ಹಾಡಿನ ಮೂಲಕ ಪ್ರೇಮಲೋಕಕ್ಕೆ ಆಹ್ವಾನ ನೀಡಿದ್ದಾರೆ ರಿಚ್ಚಿ

Public TV
1 Min Read
Richie 2 1

ಹಾಡುಗಳೇ ಚಿತ್ರಕ್ಕೆ ಮೊದಲು ಆಮಂತ್ರಣವಿದ್ದಂತೆ. ಇಂಥದ್ದೊಂದು ಆಮಂತ್ರಣವನ್ನು ತಯಾರಿಸಿ ಜನರ ಮುಂದೆ ಹೋಗಿದ್ದಾರೆ ನಿರ್ದೇಶಕ, ನಟ, ನಿರ್ಮಾಪಕ ರಿಚ್ಚಿ (Richie). ಈ ಚಿತ್ರದ ಮೋಹಕ ಹಾಡೊಂದು ಇದೀಗ ಬಿಡುಗಡೆಯಾಗಿದ್ದು, ಕುನಾಲ್ ಗಾಂಜಾವಾಲಾ ಸಂಗೀತದೊಂದಿಗೆ ಹಾಡು (Song) ಮೂಡಿ ಬಂದಿದೆ. ಈ ಚೆಂದದ ಹಾಡು ಕೇಳುಗರನ್ನೆಲ್ಲ ಒಂದೇ ಸಲಕ್ಕೆ ಪ್ರೇಮ ಲೋಕದಲ್ಲಿ ತೇಲಾಡಿಸುತ್ತಿದೆ.

Richie 3 1

‘ಕಳೆದು ಹೋಗಿರುವೆ ನಿನ್ನ ನೋಡಿ, ಜೀವ ಹಿಂಡುತಿದೆ ಒಲವು ಮೂಡಿ’ ಅಂತ ಶುರುವಾಗುವ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲದರಲ್ಲಿಯೂ ಮೋಡಿ ಮಾಡುವಂತಿದೆ. ಅದರಲ್ಲಿಯೂ ರಿಚ್ಚಿ ಮತ್ತು ರಮೋಲಾ ಜೋಡಿ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಕಾಣಿಸಿಕೊಂಡಿದೆ. ಈ ಮೂಲಕ ಇದೊಂದು ಅದ್ಭುತ ಪ್ರೇಮ ಕಥಾನಕವಾಗಿ ದಾಖಲಾಗುವ ಭರವಸೆಯಂತೂ ದಟ್ಟವಾಗಿದೆ. ಈ ಹಾಡಿನ ಮೂಲಕ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗೀತರಚನೆಕಾರ ಗೌಸ್ ಪೀರ್ ಖಾತೆಗೆ ಮತ್ತೊಂದು ಮಧುರವಾದಗೀತೆ  ಜಮೆಯಾಗಿದೆ. ಅಗಸ್ತ್ಯ ಸಂತೋಷ್ (Agastya Santosh) ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಗೀತೆಯನ್ನು, ಕುನಾಲ್ ಗಾಂಜಾವಾಲಾ(Kunal Ganjawala)  ಹಾಡಿದ್ದಾರೆ.

Richie 4 1

ಅಣಜಿ ನಾಗರಾಜ್ ಅರ್ಪಿಸುವ ಈ ಸಿನಿಮಾ, ರಿಚ್ಚಿ ಪಾಲಿನ ಕನಸಿನ ಕೂಸು. ಸ್ವತಃ ನಿರ್ಮಾಪಕರಾಗಿ ಈ ಸಿನಿಮಾವನ್ನು ಪೊರೆದಿರುವ ಅವರಿಗೆ ರಾಕೇಶ್ ರಾವ್ ಸಹ ನಿರ್ಮಾಪಕರಾಗಿ ಹೆಗಲು ಕೊಟ್ಟಿದ್ದಾರೆ. ಈ  ವೀಡಿಯೋ ಸಾಂಗ್ ಮೂಲಕ ರೊಮ್ಯಾಂಟಿಕ್ ಲೋಕಕ್ಕೆ ಕರೆದೊಯ್ಯುತ್ತಾರೆ. ಲವ್ ಮತ್ತು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಜಾನರ್ ನಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಇದನ್ನೂ ಓದಿ:ಸಹೋದರ ವರುಣ್ ತೇಜ್- ಲಾವಣ್ಯ ಮದುವೆ ಬಗ್ಗೆ ನಿಹಾರಿಕಾ ಪ್ರತಿಕ್ರಿಯೆ

Richie 1 1

ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಮಾಸ್ಟರ್ ನೃತ್ಯ ಸಂಯೋಜನೆ ಚಿತ್ರಕ್ಕಿದ್ದು, ಪ್ರತಿಭಾವಂತ ತಾರಾಗಣ ಹಾಗೂ ನುರಿತ ತಾಂತ್ರಿಕ ವರ್ಗ ಚಿತ್ರಕ್ಕಾಗಿ ಕೆಲಸ ಮಾಡಿದೆ. ಅಜಿತ್ ಕುಮಾರ್ ಎನ್ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಚಿನ್ನಿ ಪ್ರಕಾಶ್, ಧನಂಜಯ ಮತ್ತು ಭೂಷಣ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ರಿಲೀಸ್ ಆಗಿರುವ ಹಾಡಿನ ಮೂಲಕ ಚಿತ್ರ ನಿರೀಕ್ಷೆ ಮೂಡಿಸಿದೆ.

Share This Article