ಬೆಂಗಳೂರು: ಜಿಎಸ್‍ಟಿ ಬಳಿಕ ಕೊಂಚ ಕಡಿಮೆಯಾಗಿದ್ದ ಬೇಳೆ ಕಾಳು, ಬೆಲ್ಲ, ರಾಗಿ ಬೆಲೆ ಏರಿಕೆಯಾಗಿದೆ.
ಬೇಳೆ ಕಾಳು ಈಗ ಕೆಜಿಗೆ ನೂರರ ಗಡಿ ದಾಟಿದೆ. ಬಹುತೇಕ ಎಲ್ಲಾ ಬೇಳೆ ಕಾಳುಗಳ ಬೆಲೆ ಹತ್ತು ರೂಪಾಯಿಗೆ ಏರಿಕೆಯಾಗಿದ್ದು, ದಿನಸಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.
Advertisement
ಬೆಲ್ಲ ಕೆಜಿಗೆ ಬರೋಬ್ಬರಿ ಇಪ್ಪತ್ತು ರೂ ಏರಿಕೆಯಾಗಿದ್ದು, ರಾಗಿ ಹಿಟ್ಟು ದರವೂ ಕೆಜಿಗೆ ಐದರಿಂದ ಆರರಿಂದ ಏಳು ರೂಪಾಯಿಗೆ ಏರಿಕೆಯಾಗಿದೆ. ಮೈದಾ, ರವೆ, ಗೋಧಿ ಹಿಟ್ಟು ಅಕ್ಕಿ ದರವೂ ಏರಿಕೆಯಾಗಿದೆ.
Advertisement
ಮಳೆ ಅಭಾವದ ಜೊತೆ ಕೃತಕ ಅಭಾವ ಸೃಷ್ಟಿಯಾಗಿರುವ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.