ನಟನೆಯಲ್ಲೇ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಅವರು ಯಾವಾಗ ನಿರ್ದೇಶನ ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿ ಬಂದಿತ್ತು. ಈಗಾಗಲೇ ಅನೌನ್ಸ್ ಆಗಿರುವ ರಿಚರ್ಡ್ ಆಂಟೋನಿ ಸಿನಿಮಾ ಯಾವಾಗ ಸೆಟ್ಟೇರಲಿದೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಸದ್ಯ ಅವರು ಹೇಮಂತ್ ರಾವ್ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಶೂಟಿಂಗ್ ಮುಗಿದ ತಕ್ಷಣವೇ ರಿಚರ್ಡ್ ಆಂಟೋನಿ ಶುರು ಮಾಡುವುದಾಗಿ ತಿಳಿಸಿದ್ದಾರೆ.
ಸಪ್ತ ಸಾಗರದಾಚೆ ಸಿನಿಮಾದ ಶೂಟಿಂಗ್ ನಡೆಯಬೇಕಿದೆ. ಅದಕ್ಕಾಗಿ ಅವರು ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ. ಅಂದುಕೊಂಡಂತೆ ಆದರೆ, ಡಿಸೆಂಬರ್ ಅಥವಾ ಜನವರಿ ಮೊದಲ ವಾರದಲ್ಲೇ ತಮ್ಮ ನಿರ್ದೇಶನದ ರಿಚರ್ಡ್ ಆಂಟೋನಿ ಸಿನಿಮಾ ಶುರು ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತಂತೆ ಈಗಿನಿಂದಲೇ ಸ್ಕ್ರಿಪ್ಟ್ ಮತ್ತಿತರ ಕೆಲಸಗಳನ್ನೂ ಪ್ರಾರಂಭಿಸಿದ್ದಾರಂತೆ. ಡಿಸೆಂಬರ್ ಹೊತ್ತಿಗೆ ಶೂಟಿಂಗ್ ಮುನ್ನ ಮಾಡಬೇಕಾದ ಕೆಲಸಗಳನ್ನು ಮುಗಿಸುತ್ತಾರಂತೆ. ಇದನ್ನೂ ಓದಿ:ಅಂಡರ್ ವರ್ಲ್ಡ್ ನಿಂದಾಗಿ ಬಾಲಿವುಡ್ ನಟಿ ಸೋನಾಲಿ ಬೇಂದ್ರೆಗೆ ಹಿನ್ನೆಡೆ
ಸದ್ಯ ಚಾರ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಕ್ಷಿತ್, ಇನ್ನೂ ಹಲವು ಸಿನಿಮಾಗಳನ್ನು ಅವರದ್ದೇ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಿದ್ದಾರೆ. ಅದಕ್ಕೂ ಸಿದ್ಧತೆ ನಡೆಸಿದ್ದಾರೆ. ರಚರ್ಡ್ ಆಂಟೋನಿ ಸಿನಿಮಾ ಉಳಿದವರು ಕಂಡಂತೆ ಚಿತ್ರದ ಮುಂದುವರಿಕೆಯ ಭಾಗವಾಗಿದ್ದರಿಂದ, ಪಕ್ಕಾ ತಯಾರಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಇಳಿಯಲಿದ್ದಾರಂತೆ ರಕ್ಷಿತ್.