸಿದ ಅವರ ಬ್ಯಾಟಿಂಗ್ ಅಂಕಿಅಂಶಗಳು ಅಯ್ಯರ್ ಬಿಡುಗಡೆಯ ಹಿಂದಿನ ಕಾರಣವಾಗಿರಬಹುದು ಎಂಬ ವಾದವಿದೆ.
Advertisement
ಎಲ್ಲಾ ಫ್ರಾಂಚೈಸಿಗಳಲ್ಲಿ ಉಳಿಸಿಕೊಂಡಿರುವ ಒಟ್ಟು 46 ಆಟಗಾರರ ಪೈಕಿ 36 ಆಟಗಾರರು ಭಾರತೀಯರಾಗಿದ್ದಾರೆ. ಈ ಪೈಕಿ 10 ಆಟಗಾರರು ಅನ್‌ಕ್ಯಾಪ್ಡ್ ಇಂಡಿಯನ್ಸ್ ಸ್ಟಾರ್‌ಗಳು. ಅವರೆಂದರೆ, ಅಭಿಷೇಕ್ ಪೊರೆಲ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಮೊಹ್ಸಿನ್ ಖಾನ್, ಆಯುಷ್ ಬಡೋನಿ, ಶಶಾಂಕ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ಯಶ್ ದಯಾಲ್.