ಜೀ ಕನ್ನಡ ವಾಹಿನಿಯಲ್ಲಿ ‘ಸರಿಗಮಪ’ ಕಾರ್ಯಕ್ರಮದ ಜ್ಯೂರಿಯಾಗಿದ್ದ ಎಸ್. ಬಾಲಿ (S.Bali) ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ನಿರೂಪಕಿ ಅನುಶ್ರೀ, ನಟಿ ಚಿತ್ಕಲಾ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ:ಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ: ಖಡಕ್ ಡೈಲಾಗ್ ಹೊಡೆದ ಗಣೇಶ್
Advertisement
ಖ್ಯಾತ ವಾದ್ಯಗಾರರು, ಸಂಗೀತ ನಿರ್ದೇಶಕರು, ಸರಿಗಮಪ ವೇದಿಕೆಯ ಜ್ಯೂರಿಯಾಗಿದ್ದ ಶ್ರೀ ಎಸ್.ಬಾಲಸುಬ್ರಹ್ಮಣ್ಯಂ (ಎಸ್.ಬಾಲಿ) ಅವರು 71ನೇ ವಯಸ್ಸಿಗೆ ಕೊನೆಯುಸಿರೆಳೆದಿದ್ದಾರೆ. ರಿದಮ್ ಕಿಂಗ್ ಎಂದೇ ಅವರು ಫೇಮಸ್ ಆಗಿದ್ದರು.
Advertisement
View this post on Instagram
Advertisement
ಇನ್ನೂ ಬಾಲಿ ಅವರ ಸಂಗೀತ ಸೇವೆಗೆ ಹಲವು ಪ್ರಶಸ್ತಿಗಳು ದಕ್ಕಿದೆ. ಕರ್ನಾಟಕ ಕಲಾಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಅವರ ಪಾಲಾಗಿತ್ತು. ಇದೀಗ ಅವರ ನಿಧನದಿಂದ ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ.