ಬೆಂಗಳೂರು: ಬಾಲಿವುಡ್ ನಟಿ ರಿಚಾ ಛಡ್ಡಾ ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಯಸ್ಕರ ಸಿನಿಮಾಗಳ ಮೂಲಕವೇ ಪ್ರಸಿದ್ಧರಾದ ಶಕೀಲಾ ಬದುಕಿನ ಕಥೆ ಎಂಥವರನ್ನೂ ಭಾವುಕರನ್ನಾಗಿಸುವಂಥಾದ್ದು. ಅಂಥಾ ಶಕೀಲಾ ಪಾತ್ರ ನಿರ್ವಹಿಸುತ್ತಿರುವ ರಿಚಾ ಈ ಚಿತ್ರಕ್ಕಾಗಿ ಭಾರೀ ತಯಾರಿ ಆರಂಭಿಸಿಕೊಂಡೇ ಅಖಾಡಕ್ಕಿಳಿದಿದ್ದಾರೆ.
ಈ ಪಾತ್ರವನ್ನು ಮಾಡಲು ಒಪ್ಪಿಕೊಂಡ ನಂತರ ರಿಚಾ ಶಕೀಲಾ ಅವರನ್ನು ಖುದ್ದಾಗಿ ಭೇಟಿಯಾಗಿದ್ದರಂತೆ. ಅವರ ಸಾಂಗತ್ಯದೊಂದಿಗೆ ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲೆತ್ನಿಸಿದ್ದ ರಿಚಾ ಶಕೀಲ ಜೊತೆ ಗಂಟೆಗಟ್ಟಲೆ ಮಾತಾಡಿದ್ದರಂತೆ. ಈ ಭೇಟಿ ಪುನರಾವರ್ತನೆಯಾದಾಗ ಇಬ್ಬರ ನಡುವೆ ಆತ್ಮೀಯತೆ ಬೆಳೆದುಕೊಂಡು ತಂತಮ್ಮ ಪರ್ಸನಲ್ ವಿಚಾರಗಳನ್ನೂ ವಿನಿಮಯ ಮಾಡಿಕೊಂಡಿದ್ದರಂತೆ.
ಈ ಬಗ್ಗೆ ರಿಚಾ ಛಡ್ಡಾ ಹೇಳಿಕೊಂಡಿದ್ದಾರೆ. ಮೊದಲ ಸಲ ಶಕೀಲಾರನ್ನು ರಿಚಾ ಭೇಟಿಯಾಗಿ ಒಂದಷ್ಟು ಮಾತಾಡಿ ಬಂದಿದ್ದರು. ಆದರೆ ಎರಡನೇ ಸಲ ಭೇಟಿಯಾದಾಗ ಶಕೀಲಾ ತಮ್ಮ ಬದುಕಿನ ಕೆಲ ಪುಟಗಳನ್ನು ಬಿಚ್ಚಿಟಾಗ ರಿಚಾ ಛಡ್ಡ ಅತ್ತು ಬಿಟ್ಟಿದ್ದರಂತೆ. ಹೊರ ಜಗತ್ತಿಗೆ ಮಾದಕತೆಯ ಸಿಂಬಲ್ ಆಗಿ ಕಾಣಿಸುವ ಶಕೀಲಾ ಅವರೊಳಗೆ ಅವಿತಿರೋ ಆದ್ರ್ರ ಭಾವಗಳನ್ನು ಕಂಡು ಭಾವುಕರಾಗಿದ್ದರಂತೆ.
ಈ ಭೇಟಿ ಮತ್ತು ಸಲುಗೆಯಿಂದ ಶಕೀಲಾ ಪಾತ್ರವನ್ನು ಪರಿಣಾಮಕಾರಿಯಾಗಿ ಪ್ರಸದ್ತುತಪಡಿಸಲು ಸಾಧ್ಯವಾಗಿದೆ ಎಂಬುದು ರಿಚಾ ಛಡ್ಡಾ ಅಭಿಪ್ರಾಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv