ಬೆಂಗಳೂರು: ಕಳೆದ ಕೆಲ ದಿನಗಳಿಂದ ಅದೆಷ್ಟೋ ಜನ ಬೇಳೆ ರೇಟ್ ಜಾಸ್ತಿ, ತರಕಾರಿ ರೇಟ್ ಜಾಸ್ತಿಯಾಗಿತ್ತು. ಹೀಗಾಗಿ ಅವುಗಳಿಗೆ ಕಡಿಮೆ ದರದಲ್ಲಿ ಸಿಗುವ ಕೆಲ ಪರ್ಯಾಯ ಆಹಾರ ಪದಾರ್ಥಗಳನ್ನ ಹುಡುಕಿಕೊಂಡು ಅನ್ನದ ಜೊತೆ ಹೇಗೋ ಸೇವಿಸೋಣ ಅಂತಾ ಜೀವನ ನಡೆಸುತ್ತಿದ್ದರು. ಆದರೆ ಈಗ ಅಕ್ಕಿ ದರ (Rice Rate) ಕೂಡ ಗಗನಕ್ಕೇರುತ್ತಿದ್ದು ಇನ್ನೇನ್ ತಿನ್ನೋದು ಅನ್ನೋ ಚಿಂತೆ ಶುರುವಾಗ್ತಿದೆ.
ಹೌದು. ಜುಲೈ ಎರಡನೇ ವಾರದಿಂದ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಅಕ್ಕಿ ಬೆಲೆ ಏರಿಕೆಯಾಗುತ್ತಿದೆ. ರಿಟೇಲ್ ದರ ಸಾಮಾನ್ಯವಾಗಿ ಹೋಲ್ ಸೇಲ್ ಬೆಲೆಗಿಂತ ಕನಿಷ್ಠ 10% ಹೆಚ್ಚಾಗಿದೆ. ಕಳೆದ ಕೆಲವು ವಾರಗಳಿಂದ ಅಕ್ಕಿಯ ಬೆಲೆಯು ಸರಾಸರಿ 15% ರಷ್ಟು ಏರಿಕೆ ಕಂಡಿದೆ. ಅದರಲ್ಲೂ ಇಡೀ ಏಷ್ಯಾದಲ್ಲಿ ಅಕ್ಕಿ ಬೆಲೆ ದಾಖಲೆ ಏರಿಕೆ ಕಂಡಿದ್ದು, ಕಳೆದ 15 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಮಟ್ಟಕ್ಕೆ ಜಿಗಿದಿದೆ. ಅಕ್ಕಿಯನ್ನು ಪ್ರಧಾನವಾಗಿ ಸೇವಿಸುವ ಪ್ರದೇಶಗಳಲ್ಲಿನ ಜನರಿಗೆ ಅಕ್ಕಿ ದರ ಏರಿಕೆ ಶಾಕ್ ಕೊಟ್ಟಿದೆ. ಕಳೆದ ವರ್ಷ ಭಾರೀ ಮಳೆಯಿಂದಾಗಿ ಅಕ್ಕಿ ಉತ್ಪಾದನೆ ಕಡಿಮೆಯಾಗಿದೆ. ಇದರ ಜೊತೆಗೆ ಈ ವರ್ಷ ಮುಂಗಾರು ಮಳೆ ವಿಳಂಬ ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯಲ್ಲಿ ಸಾಮಾನ್ಯ ಏರಿಕೆಯು ಅಕ್ಕಿ ಬೆಲೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
Advertisement
Advertisement
ಅನಿಯಮಿತ ಮಳೆಯಿಂದಾಗಿ (Rain) ಭತ್ತದ ಉತ್ಪಾದನೆ ಆಗಿಲ್ಲ. ಇದು ಈಗ ಆತಂಕ ತಂದಿದೆ. ಹಲವೆಡೆ ಮಳೆ ಕೊರತೆಯಿಂದ ಬಿತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಜೊತೆಗೆ ಕೆಲವೆಡೆ ಅತಿವೃಷ್ಠಿ ಕೂಡ ಈ ದರ ಏರಿಕೆ ಕಾರಣ ಎನ್ನಲಾಗುತ್ತಿದೆ. ಇನ್ನೂ ಇದೇ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ಮುಂದುವರಿದರೆ ಕೆಲ ಪಾಶ್ಚಾತ್ಯ ದೇಶಗಳಲ್ಲಿ ಉಂಟಾಗಿರುವ ಪರಿಸ್ಥಿತಿ ನಮ್ಮಲ್ಲೂ ಸಹ ಎದುರಾಗಬಹುದು ಎಂದು ಕೆಲ ವ್ಯಾಪಾರಿಗಳು ಹೇಳುತ್ತಾರೆ. ಇದನ್ನೂ ಓದಿ: ಕರುನಾಡ ಮಂದಿಗೆ ಮತ್ತೊಂದು ಶಾಕ್- ಬೇಳೆ, ತರಕಾರಿ ಬಳಿಕ ಅಕ್ಕಿ ಬೆಲೆಯೂ ದುಬಾರಿ
Advertisement
ಅಕ್ಕಿ – ಹಿಂದಿನದರ – ಈಗಿನದರ:
– ಸೋನಾ ಮಸೂರಿ ರಾ – 58 ರೂ.-65 ರೂ.
