ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ಹಳ್ಳ ಹಿಡಿದಿದ್ದ ಕೈ ಸರ್ಕಾರದ ಕನಸಿನ ಕೂಸು ಇಂದಿರಾ ಕ್ಯಾಂಟಿನ್‍ಗೆ ಈಗ ಮತ್ತೆ ಮರುಜೀವ ಬಂದಿದೆ. ನಯಾ ಲುಕ್ ನಲ್ಲಿ ಮತ್ತೆ ಬಡವರ ಫೈವ್ ಸ್ಟಾರ್ ಹೋಟೆಲ್ ಇಂದಿರಾ ಕ್ಯಾಂಟಿನ್ (Indira Canteen) ಲಕ ಲಕ ಅನ್ನಲಿದೆ.
ಕಾಂಗ್ರೆಸ್ ಸರ್ಕಾರ (Congress Government) ಬಂದ ಬಳಿಕ ಈಗ ಇಂದಿರಾ ಕ್ಯಾಂಟಿನ್ ಗೆ ಹೊಸ ಲುಕ್ ಬರಲಿದೆ. ಬಿಜೆಪಿ (BJP) ಅವಧಿಯಲ್ಲಿ ದುಡ್ಡು ಬಿಡುಗಡೆಯಾಗದೇ ನಿರ್ವಹಣೆ ಸಮಸ್ಯೆಯಿಂದ ಇಂದಿರಾ ಕ್ಯಾಂಟಿನ್ ಅವಸಾನದತ್ತ ಹೋಗಿತ್ತು. ಆದರೆ ಈಗ ಕೈ ಸರ್ಕಾರ ಅಸ್ತಿತ್ವಕ್ಕೆ ಬರ್ತಾ ಇದ್ದಂತೆ ಬೆಂಗಳೂರಿನಲ್ಲಿ 198 ವಾರ್ಡ್ ನಲ್ಲಿಯೂ ಇಂದಿರಾ ಕ್ಯಾಂಟಿನ್ ಗೆ ಮತ್ತೆ ಜೀವ ಬರಲಿದೆ. ಇದನ್ನೂ ಓದಿ: CSKvsGT: ಜಿಯೋಸಿನಿಮಾದಲ್ಲಿ ಏಕಕಾಲಕ್ಕೆ 2.5 ಕೋಟಿ ಜನರಿಂದ ವೀಕ್ಷಣೆ – ಎಲ್ಲಾ ದಾಖಲೆಗಳು ಉಡೀಸ್
ಒಂದು ತಿಂಗಳೊಳಗೆ ಹೊಸ ಟೆಂಡರ್ ಇಂದಿರಾ ಕ್ಯಾಂಟಿನ್ ರೀ ಒಪನ್ ಆಗಲಿದೆ. ಈ ಬಾರಿ ಕಳೆದ ಬಾರಿಗಿಂತಲೂ ವೆರೈಟಿ ವೆರೈಟಿ ಫುಡ್ (Indira Canteen Food) ಮೆನು ಇರಲಿದೆ. ಪೌಷ್ಟಿಕಾಂಶವುಳ್ಳ ತಿಂಡಿ ಕೊಡುವಂತೆ ಸೂಚನೆ ನೀಡಲಾಗಿದೆ. ರಾತ್ರಿಯೂಟಕ್ಕೂ ಡಿಮ್ಯಾಂಡ್ ಮೇಲೆ ಊಟ ಪೂರೈಕೆ ಮಾಡಲಾಗುತ್ತದೆ. ಐದು ರೂಪಾಯಿಂದ ಹತ್ತು ರೂಪಾಯಿಗೆ ದರ ಏರಿಕೆ ಮಾಡಲಾಗುತ್ತಿದ್ದು, ತಿಂಡಿ ಕ್ವಾಂಟಿಟಿ ಜಾಸ್ತಿ ಇರಲಿದೆ.
ಇಂದಿರಾ ಕ್ಯಾಂಟಿನ್ ನಲ್ಲಿ ಈ ಹಿಂದಿನ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ಸದ್ಯ ಬಿಬಿಎಂಪಿ ಸೈಲೆಂಟ್ ಆಗಿದೆ. ಬೆಂಗಳೂರಿನಲ್ಲಿ 120-130 ಕ್ಯಾಂಟಿನ್ ಗಳು ಸುಸ್ಥಿತಿಯಲ್ಲಿದೆ. ಆದರೆ ಅಡುಗೆ ಮನೆಗೆ ಹೊಸ ಸಾಮಾಗ್ರಿಗಳು ಬೇಕು ಎನ್ನುವ ನಿರ್ಧಾರಕ್ಕೆ ಬಿಬಿಎಂಪಿ ಬಂದಿದೆ.