ಊಟ ಮಾಡಿದ್ದೇವೆ ಎನ್ನುವ ತೃಪ್ತಿ ಹೊಟ್ಟೆ ಮತ್ತು ನಾಲಿಗೆಗೆ ಬರಬೇಕಾದರೆ ಅನ್ನ ಇರಲೇ ಬೇಕು. ಅನ್ನ ತಿನ್ನುವುದರಿಂದ ದಪ್ಪಗಾಗುತ್ತೇವೆ. ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವರು ಹೇಳುವುದನ್ನು ಕೇಳಿರಬಹುದು. ಆದರೆ ಇದು ತಪ್ಪು ಕಲ್ಪನೆಯಾಗಿದೆ. ಅನ್ನದಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನವನ್ನು ಕೇಳಿದರೆ ಖಂಡಿತಾ ಆಶ್ಚರ್ಯವಾಗುವುದು ಹೌದು.
Advertisement
* ಅಕ್ಕಿ ಪ್ರಿಬಯಾಟಿಕ್ (Prebiotic) ಆಗಿದೆ ಎಂದು ನ್ಯೂಟ್ರಿಷನ್ ತಜ್ಞರು ನಂಬುತ್ತಾರೆ. ಅನ್ನ ಸೇವನೆಯಿಂದ ಹೊಟ್ಟೆ ಬೇಗ ತುಂಬುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆಯು ಕೂಡ ಬಲವಾಗಿರುತ್ತದೆ.
Advertisement
* ಅನ್ನವನ್ನು ಮೊಸರು, ಕರಿ, ದ್ವಿದಳ ಧಾನ್ಯಗಳು, ತುಪ್ಪ ಮತ್ತು ಮಾಂಸದೊಂದಿಗೆ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.
Advertisement
Advertisement
* ಅನ್ನ ಸೇವನೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಯಾರಿಗಾದರೂ ಕೂದಲು ಉದುರುವಿಕೆಯ ದೂರು ಇದ್ದರೆ ಖಂಡಿತವಾಗಿಯೂ ಅನ್ನವನ್ನು ಸೇವಿಸಬೇಕು.
* ಉತ್ತಮ ಹಾರ್ಮೋನ್ ಸಮತೋಲನದಲ್ಲಿ ಅನ್ನ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನೂ ಓದಿ: ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್
ಅಕ್ಕಿ ತೊಳೆದ ನೀರಿನ ಪ್ರಯೋಜನ
* ಅಕ್ಕಿಯ ನೀರಿನಲ್ಲಿ ನಾರಿನ ಅಂಶ ಹೆಚ್ಚಳವಾಗಿದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ, ಇದರಿಂದಾಗಿ ಜೀಣಾರ್ಂಗ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.
* ಅಕ್ಕಿಯ ನೀರು ಕೂದಲಿನ ಸೌಂದರ್ಯ ಹೆಚ್ಚಿಸುವ ಉತ್ಕರ್ಷಣ ನಿರೋಧಕವಾಗಿದೆ. ಇದನ್ನೂ ಓದಿ: 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆ ಏರಿಕೆ
* ದೀರ್ಘಕಾಲದ ಆಯಾಸ ಅಥವಾ ಬಳಲಿಕೆಯಿಂದ ಬಳಲುತ್ತಿರುವವರಿಗೆ, ಬೇಯಿಸಿದ ಅನ್ನದಿಂದ ಪಡೆದ ಒಂದು ಲೋಟ ಅಕ್ಕಿ ನೀರು ನೀಡಿದರೆ ಸಾಕು ಅವರು ಆರಾಮಾಗಿ ಬಿಡುತ್ತಾರೆ.