– ಸೋನಾ ಮಸೂರಿ- 50 ರೂ. -60 ರೂ.
– ಸೋನಾ ಸ್ಟೀಮ್- 45 ರೂ. – 55 ರೂ.
– ಎಲ್‍ಡಿ8 – 35 ರೂ.- 40 ರೂ.
– ಬಾಯ್ಲ್ಡ್ ರೈಸ್ – 35 ರೂ. -45 ರೂ.
– ಜೀರಾ ರೈಸ್ – 100 ರೂ. – 120 ರೂ.
– ಬಾಸ್ಮಾತಿ – 140 ರೂ.- 160 ರೂ.
– ಬುಲೆಟ್ ರೈಸ್ – 60 ರೂ. – 70 ರೂ.
– ರಾಜಮುಡಿ ಅಕ್ಕಿ – 64 ರೂ. – 74 ರೂ.
– ಇಡ್ಲಿ, ದೋಸೆ ಮತ್ತು ಬಿಪಿಎಲ್ ಕುಟುಂಬಗಳು ಬಳಸುವ ಅಕ್ಕಿ- 30 ರೂ. – 36 ರೂ.
Advertisement
ರಾಜ್ಯದಲ್ಲಿ ರಾಯಚೂರು, ಸಿಂಧಗಿ, ಕಾಟಗಿ, ಗಂಗಾವತಿ ಭಾಗಗಳಲ್ಲಿ ಹೆಚ್ಚು ಅಕ್ಕಿ ಉತ್ಪಾದನೆ ಆಗುತ್ತದೆ. ಸದ್ಯ ಈ ಭಾಗದಲ್ಲೂ ಮಳೆ ಕಡಿಮೆಯಾಗಿದ್ದ ಕಾರಣ ಈ ಭಾಗ ಜೀವನಾಡಿ ಕೃಷ್ಣ ನದಿಯಲ್ಲಿ ನೀರು ಕಡಿಮೆ ಇರುವ ಕಾರಣ ಈ ಭಾಗದಲ್ಲೂ ಹೆಚ್ಚು ಉತ್ಪಾದನೆ ಆಗಿಲ್ಲ. ಜೊತೆಗೆ ಮುಂದಿನ ದಿನಕ್ಕೆ ಬೇಕಾದಂತಹ ಬಿತ್ತನೆ ಕಾರ್ಯ ಕೂಡ ಸಂಪೂರ್ಣ ಆಗಿಲ್ಲ ಈಗಾಗಿ ರಾಜ್ಯದಲ್ಲಿ ಉತ್ಪಾದನೆಯಾಗುವ ಅಕ್ಕಿ ಪ್ರಮಾಣ ದೊಡ್ಡ ಮಟ್ಟದಲ್ಲೇ ಇಳಿಕೆ ಕಾಣ್ತಿದ್ದು ರಾಜ್ಯದಲ್ಲಿ ಅಕ್ಕಿ ಅಭಾವ ಸೃಷ್ಟಿಯಾಗುತ್ತಾ ಅನ್ನೋ ಆತಂಕ ಹೆಚ್ಚಾಗಿದೆ. ಜೊತೆಗೆ ಹೊರ ರಾಜ್ಯಗಳಾದ ಆಂಧ್ರ, ತಮಿಳುನಾಡು, ಪಂಜಾಬ್ ಗಳಿಂದ ಅಕ್ಕಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಕೆಲ ದಿನಗಳಿಂದ ಆಂಧ್ರ ಪ್ರದೇಶ ತನ್ನ ಅಕ್ಕಿಯನ್ನ ಹೊರ ರಾಜ್ಯಕ್ಕೆ ಪೂರೈಕೆ ಮಾಡೋದನ್ನ ನಿಲ್ಲಿಸಿದೆ. ಜೊತೆಗೆ ಪಂಜಾಬ್ ನಿಂದ ಬಾಸುಮತಿ ಮಾತ್ರ ಪೂರೈಕೆಯಾಗುತ್ತಿದ್ದು, ಇದನ್ನ ರೇಟ್ ಹೆಚ್ಚಾಗಿರುವ ಕಾರಣ ದಿನನಿತ್ಯ ಬಳಕೆ ಅಸಾಧ್ಯ ಆಗ್ತಿದೆ. ಇನ್ನೂ ಸದ್ಯ ತಮಿಳುನಾಡಿನಿಂದ ಮಾತ್ರ ಕೆಲ ಅಕ್ಕಿ ಪೂರೈಕೆಯಾಗುತ್ತಿದ್ದು, ರಾಜ್ಯದಲ್ಲಿ ಮಳೆಯಾಗದಿದ್ದರೆ ಇನ್ನಷ್ಟು ಅಕ್ಕಿ ಎಮರ್ಜೆನ್ಸಿ ಎದುರಾಗುವ ಸಾಧ್ಯತೆ ಇದೆ.
ಒಟ್ಟಾರೆ ಸದ್ಯದ ಪರಿಸ್ಥಿತಿ ಪ್ರಕಾರ ಸದ್ಯದಲ್ಲೇ ಮಳೆಯಾದ್ರೆ ಮುಂದಿನ ನವೆಂಬರ್ ವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಅಕಸ್ಮಾತ್ ಮತ್ತೆ ಮಳೆ ಕೈ ಕೊಟ್ಟರೆ ಅಕ್ಕಿ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ.
Web Stories