ನಟಿ ರಿಮಾ ಕಲ್ಲಿಂಗಲ್ (Rima Kallingal) ಹಾಗೂ ಪದ್ಮಪ್ರಿಯಾ (Padmapriya) ‘ಅಲಯ್ ಪಾಯುದೆ’ (Alaipayuthey Kanna) ಹಾಡಿಗೆ ಡ್ಯಾನ್ಸ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವೀಡಿಯೊದಲ್ಲಿ ಇಬ್ಬರೂ ಕಪ್ಪು ಬಟ್ಟೆ ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
View this post on Instagram
ʻನಾವು ಒಟ್ಟಿಗೆ ಹಾರುತ್ತೇವೆʼ ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಇನ್ಸ್ಟಾದಲ್ಲಿ ಇಬ್ಬರೂ ನಟಿಯರು ಹಂಚಿಕೊಂಡಿದ್ದಾರೆ. ಈ 30 ಸಕೆಂಡ್‌ಗಳ ವೀಡಿಯೋಗೆ ನಿರ್ದೇಶಕಿ ಅಂಜಲಿ ಮೆನನ್, ʻಸುಂದರವಾಗಿದೆʼ ಎಂದು ಕಾಮೆಂಟ್ ಮಾಡಿದ್ದಾರೆ. ಪಾರ್ವತಿ ತಿರುವೋತ್, ನೈಲಾ ಉಷಾ ಮತ್ತು ಇತರರು ಸೇರಿದಂತೆ ಅನೇಕ ತಾರೆಯರು ಸಹ ಈ ನೃತ್ಯಕ್ಕೆ ಮಾರುಹೋಗಿದ್ದಾರೆ.
ಈ ನೃತ್ಯದ ಬಗ್ಗೆ ಪೋಸ್ಟ್‌ನಲ್ಲಿ ಕೆಲವು ಸಾಲುಗಳನ್ನು ಸಹ ಬರೆಯಲಾಗಿದೆ. ಎರಡು ಆತ್ಮಗಳು, ಒಂದೇ ಲಯ, ವೇದಿಕೆಯ ಹಿಂದೆ ಪಿಸುಗುಟ್ಟುವ ಬಿರುಗಾಳಿಗಳಿಂದ ಹಿಡಿದು, ಬೆಳಕಿನ ಬೆಳಕಿನಲ್ಲಿ ಸರಾಗವಾದ ಹೆಜ್ಜೆಗಳವರೆಗೆ.. ಮೌನ ಬಿರುಕು ಬಿಟ್ಟ ಮತ್ತು ಕೋಪ ಭುಗಿಲೆದ್ದ ಸ್ಥಳದಲ್ಲಿ, ಎರಡು ಹೃದಯಗಳು ಬಿರುಗಾಳಿಯ ಮೂಲಕ ನೃತ್ಯ ಮಾಡಿದವು. ವೇದಿಕೆಯ ಮೇಲೆ ಆ ಭೂತಕಾಲ ಕರಗಿತು, ಇಲ್ಲಿ ರೆಕ್ಕೆಗಳು ಮಾತ್ರ ಉಳಿದವು. ನಾವು ಹಾರಿಹೋದೆವು, ಆದರೆ ದೂರವಾಗಲಿಲ್ಲ ಎಂದು ಸಾಹಿತ್ಯಾತ್ಮಕವಾಗಿ ಬರೆಯಲಾಗಿದೆ. ಇದನ್ನೂ ಓದಿ: ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!
ರಿಮಾ ಕಲ್ಲಿಂಗಲ್ ಮತ್ತು ಪದ್ಮಪ್ರಿಯಾ ಅಂಜಲಿ ಮೆನನ್ ನಿರ್ದೇಶನದ ‘ಬ್ಯಾಕ್ ಸ್ಟೇಜ್’ (Backstage) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೇರಳದ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಇಬ್ಬರೂ ನರ್ತಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಇಬ್ಬರೂ ನೃತ್ಯದ ವೀಡಿಯೊಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ʻಬ್ಯಾಕ್‌ಸ್ಟೇಜ್ʼಕಿರುಚಿತ್ರವು ಯುವ ಸಪ್ನೋ ಕಾ ಸಫರ್ ಸರಣಿಯ ಭಾಗವಾಗಿದೆ. ಒಟಿಟಿಯಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಸದ್ಯ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನೂ ಓದಿ: ʻರಾಕಿ ಭಾಯ್ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್; KGF-3 ಬಗ್ಗೆ ಬಿಗ್ ಹಿಂಟ್ ಕೊಟ್ಟ ಹೊಂಬಾಳೆ ಫಿಲ್ಮ್ಸ್