ನವದೆಹಲಿ: 7 ಆವೃತ್ತಿ ಕಳೆದರೂ ಐಪಿಎಲ್ ಟ್ರೋಫಿ (IPL Trophy) ತಂದುಕೊಡುವಲ್ಲಿ ವಿಫಲರಾದ ರಿಕಿ ಪಾಟಿಂಗ್ (Ricky Ponting) ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಿಂದ ಪಾಂಟಿಂಗ್ ಡೆಲ್ಲಿ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ.
After 7 seasons, Delhi Capitals has decided to part ways with Ricky Ponting.
It’s been a great journey, Coach! Thank you for everything 💙❤️ pic.twitter.com/dnIE5QY6ac
— Delhi Capitals (@DelhiCapitals) July 13, 2024
Advertisement
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರೂ ಆಗಿರುವ ರಿಕಿ ಪಾಂಟಿಂಗ್ ಕಳೆದ 7 ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯಕೋಚ್ (Delhi Capitals Head Coach) ಆಗಿ ಸೇವೆ ಸಲ್ಲಿಸುತ್ತಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಸೇರುವ ಮುನ್ನ ಪಾಂಟಿಂಗ್ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಿದ್ದರು. ಪಾಂಟಿಂಗ್ ನೇತೃತ್ವದಲ್ಲಿ 2020ರಲ್ಲಿ ಪಾಂಟಿಂಗ್ ಅವರ ಸಾರಥ್ಯದಲ್ಲೇ ಡೆಲ್ಲಿ ತಂಡ ಫೈನಲ್ ಪ್ರವೇಶಿಸಿತ್ತು. ಆದ್ರೆ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಸೋತು ಪ್ರಶಸ್ತಿ ಗೆಲ್ಲಲು ವಿಫಲವಾಯಿತು.
Advertisement
Advertisement
2024ರ ಆವೃತ್ತಿಯಲ್ಲಿ ಆರಂಭದಲ್ಲಿ ಸತತ ಮೂರು ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಳಿಕ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. 14 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿದರೂ ಪ್ಲೇ ಆಫ್‌ನಿಂದ ಹೊರಗುಳಿಯಿತು. ಇದನ್ನೂ ಓದಿ: ಯಶಸ್ವಿ ಕೈ ತಪ್ಪಿದ ಚೊಚ್ಚಲ T20I ಶತಕ – 10 ವಿಕೆಟ್ ಜಯದೊಂದಿಗೆ ಸರಣಿ ಗೆದ್ದ ಭಾರತ!
Advertisement
ಇದೀಗ ತಂಡದ ಅದೃಷ್ಟ ಬದಲಾಯಿಸುವ ಪ್ರಯತ್ನದಲ್ಲಿ ನಿರಾಸೆ ಮೂಡಿಸಿದ ರಿಕಿ ಪಾಂಟಿಂಗ್ ಅವರನ್ನು ಮುಂದುವರಿಸರಿದಲು ಫ್ರಾಂಚೈಸಿ ನಿರ್ಧರಿಸಿದೆ. ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ ಇದನ್ನು ದೃಢಪಡಿಸಿದ್ದಾರೆ.
ಪಾಂಟಿಂಗ್ ಅವರನ್ನು ಮುಖ್ಯಕೋಚ್ ಹುದ್ದೆಯಿಂದ ವಜಾಗೊಳಿಸಿದ ಬೆನ್ನಲ್ಲೇ ಮುಖ್ಯಕೋಚ್ ಹುದ್ದೆಗೆ ಗಂಗೂಲಿ ಅವರ ಹೆಸರು ಕೇಳಿಬಂದಿದೆ. 2025ರ ಆವೃತ್ತಿಯಿಂದ ಗಂಗೂಲಿ ಅವರು ಡೆಲ್ಲಿ ತಂಡದ ಮುಖ್ಯಕೋಚ್ ಹುದ್ದೆ ಅಲಂಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: 2.5 ಕೋಟಿ ನಗದು ಬಹುಮಾನ ನಿರಾಕರಿಸಿದ ದ್ರಾವಿಡ್ – ಕನ್ನಡಿಗನ ನಡೆಗೆ ವ್ಯಾಪಕ ಮೆಚ್ಚುಗೆ!