ಬೆಂಗಳೂರು: ಪರಿಶಿಷ್ಟ ಜಾತಿ ಹಾಸ್ಟೆಲ್‌ಗಳಲ್ಲಿ ಪ್ರತಿ ವಿದ್ಯಾರ್ಥಿಯ ಮಾಸಿಕ ಭೋಜನ ವೆಚ್ಚ ಜಾಸ್ತಿ ಮಾಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಚಿವ ಬೋಸರಾಜು (Bosaraju) ಸಿಎಂ ಸಿದ್ದರಾಮಯ್ಯ (CM Siddaramaiah) ಪರವಾಗಿ ಭರವಸೆ ನೀಡಿದ್ದಾರೆ.ಇದನ್ನೂ ಓದಿ: ಮಾತಾ ಮಾಣಿಕೇಶ್ವರಿ ದೇವಸ್ಥಾನವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ – ಹೆಚ್.ಕೆ.ಪಾಟೀಲ್
Advertisement
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ ಪ್ರಶ್ನೆಗೆ ಉತ್ತರಿಸಿದ ಅವರು, ಸಿಎಂ ಪರವಾಗಿ ನಾನು ಉತ್ತರ ನೀಡುತ್ತೇನೆ. ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗೆ ಪ್ರವೇಶ ಕಲ್ಪಿಸಲಾಗುತ್ತದೆ. ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯಲ್ಲಿ ಒಟ್ಟು 270 ಮೆಟ್ರೋ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿವೆ. 2024-25ನೇ ಸಾಲಿನಲ್ಲಿ 29,867 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಒಟ್ಟಾರೆ 23,939 ಮಂಜೂರಾತಿ ಸಂಖ್ಯೆಗೆ ಎದುರಾಗಿ 5,929 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪ್ರವೇಶ ಕಲ್ಪಿಸಲಾಗಿದೆ. ಭೋಜನಾ ವೆಚ್ಚ ಮೊದಲು ಮಾಸಿಕ ಒಂದು ವಿದ್ಯಾರ್ಥಿಗೆ 1,750 ರೂ. ಕೊಡಲಾಗುತ್ತಿತ್ತು. ಈಗ ಅದನ್ನ 100 ರೂ.ಗೆ ಹೆಚ್ಚಳ ಮಾಡಲಾಗಿದ್ದು, 1,850 ರೂಪಾಯಿ ಕೊಡಲಾಗ್ತಿದೆ. ಹೆಚ್ಚುವರಿಯಾಗಿ ಭೋಜನ ವೆಚ್ಚ ಕೊಡುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Advertisement
ಇದಕ್ಕೂ ಮುನ್ನ ಪ್ರಶ್ನಿಸಿದ್ದ ಡಿ.ಟಿ.ಶ್ರೀನಿವಾಸ್, ರಾಜ್ಯದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶ ದೊರೆಯುತ್ತಿಲ್ಲ. ಇದರಿಂದ ಎಸ್‌ಸಿ ಮಕ್ಕಳಿಗೆ ಹಾಗೂ ಗ್ರಾಮೀಣ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ಹೆಚ್ಚುವರಿ ಹಾಸ್ಟೆಲ್ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು. ಹಾಸ್ಟೆಲ್‌ಗಳಲ್ಲಿ ಪ್ರತಿ ವಿದ್ಯಾರ್ಥಿಗಳಿಗೆ ಕೊಡುವ ಊಟದ ಖರ್ಚು ಕೂಡಾ ಕಡಿಮೆಯಿದೆ. ಜೈಲಿನ ಖೈದಿಗಳಿಗೆ ಭೋಜನಾ ವೆಚ್ಚ ಜಾಸ್ತಿ ಇದೆ. ಎಸ್ ಮಕ್ಕಳಿಗೆ ಹಾಸ್ಟೆಲ್ ಭೋಜನ ದರ ಜಾಸ್ತಿ ಮಾಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಅಂತರಾಷ್ಟ್ರೀಯ ಮಹಿಳಾ ದಿನದಿಂದ ಮಹಿಳಾ ಗ್ರಾಮಸಭೆಗಳಿಗೆ ಚಾಲನೆ: ಪ್ರಿಯಾಂಕ್ ಖರ್ಗೆ