ಬೆಂಗಳೂರು: ಹಲವು ಬಾರಿ ವಿವಾದಗಳಿಂದಲೇ ಸುದ್ದಿಯಾಗಿರುವ ಟಾಲಿವುಡ್ ನಿರ್ದೇಶಕ ರಾಮ್‍ಗೋಪಲ್ ವರ್ಮಾ ಸದ್ಯ ತಮ್ಮ ಮುಂದಿನ ಚಿತ್ರದ ನಟನನ್ನು ಹುಡುಕಿಕೊಟ್ಟ ವ್ಯಕ್ತಿಗೆ 1 ಲಕ್ಷ ರೂ. ಬಹುಮಾನ ನೀಡಿದ್ದಾರೆ.
ಹೌದು, ವರ್ಮಾ ಸದ್ಯ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಎನ್‍ಟಿಆರ್ ಅವರ ಪತ್ನಿ ಲಕ್ಷ್ಮೀ ಕುರಿತು ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಹಾಲಿ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರ ಪಾತ್ರಕ್ಕೆ ಅವರಂತೆ ಕಾಣುವ ವ್ಯಕ್ತಿಯ ಹುಡುಕಾಟ ನಡೆಸಿದ ವೇಳೆ ಅವರಿಗೆ ಒಂದು ವಿಡಿಯೋ ಒಂದು ಲಭ್ಯವಾಗಿದೆ.
Advertisement
Lakshmi’s NTR is the first film ever in my career that I will be doing a muhurat and that too in Thirupathi at the feet of Lord Balaji and that’s because of my respect for NTR #NTRTRUESTORY pic.twitter.com/7PW32um07e
— Ram Gopal Varma (@RGVzoomin) October 12, 2018
Advertisement
ವಿಡಿಯೋ ನೋಡುತ್ತಿದಂತೆ ವ್ಯಕ್ತಿಯ ಹುಡುಕಾಟ ಆರಂಭಿಸಿದ ಆರ್‌ಜಿವಿ, ವ್ಯಕ್ತಿಯ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಈತನ ಕುರಿತು ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದರಂತೆ ಸದ್ಯ ವ್ಯಕ್ತಿಯೊಬ್ಬರು ಆತನ ಕುರಿತು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
Advertisement
Can somebody help me track this man?..There will be a reward of 1 lak to anyone who can make him get in touch with me ???? pic.twitter.com/8voaODqrAP
— Ram Gopal Varma (@RGVzoomin) October 13, 2018
Advertisement
[email protected] ಇಮೇಲ್ ಕ್ರಿಯೇಟ್ ಮಾಡಿದ್ದ ಆರ್‌ಜಿವಿ ಈ ಮಾಹಿತಿ ನೀಡುವಂತೆ ಟ್ವೀಟ್‍ನಲ್ಲಿ ಬರೆದುಕೊಂಡಿದ್ದರು. ಈ ಮೂಲಕ ಸಿನಿಮಾ ಪ್ರಚಾರವನ್ನು ಮಾಡಿದ್ದರು. ರಾಮ್‍ಗೋಪಾಲ್ ವರ್ಮಾ ಟ್ವೀಟ್ ಮಾಡಿರುವ ವಿಡಿಯೋದಲ್ಲಿ ವ್ಯಕ್ತಿ ಹೋಟೆಲ್ ಒಂದರಲ್ಲಿ ಸಪ್ಲೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನೋಡಲು ಚಂದ್ರ ಬಾಬು ಅವರಂತೆ ಇರುವುದೇ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲು ಪ್ರಮುಖ ಕಾರಣ ಎಂದು ನಿರ್ದೇಶಕ ತಿಳಿಸಿದ್ದಾರೆ.
ಸದ್ಯ ಹೈದರಾಬಾದ್ ನ ರೋಹಿತ್ ಎಂಬವರು ವಿಡಿಯೋದಲ್ಲಿ ಇರುವ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಮಾಹಿತಿ ನೀಡಿದಕ್ಕೆ ನಿಮಗೆ ಧನ್ಯವಾದ, ನೀವು ಕೂಡ ಸಿನಿಮಾ ಬಹುದೊಡ್ಡ ಕೊಡುಗೆ ನೀಡಿ ಚಿತ್ರದ ಭಾಗವಾಗಿದ್ದೀರಿ. ನಿಮ್ಮ ಬ್ಯಾಂಕ್ ಮಾಹಿತಿ ಕಳುಹಿಸಿದರೆ ಬಹುಮಾನದ ಮೊತ್ತ 1 ಲಕ್ಷ ರೂ. ಗಳನ್ನು ಹಾಕುವುದಾಗಿ ತಿಳಿಸಿದ್ದಾರೆ.
Hey Rohit, thank u very much for gifting CBN to the unit of LAKSHMI’s NTR ..I will also put a credit thanking u in the beginning of the film ..For now please msg me ur account details for me to send you,your reward of 1 lakh #NTRTRUESTORY pic.twitter.com/EFRlWssG2A
— Ram Gopal Varma (@RGVzoomin) October 13, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv