– ಹಿಜ್ಬುಲ್ಲಾಗೆ ನಸ್ರಲ್ಲಾ ಸಹೋದರ ಬಾಸ್
– ಮುಸ್ಲಿಮರ ಶತ್ರುಗಳನ್ನ ಸದೆಬಡಿಯಬೇಕು ಎಂದ ಖಮೇನಿ
ಬೈರೂತ್: ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧದ ಕಾರ್ಮೋಡ ದಟ್ಟವಾಗುತ್ತಿದೆ. ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೇರೂತ್ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇಸ್ರೇಲ್ ವಿರುದ್ಧ ಮತ್ತಷ್ಟು ದಾಳಿಗಾಗಿ ಇರಾನ್ ಸಿದ್ಧತೆ ನಡೆಸಿದೆ.
ಈ ಬೆನ್ನಲ್ಲೇ ಹಿಜ್ಬುಲ್ಲಾದ ಸಾರಥ್ಯವನ್ನು ನಸ್ರಲ್ಲಾ ಸಹೋದರ ಹಶೀಂ ಸೈಫುದ್ದೀನ್ ವಹಿಸಿದ್ದಾನೆ ಅಂತ ತಿಳಿದುಬಂದಿದೆ. ಇನ್ನು, ನಸ್ರಲ್ಲಾ ಹತ್ಯೆ ಬಳಿಕ ಇಸ್ರೇಲ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಸಾರ್ವಜನಿಕವಾಗಿ ಧರ್ಮ ಪ್ರವಚನ ನೀಡಿದ್ದಾರೆ. ಇಸ್ರೇಲ್ ಮೇಲಿನ ಹಮಾಸ್ ದಾಳಿ ನ್ಯಾಯಸಮ್ಮತವಾಗಿದೆ ಅಂದಿದ್ದಾರೆ. ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಆಕ್ರಮಣ ತೀವ್ರ – ಹಿಜ್ಬುಲ್ಲಾ ಸಂಘಟನೆಯ 15 ಮಂದಿ ಹತ್ಯೆ!
- Advertisement3
ಎಲ್ಲರೂ ಒಟ್ಟಾಗಿ ಇಸ್ರೇಲ್ ಸೋಲಿಸೋಣ:
ಇಸ್ರೇಲ್ ದೇಶದ ಮೇಲೆ ನೂರಾರು ಕ್ಷಿಪಣಿಗಳನ್ನಾರಿಸಿ ಶಕ್ತಿ ಪ್ರದರ್ಶನ ಮೆರೆದ ಇರಾನ್, ಇದೀಗ ಯುದ್ಧ ಭೀತಿಯಲ್ಲಿದೆ. ಆದಾಗ್ಯೂ ಇರಾನ್ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಲಕ್ಷಾಂತರ ಜನರನ್ನುದ್ದೇಶಿಸಿ ಧರ್ಮೋಪದೇಶ ನೀಡಿದ್ದಾರೆ. ಬರೋಬ್ಬರಿ 5 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಶುಕ್ರವಾರದ ಬೃಹತ್ ಧರ್ಮೋಪದೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಖಮೇನಿ, ‘ಎಲ್ಲರೂ ಒಂದಾಗಿ ನಮ್ಮ ಶತ್ರುವನ್ನು ಮಣಿಸೋಣ’ ಎಂದು ಕರೆ ಕೊಟ್ಟಿದ್ದಾರೆ.
- Advertisement
ಟೆಗ್ರಾನ್ ನಗರದ ಕೇಂದ್ರ ಭಾಗದಲ್ಲಿರುವ ಇಮಾಮ್ ಖೊಮೇನಿ ಗ್ರ್ಯಾಂಡ್ ಮೊಸಲ್ಲಾ ಮಸೀದಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಈ ವೇಳೆ ಮಾತನಾಡಿದ ಇರಾನ್ ಸರ್ವೋಚ್ಛ ನಾಯಕ ಹಾಗೂ ಧರ್ಮ ಗುರು ಅಯತೊಲ್ಲಾ ಅಲಿ ಖಮೇನಿ, ‘ವಿಶ್ವಾದ್ಯಂತ ಇರುವ ಮುಸ್ಲಿಮರಿಗೆ ಶತ್ರುಗಳು ಇದ್ದಾರೆ. ನಾವೆಲ್ಲರೂ ಒಂದಾಗಿ ಸೇರಿ ಆ ಶತ್ರುವನ್ನು ಮಣಿಸಬೇಕು ಎಂದು ಇಸ್ರೇಲ್‌ನ ಹೆಸರು ಹೇಳದೇ ಸಮರದ ಕರೆ ನೀಡಿದರು. ಇದನ್ನೂ ಓದಿ: ಇರಾನ್ ತೈಲ ಕೇಂದ್ರಗಳ ಮೇಲೆ ದಾಳಿಗೆ ಇಸ್ರೇಲ್ ಪ್ಲ್ಯಾನ್ – ಜೋ ಬೈಡನ್ ಹೇಳಿದ್ದೇನು?
ಇಸ್ರೇಲ್ ಮೇಲಿನ ದಾಳಿಗೆ ಖಮೇನಿ ಸಮರ್ಥನೆ!
ಇಸ್ಲಾಮಿಕ್ ರಿಪಬ್ಲಿಕ್ ದೇಶವಾದ ಇರಾನ್ ಕೆವು ದಿನಗಳ ಹಿಂದೆ ಇಸ್ರೇಲ್ ಮೇಲೆ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಗಳನ್ನು ‘ಕಾನೂನುಬದ್ದ’ ಎಂದು ಪ್ರತಿಪಾದಿಸಿದ ಖಮೇನಿ, 2023ರ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯನ್ನೂ ‘ನ್ಯಾಯಸಮ್ಮತ’ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: 9 ವರ್ಷಗಳ ನಂತ್ರ ಇದೇ ಮೊದಲು – ಪಾಕ್‌ಗೆ ಪ್ರಯಾಣಿಸಲಿದ್ದಾರೆ ಭಾರತದ ವಿದೇಶಾಂಗ ಸಚಿವ ಜೈಶಂಕರ್