ಮುಂಬೈ: ದೇಶಾದ್ಯಂತ ಗಣೇಶ ಹಬ್ಬದ (Ganesh Chaturthi) ಸಂಭ್ರಮ ಮನೆ ಮಾಡಿದೆ. ವಿಘ್ನೇಶ್ವರನ ಭಕ್ತರು ಬಗೆಬಗೆಯ ಗಣೇಶ ಮೂರ್ತಿಗಳನ್ನ (Ganesh Idol) ಕೂರಿಸಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸಕಲ ವಿಘ್ನಗಳು ನಿವಾರಣೆಯಾಗಲಿ ವಿನಾಯಕನು ನಂಬಿದ ಭಕ್ತರಿಗೆ ಬುದ್ಧಿ, ಆಯುಷ್ಯ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ದಯಪಾಲಿಸುತ್ತಾನೆ ಎಂಬ ನಂಬಿಕೆಯೊಂದಿಗೆ ಗಣೇಶೋತ್ಸವ ಆಚರಣೆ ಮಾಡುತ್ತಿದ್ದಾರೆ.
#WATCH | Maharashtra | ‘Richest’ Ganpati of Mumbai – by GSB Seva Mandal – installed for the festival of #GaneshChaturthi.
The idol has been adorned with 69 kg of gold and 336 kg of silver this year. pic.twitter.com/hR07MGtNO6
— ANI (@ANI) September 18, 2023
Advertisement
ಈ ನಡುವೆ ಮುಂಬೈನ ಜಿಎಸ್‌ಬಿ ಸೇವಾ ಮಂಡಲ (GSB Seva Mandal) ದೇಶದಲ್ಲೇ ಅಂತ್ಯಂತ ಶ್ರೀಮಂತ ಗಣೇಶ ಮೂರ್ತಿಯನ್ನ ಕೂರಿಸಿ, ಗಣೇಶೋತ್ಸವವನ್ನು ಆಚರಿಸುತ್ತಿದೆ. ವಿಶೇಷವೆಂದರೆ ಈ ಗಣೇಶನ ಮೂರ್ತಿಯ ಅಲಂಕಾರಕ್ಕೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿಯನ್ನು ಬಳಕೆ ಮಾಡಲಾಗಿದೆ. ಇದನ್ನೂ ಓದಿ: ಫ್ರೀ ಕರೆಂಟ್, ಮಹಿಳೆಯರಿಗೆ ತಿಂಗಳಿಗೆ 2,500 ರೂ., ಉಚಿತ ಬಸ್ ಪ್ರಯಾಣ: ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ
Advertisement
ಹೌದು.. ಮುಂಬೈನ ಅತ್ಯಂತ ದೊಡ್ಡ ಗಣೇಶ ಎನ್ನಲಾದ ಕಿಂಗ್ಸ್ ಸರ್ಕಲ್ನ ಈ ಗಣಪತಿಗೆ ಹೀಗೆ ಚಿನ್ನ-ಬೆಳ್ಳಿಯಲ್ಲಿ ಭರ್ಜರಿ ಅಲಂಕಾರ ಮಾಡಲಾಗಿದೆ. ಜಿಎಸ್‌ಬಿ ಸೇವಾ ಮಂಡಲದವರು ಅದ್ಧೂರಿಯಾಗಿ ವರ್ಷಪೂರ್ತಿ ಆಚರಿಸುವ ಈ ಗಣೇಶ ಉತ್ಸವ ಪ್ರಸಿದ್ಧಿ ಪಡೆದಿದ್ದು, ಪ್ರತಿ ವರ್ಷವೂ ದೇಶದ ಗಮನ ಸೆಳೆಯುತ್ತದೆ. ಈ ಬಾರಿ ಸೆ.19ರಿಂದ 23ರ ವರೆಗೂ ಇಲ್ಲಿ ಗಣೇಶ ಚತುರ್ಥಿ ಉತ್ಸವ ಆಚರಣೆ ಆಗಲಿದೆ.
Advertisement
ಈ ಗಣೇಶನಿಗೆ ವೈಭವೋಪೇತ ಅಲಂಕಾರ ಮಾಡಲಾಗುತ್ತಿದ್ದು, ಈ ಸಲ ಅಲಂಕಾರಕ್ಕೆಂದೇ 69 ಕೆಜಿ ಚಿನ್ನ ಹಾಗೂ 336 ಕೆಜಿ ಬೆಳ್ಳಿ ಬಳಸಲಾಗಿದೆ. ದುಬಾರಿ ಅಲಂಕಾರ ಮತ್ತಿತರ ಕಾರಣಗಳಿಂದಾಗಿ ಈ ಗಣೇಶನಿಗೆ ಪ್ರತಿವರ್ಷ ವಿಮೆ ಕೂಡ ಮಾಡಿಸಲಾಗುತ್ತಿದ್ದು, ಈ ಬಾರಿ 360 ಕೋಟಿ ರೂ.ಗೆ ವಿಮೆ ಮಾಡಿಸಲಾಗಿದೆ. ಇದನ್ನೂ ಓದಿ: ಗದರ್-2 ಸಿನಿಮಾ ನೋಡಿ ‘ಹಿಂದೂಸ್ತಾನ್ ಜಿಂದಾಬಾದ್’ ಎಂದು ಕೂಗಿದ ವ್ಯಕ್ತಿಯನ್ನ ಹೊಡೆದು ಕೊಂದ ಸ್ನೇಹಿತರು
Advertisement
ಕಳೆದ ವರ್ಷ ಜಿಎಸ್‌ಬಿ ಮಂಡಲವು 316.40 ಕೋಟಿ ರೂ. ವಿಮೆ ಮಾಡಿಸಿತ್ತು. ಆದರೆ ಈ ಬಾರಿ ವಿಮೆ ಮೊತ್ತವು 44 ಕೋಟಿ ರೂ. ಹೆಚ್ಚಾಗಿದೆ. ಅದ್ರೆ ಎಷ್ಟು ಪ್ರೀಮಿಯಂ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಧಿಕೃತಗೊಳಿಸಿಲ್ಲ.
Web Stories