ರಿಕ್ಕಿ ರೈ ಮೇಲೆ ಫೈರಿಂಗ್ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ – ವಿಚಾರಣೆ ಬಳಿಕ ಮುತ್ತಪ್ಪ ರೈ 2ನೇ ಪತ್ನಿ ಪ್ರತಿಕ್ರಿಯೆ

Public TV
1 Min Read
Anuradha Rai

– ಸತತ 6 ಗಂಟೆ ವಿಚಾರಣೆ ಎದುರಿಸಿದ ಅನುರಾಧ ರೈ

ರಾಮನಗರ: ರಿಕ್ಕಿ ರೈ (Ricky Rai) ಮೇಲೆ ಫೈರಿಗ್ ಪ್ರಕರಣ ಸಂಬಂಧ ಇಂದು ಪ್ರಕರಣದ ಎ2 ಆರೋಪಿ ಅನುರಾಧ ರೈ (Anuradha Rai) ಬಿಡದಿ ಠಾಣೆಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಸತತ 6 ಗಂಟೆಗಳ ಕಾಲ ಬಿಡದಿ ಇನ್ಸ್‌ಪೆಕ್ಟರ್ ಶಂಕರ್ ನಾಯಕ್‌ ಅವರು ಅನುರಾಧ ರೈರನ್ನ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ವಿಚಾರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅನುರಾಧ ಅವರು, ಪೊಲೀಸರು ವಿಚಾರಣೆಗೆ ಕರೆದಿದ್ರು, ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀನಿ. ಪೊಲೀಸರ ಮೇಲೆ ನಂಬಿಕೆ ಇದೆ. ಇದರಲ್ಲಿ ಯಾರಿದ್ದಾರೋ, ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು. ನಮ್ಮ ಪಾತ್ರ ಇದರಲ್ಲಿ ಏನು ಇಲ್ಲ. ಯಾಕೆ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದಾರೊ ಎಂಬುದನ್ನ ಅವರನ್ನೇ ಕೇಳಬೇಕು ಎಂದಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್ ದಾಳಿ ಬಳಿಕ ಪಾಕ್‌ನಿಂದ ಆಮದಾಗ್ತಿದ್ದ ಡ್ರೈಫ್ರೂಟ್ಸ್‌ ಪೂರೈಕೆಯಲ್ಲಿ ವ್ಯತ್ಯಯ – ಬೆಲೆ ಏರಿಕೆ ಆತಂಕ!

Anuradha Rai 2

ಫೈರಿಂಗ್‌ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ. ಜಮೀನು ವ್ಯಾಜ್ಯ ಈ ಹಿಂದೆ ಇತ್ತು, ಅದು ರಾಜೀ ಆಗಿದೆ. ಕೋರ್ಟ್ ನಲ್ಲಿ ಸುಖಾಂತ್ಯವಾಗಿ ಕೇಸ್ ಮುಗಿದಿದೆ. ನಮಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರು ನ್ಯಾಯ ದೊರಕಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ. ಅಕ್ಟೋಬರ್ ನಲ್ಲಿ ನಾನು ರಿಕ್ಕಿ ರೈ ನೋಡಿದ್ದು. 6 ತಿಂಗಳ ಹಿಂದೆ ಕೋರ್ಟ್‌ನಲ್ಲಿ ಸಹಿ ಮಾಡುವಾಗ ನೋಡಿದ್ದೆ‌. ಅದಾದಮೇಲೆ ನಾನು ನೋಡಿಯೂ ಇಲ್ಲ, ಸಂಪರ್ಕ ಕೂಡ ಇಲ್ಲ. ಪೊಲೀಸರು ಮತ್ತೆ ವಿಚಾರಣೆಗೆ ಕರೆದರೆ ಬರುತ್ತೇನೆ ಎಂದು ಅನುರಾಧ ರೈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮೂರು ಕಾರುಗಳ ನಡುವೆ ಸರಣಿ ಅಪಘಾತ – ಬೆಂಗಳೂರು ಮೂಲದ ವ್ಯಕ್ತಿ ಸಾವು!

Share This Article